ಪುಟ:ವೇಣೀಸಂಹಾರ ನಾಟಕಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

25 ದ್ವಿತೀಯಾಂಕ್ ಸಿಂದೇನು ಪ್ರಯೋಜನ? ಕರ್ಣನ ಬಾಣಗಳಿಂದ ತಾನೆ ಏನು ಪ್ರಯೋಜನ? ಎಲೈ ಭೀರುವೇ, ನೂರು ಜನ ಸಹೋದರರೊಡನೆ ಕೂಡಿಕೊಂಡಿರುವ ನನ್ನ ಬಾಹುವನ್ನು ಆಶ್ರಯಿಸಿಕೊಂಡಿರುವ ನೀನು ದುರೊಧನಕೇಸರಿಯ ಮಹಿಷಿಯಾಗಿದ್ದು ಹೆದರಬೇಕೇ? ಭಾನುಮತಿ :ಆರಫುತ್ರನೇ, ನೀವು ಸನ್ನಿಹಿತರಾಗಿರುವಾಗ ನನಗೆ ಭಯಕ್ಕೆ ಕಾರ ಣವೇನಿರುವುದು ? ಆದರೆ ಆರವತ್ರನ ಮನೋರಥವು ಪೂರ್ಣವಾಗಬೇ ಕೆಂದು ಆಸೆಪಡುವೆನು, ದುರೊಧನ :- ಪ್ರಿಯಳೇ, ಪ್ರೀತಿಪಾತ್ರಳಾದ ನಿನ್ನೊಂದಿಗೆ ಸಬೀಜನರಿಂದ ಕೂಡಿ ಸೈಜ್ಞೆಯಾಗಿ ವಿಹರಿಸುವುದೇ ನನ್ನ ಮನೋರಥವು, ನೋಡು, ಪ್ರೇಮ ದಿಂದ ನಿಶ್ಚಲವಾದ ಕಣ್ಣಿನಿಂದ ಕೂಡಿ ಕಮಲದ ಕಾಂತಿಯನ್ನು ಧಿಕ್ಕರಿ ಸುತ್ತಾ, ಮಂದಹಾಸದಿಂದ ಕೂಡಿರುವ ನಿನ್ನ ಮುಖಭ೦ಗ್ರವನ್ನೂ ಮತ್ತು ಸಿದನಧಾರಣೆಯಿಂದ ಲಾಕ್ಷಾರಸದ ಗುರುತಿಲ್ಲದೆ, ಸ್ವಭಾವ ಮಧುರ ವಾದ ನಿನ್ನ ಅಧರವನ್ನೂ ಮೌನಮಾಡುವ ಆಸೆಯೊಂದು ಹೊರತು ದುಯ್ಯೋಧನನಿಗೆ ಇನ್ನು ಯಾವುದು ತಾನೆ ದುರ್ಲಭವು ? (ತೆರೆಯಲ್ಲಿ ಕಲಕಲಧ್ವನಿಯಾಗುವುದು, ಎಲ್ಲರೂ ಕೇಳುವರು.) ಭಾನುಮತಿ :-( ರಾಜನನ್ನು ಭಟ್ಟಿಯಾಗಿ ಹಿಡಿದುಕೊಂಡು) ಆರಪುತ್ರನೇ ಕಾಪಾಡು, ಕಾಪಾಡು. ದುಕ್ಕೂ ಧನ :-(ಸುತ್ತಲೂ ನೋಡಿ) ಪ್ರಿಯಳೇ, ಏಕೆ ಗಾಬರಿಪಡುವಿ, ಸುಂಟ ರಗಾಳಿಯು ಬೀಸುತ್ತಿದೆ. ಹುಲ್ಲು ಕಡ್ಡಿಗಳೆಲ್ಲವನ್ನೂ ಸೇರಿಸಿಕೊಂಡು, ಧೂಳುಗಳನ್ನು ದಂಡಾಕಾರವಾಗಿ ಆಕಾಶದ ವರೆಗೂ ತೆಗೆದುಕೊಂಡು ಹೋಗುತ್ತಾ, ಮರಗಳ ಕೊಂಬೆಗಳನ್ನು ಒಂದಕ್ಕೊಂದು ಉಟ್ಟು ವಂತೆ ಮಾಡುತ್ತಾ ಮೇಘಧ್ವನಿಯಂತೆ ಗಂಭೀರವಾಗಿ ಧ್ವನಿಮಾಡುತ್ತಿದೆ. ಇದು ಕೈಕೆ ಹೆದರುವಿ? ಸವಿ :-ಈ ಧೂಳು ಕಣ್ಣುಗಳಿಗೆಲ್ಲ ವೂ ಬಿಳುವ ಕಾರಣ, ಇಲ್ಲಿ ಬಹಳ ಕೈಶ ಪಡಿಸುತ್ತಲಿದೆ. ಆದ್ದರಿಂದ ಮಂದಾರ ಪರತದ ಪ್ರಾಸಾದಕ್ಕೆ ದಯ ಮಾಡಬೇಕು.