ಪುಟ:ವೇಣೀಸಂಹಾರ ನಾಟಕಂ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

36 ವೇಣೀಸಂಹಾರ ನಾಟಕ ಕೂಡ ಅದಕ್ಕೆ ಅನುಗುಣವಾದ ಪರಾಕ್ರಮದಿಂದ ಶೋಕಸ್ತಮುದ್ರ ವನ್ನು ದಾಟಿ ಸುಖಿಯಾಗು. ಅಶ್ವತ್ಥಾಮ:-(ಕಣ್ಣೀರು ಬಿಡುತ್ತಾ) ಆರನೇ, ಅಂತಹ ಭುಜವೀರದಿಂದಲೂ, ಅಗ್ನಪ್ರಭಾವದಿಂದಲೂ, ಸಮುದ್ರದಂತಿದ್ದ ನನ್ನ ತಂದೆಯು ಹೇಗೆ ಅಸ್ತ್ರ ನಾದನು, ಹೆಳು, ದೊಡ್ಡ ಗದೆಯುಳ್ಳ ಭೀಮಸೇನನಿಂದ ಭೀಮಪ್ರಿಯ ನಾದ ನನ್ನ ತಂದೆಯು ಗುರುದಕ್ಷಿಣೆಯನ್ನು ಹೊಂದಿದನೋ ಸಾರಥಿ:ಕುಮಾರನೇ, ಹಾಗಾಗಲಿಲ್ಲ, ಅಶ್ವತ್ಥಾಮ:-ಶಿಷ್ಯರಲ್ಲಿ ದಯೆಯುಳ್ಳವನಾದಕಾರಣ, ಅರ್ಜುನನು ನೀತಿ ತಪ್ಪಿ ಕೊಂದನೊ? ಸಾರಥಿ:-ಇದು ಹೇಗಾಗುವುದು? ಅಶ್ವತ್ಥಾಮ:-ಕೃಷ್ಣನ ತೀಕ್ಷ್ಮವಾದ ಚಕ್ರಾಯುಧದ ಅಂಚಿಗೆ ಸಿಲುಕಿದನೋ? ಸಾರಥಿ:-ವತ್ಸನೆ, ಅದೂ ಆಗಲಿಲ್ಲ. ಅಶ್ವತ್ಥಾಮ.-ಇವರು ಹೊರತು ಇನ್ಯಾರಿಂದಲೂ ನನ್ನ ತಂದೆಗೆ ವಿಪತ್ತನ್ನು ಊಹಿಸಲಾರೆ. ಸಾರಥಿ:ಮಾಸ್ತ್ರಪಾಣಿಯಾದ ಕುಪಿತನಾದ ನಿನ್ನ ತಂದೆಗೆ ನೀನು ಹೇಳಿದ ಈ ಮೂವರೂ ಯುದ್ಧದಲ್ಲಿ ಸಾಟಿಯಾಗಲಾರರು, ದುಃಖವು ಹೆಚ್ಚಿ ನಿನ್ನ ತಂದೆಯು ಶಸ್ತ್ರ ತ್ಯಾಗವನ್ನು ಮಾಡಿದಾಗ ತುವು ಈ ಘೋರಕೃತ್ಯವನ್ನು ಮಾಡಿದನು. ಅಶ್ವತ್ಥಾಮ:ಶೋಕವು ಹೆಚ್ಚುವುದಕ್ಕೂ, ಶಸ್ತ್ರ ತ್ಯಾಗಕ್ಕೂ ಕಾರಣವೇನು? ಸಾರಥಿ:-ಕುಮಾರನಾದ ನೀನೇ ಕಾರಣನು. ಅಶ್ವತ್ಥಾಮ:-.ಅದು ಹೇಗೆ ನಾನು? ಸಾರಥಿ:-(ಕಣ್ಣೀರು ಬಿಡುತ್ತಾ) ಕೇಳು, ಧರ್ಮರಾಯನು 'ಅಶ್ವತ್ಥಾಮಾ ಹತಃ' ಎಂದು ಘಟ್ಟಿಯಾಗಿ ಹೇಳಿ, ಮೆಲ್ಲಗೆ 'ಶೇತೆ ಗಜಃ' ಎಂದು ಹೇಳಿದನು. ಅವನು ಸತ್ಯವಾಕ್ಯವುಳ್ಳವನು. ಆದುದರಿಂದ ಆ ಮಾತನ್ನು ಕೇಳಿ, ಆ ಧರ ರಾಯನ ಮೇಲಿನ ನಂಬಿಕೆಯಿಂದ ಮಗನ ಮೇಲೆ ಹೆಚ್ಚಾದ ಪ್ರೀತಿಯುಳ್ಳ