ಪುಟ:ವೈಶಾಖ.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೬ ವೈಶಾಖ ಮೂರು ತಿಂಗಳ ಹಿಂದೆಯೇ ಜಾನಕಿ ಮೈನೆರೆದಿದ್ದರೂ ಸಾತು ಆ ವಿಷಯವನ್ನು ಊರಿನವರಿಂದ ಮುಚ್ಚಿಟ್ಟಿದ್ದಳು. ಆಗಲೆ ಹತ್ತಿರದ ಸಂಬಂಧಿಕರ ಒಂದು ವರೆ ವರ್ಷದ ಹಿಂದೆಯೇ ಬಂದಿದ್ದರೂ ಆ ಹುಡುಗಿನ ಮನೆಯವರು ಬಡವರು, ತನ್ನ ಮಗಳು ಲಕ್ಷಣವಾಗಿದ್ದಾಳೆ, ಸ್ವಲ್ಪ ತಡೆದರೆ ಹಣಕಾಸಿನಲ್ಲಿ ಇನ್ನೂ ಉತ್ತಮವಾದ ವರ ಬಂದೇ ಬರುತ್ತದೆಂದು ನಂಬಿ, ಆ ವರನನ್ನು ತಿರಸ್ಕರಿಸಿದ್ದಳು ಸಾವಿತ್ರಿ.... ಅಲ್ಲದೆ ಮಗಳು ಇಷ್ಟು ಜಾಗ್ರತೆ ಮೈನೆರೆಯುವಳೆಂದೂ ಅವಳು ಎಣಿಸಿರಲಿಲ್ಲ. ಇನ್ನೊಂದೆರಡು ವರ್ಷಗಳಾದರೂ ತಡೆಯುತ್ತದೆ. ಅಷ್ಟರಲ್ಲಿ ಯಾವುದಾದರೂ ಉತ್ತಮ ಸಂಬಂಧ ಕುದುರಿಸಿ ಲಗ್ನ ಮಾಡುವುದು ಎಂದೂ ಎಣಿಕೆಹಾಕಿದ್ದಳು. ಆದರೆ ಲೆಕ್ಕಾಚಾರ ತಪ್ಪಿ, ಮಗಳು ಮೈನೆರೆದು ನಿಂತಾಗ ಅದನ್ನು ಮುಚ್ಚಿ ಮುಂದಿನ ಸಾಲಿಗೆ ಲಗ್ನ ಮಾಡಿಬಿಡುವುದೆಂದು ಲೆಕ್ಕಹಾಕಿದಳು. ಈಗ ಅದು ಏರುಪೇರಾಗಿ ಸಾವಿತ್ರಿಗೆ ದಿಕ್ಕೇತೋಚದಂತಾಗಿತ್ತು. - ಸಾವಿತ್ರಿ, ಮಗಳು ದೊಡ್ಡವಳಾದ ವಿಷಯವನ್ನು ಊರಿನವರಿಂದ ರಹಸ್ಯವಾಗಿಡಲು ಕೆಲಕಾಲ ಯಶಸ್ವಿಯಾದರೂ, ಶೇಷನ ಮುಖೇನ ಅವನ ಪೋಲಿಗುಂಪಿಗೆ ಇದು ತಿಳಿಯಲು ಬಹುದಿನ ಬೇಕಾಗಲಿಲ್ಲ. ಆ ಗುಂಪಿನಲ್ಲಿದ್ದ ಕೆಲವು ಹುಡುಗರಿಗೆ ಮೀಸೆ ಮೊಳೆಯುತ್ತಿದ್ದು ಅದರಂತೆಯೆ ಹೆಣ್ಣಿನ ಬಗ್ಗೆ ಕುತೂಹಲವೂ ಬೆಳೆಯತೊಡಗಿತ್ತು. ಇಂಥ ದುಷ್ಟ ಕುತೂಹಲವೇ ಈ ಅನರ್ಥಕ್ಕೆಲ್ಲ ಕಾರಣ ಎಂದು ರುಕ್ಕಿಣಿ ತನ್ನಲ್ಲಿ ತರ್ಕಿಸಿದ್ದಳು. ಇದರ ಜೊತೆಗೆ ಯಾವಾಗಲೂ ಜಾನಕಿಯೊಡನೆ ತಪ್ಪದೆ ಶಾಲೆಗೆ ಹೋಗುತ್ತಿದ್ದ ಗಿರಿಜಮ್ಮನ ಮಗಳು ಸುಮಿಗೆ ಕಳೆದೆರಡು ದಿನಗಳಿಂದಲೂ ಜ್ವರ ಬಂದು ಹಾಸಿಗೆ ಹಿಡಿದದ್ದು, ಜಾಕಿಯ ದುರ್ದೈವ! ಆ ದಿವಸ ಮನೆಯಲ್ಲಿ ಯಾರೂ ಊಟ ಮಾಡಲಿಲ್ಲ-ಶೇಷ ಒಬ್ಬನನ್ನು ಉಳಿದು!... ಮನೆಗೆ ಸತ್ತ ಮನೆಯ ಛಾಯೆ ಬಡಿದಿತ್ತು. ತಾನೊಬ್ಬನೇ ಊಟ ಮಾಡುವಾಗ ಮನೆಯವರೆಲ್ಲರಿಗೂ ಈ ದಿನ ಏನಾಗಿದೆ, ಎಂದು ತಿಳಿದುಕೊಳ್ಳುವ ಚಪಲ ಶೇಷನಿಗೆ! ಆದರೆ ಅವನಿಗೆ ಗುಟ್ಟು ಎಂದು ಹೇಳುವುದೂ ಒಂದೆ, ಪತ್ರಿಕೆಗಳಿಗೆ ಜಾಹೀರಾತು ಕೊಡುವುದೂ ಒಂದೆ!- ಎಂದು ಶ್ಯಾಮ ಎಚ್ಚರಿಕೆ ಕೊಟ್ಟಿದ್ದರಿಂದ, ಜಾನಕಿ ಹುಷಾರು ತಪ್ಪಿದ್ದಾಳೆ, ವಿಪರೀತ ಜ್ವರ ಬಂದಿದೆ, ಎಂದು ತಿಳಿಸಿದೆವು... ಶೇಷನಿಗೆ ಮನೆಯಲ್ಲಿ ಇದ್ದ ಆಸಕ್ತಿಯೆಲ್ಲ ತಾನು ತಿಂಡಿ, ಊಟ ಮುಗಿಸುವವರೆಗೆ ಮಾತ್ರ ಅದು ಒಮ್ಮೆ ಮುಗಿಯಿತೆಂದರೆ, ಆ ಮನೆಗೂ ಅವನಿಗೂ ಯಾವ ಸಂಬಂಧವೂ ಇದ್ದಂತೆ ತೋರುತ್ತಿರಲಿಲ್ಲ. ಶೇಷನಲ್ಲಿ ಮನೆಯ