ಪುಟ:ವೇಣೀಸಂಹಾರ ನಾಟಕಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಸಂಹಾರ ನಾಟಕ ಗುರೊ? ಧನ:-( ತಪ್ಪಲ್ಲಿ ತಾನು ) ಜಯದ್ರಥನ ತಾಯದ, ದುಕ್ಕಳೆಂದು ನಕ ಒಂದಿರುವರೇ?! ಅಭಿಮನ್ನು ವಧದಿಂದ ಕುಪಿತರಾದ ಪಾಂಡವರು ಏನೋ ಕೆಡಕನ್ನು ನಡೆಸಿರಬೇಕು, ಅವರನ್ನು ಒಳಕ್ಕೆ ಕಳುಹಿಸು. ಪ್ರತೀಹಾರಿ:_ಅಪ್ಪಣೆ (ಎಂದು ಹೊರಟುಹೋಗುವನು.) (ಜಯದ್ರಥನ ತಾಯಿಯೂ, ದುಶ್ಚಳೆಯ ಪ್ರವೇಶಿಸಿ ಕಣ್ಣೀರು ಬಿಡುತ್ತ ದುರೊಧನನ ಕಾಲಿನ ಮೇಲೆ ಬೀಳುವರು.) ಜಯದ್ರಥನ ತಾಯಿ:-ಕುರುನಾಥನೆ, ಕಾಪಾಡು! ಕಾಪಾಡು! (ದುಶ್ಯಳೆಯು ಅಳುವಳು.) ದುಕ್ಕೊ ಧನ:-(ಗಾಬರಿಯಿಂದೆದ್ದು) ಮಾತೆಯೇ, ಸೈರಿಸು! ಸೈರಿಸು! ಕಷ್ಟವೇ ನಾಗಿರುವುದು? ಯುದ್ಘಾಂಗಣದಲ್ಲಿ ಅಪ್ರತಿಹತನಾದ ಜಯದ್ರಥನಿಗೆ ಮನಷ್ಟೆ? ಮಾತೆ:ಅನನಗೆಲ್ಲಿ ಕ್ಷೇನು? ದುದ್ಯೋಧನ.ಹಾಗೆಂದರೇನು? ಮಾತೆ:- ದುಃಖದಿಂದ) ಈಗ ಪುತ್ರನ ನಧದಿಂದ ಕುಪಿತನಾದ ಅರ್ಜುನನು ಸರಾಸ್ತಮಯದ ಒಳಗಾಗಿಯೇ ಅವನನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿರುವನು. ದುಯ್ಯೋಧನ:-(ನಗುತ್ತಾ) ಮಾತೆಗೂ, ದುಶ್ಯಳೆಗೂ ಇದೀಗ ಕಣ್ಣೀರಿಗೆ ಕಾರಣ. ಪುತ್ರ ಶೋಕದಿಂದ ಹುಚ್ಚು ಹಿಡಿದು ಹರಟಿದ ಅರ್ಜುನನ ಪ್ರಲಾಸದಿಂದ ಈ ಅವಸ್ಥೆ. ಹೆಂಗಸರ ಮಧ್ಯಕ್ಕೇನು ಹೇಳೋಣ? ಮಾತೆ ದುಃಖಪಡ ಬೇಡ, ದುಶ್ಯಳೆ ವತ್ಸೆ, ಏಕೆ ಕಣ್ಣೀರು ಹಾಕುವಿ? ದುದ್ಯೋಧನನ ಬಾಹು ವಿನಿಂದ ರಕ್ಷಿತನಾದ ಮಹಾರಥ ಜಯದ್ರಥನಿಗೆ ವಿಪತ್ತನ್ನುಂಟುಮಾಡುವು ದಕ್ಕೆ ಅರ್ಜುನನಿಗೆ ಶಕ್ತಿ ಎಲ್ಲಿರುವುದು? ಮಾತಿ:ಅಪ್ಪಾ! ಪುತ್ರಾದಿಗಳ ವಧದಿಂದ ಹೆಚ್ಚಿದ ಕೋಪವುಳ್ಳ ವೀರರು ತಮ್ಮ ಶರೀರವನ್ನೂ ಲಕ್ಷ್ಯ ಮಾಡದೆ ಪರಾಕ್ರಮವನ್ನು ತೋರುವರು. ದುರೊಧನ:-(ಅಪಹಾಸ್ಯ ಮಾಡುತ್ತಾ) ಹೌದು, ಪಾಂಡವರ ಕೋಪ ಸತ್ವ ಪ್ರಸಿದ್ಧವಾಗಿದೆ. ನೋಡು, ನನ್ನ ಅಪ್ಪಣೆಯಿಂದ ದುಶ್ಯಾಸನನು ಗೌಸ