ಪುಟ:ವೈಶಾಖ.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೯೫. ಕಠಿಣವಾಗಿತ್ತು.... 'ದಾವಾಯ್ತದೆ, ವಸಿ ಮಜ್ಜಿಗೆ ಕ್ವಡಿ” ಎಂದು ಕೇಳಿ ಲಕ್ಕ ಮಾತು ನಿಲ್ಲಿಸಿದ. ಮಜ್ಜಿಗೆ ತರಲು ರುಕ್ಕಿಣಿಯೆ ಎದ್ದು ಹೋಗಿದ್ದಳು. “ಗಟ್ಟಿ ಮಜ್ಜಿಗೆ ಬ್ಯಾಡಿ. ಈರುಳ್ಳಿ ಕತ್ತಿರಿಸಾಕಿ, ವಸಿ ಉಪ್ಯೂವೆ ಕದ್ರಿ, ಕಣ್ಣೀರಂಗೆ ಮಜ್ಜಿಗೆ ಮಾಡಿಕಂಬನ್ನಿ, ಫಕತ್ತಾಗಿ ಒಂದು ಚೊಂಬು ಮಜ್ಜಿಗೆ ತರಬೇಕು” ಎಂದಿದ್ದ. ರುಕ್ಕಿಣಿ ಅವನು ಬಯಸಿದಂತೆಯೇ ನೀರು ಮಜ್ಜಿಗೆ ತಯಾರಿಸಿ, ಅದಕ್ಕೆ ಅವನು ಹೇಳದಿದ್ದ ಕರಿಬೇವಿನ ಸೊಪ್ಪು ಹಸಿಶುಂಠಿಗಳನ್ನು ಸೇರಿಸಿದ್ದಳು. “ಮಜ್ಜಿಗೆ ವೈನಾಗದೆ, ಅಮ್ಮಾರೆ”- ಕೃತಜ್ಞತೆ ಸೂಚಿಸುತ್ತ, ಸಂತೋಷದಿಂದ ಕುಡಿಯುತ್ತಿದ್ದ ಲಕ್ಕ, ರುಕ್ಕಿನಿಯೂ ಬೇಸರಪಡದೆ, ದೊನ್ನೆಗೆ ತಾನು ಸುರಿದ ಮಜ್ಜಿಗೆಯನ್ನು ಅವನು ಖಾಲಿ ಮಾಡಿದಂತೆ ಪುನಃ ಸುರಿತು ಭರ್ತಿ ಮಾಡುತ್ತಿದ್ದಳು. ಹೀಗೆ ಸಂತೋಷವಾಗಿ ಊಟ ಮಾಡುವವರಿಗೆ ಉಣಬಡಿಸುವುದೆಂದರೆ ರುಕ್ಕಿಣಿಗೆ ಬಲು ಪ್ರೀತಿ, ತನ್ನ ಗಂಡನೂ ಲಕ್ಕನಂತೆ ಊಟದಲ್ಲಿ ಅಚ್ಚುಕಟ್ಟು, ಊಟ ಮಾಡುವಾಗ, ಅದು ಚೆನ್ನಿಲ್ಲ, ಇದು ಚೆನ್ನಿಲ್ಲ' ಎಂದು ಕೆಲವರು ಮಾಡಿದ ಅಡಿಗೆಯನ್ನು ಹೀಗಳೆಯುವಂತೆ, ಅವರು ಎಂದೂ ಹೀಗಳೆದವರಲ್ಲ, ತೃಪ್ತಿಯಿಂದ, ಪ್ರೀತಿಯಿಂದ ಎಲೆಯ ಮೇಲೆ ಬಡಿಸಿದುದನ್ನು ದೇವರ ಪ್ರಸಾದವೆನ್ನುವಂತೆ ಸ್ವೀಕರಿಸುತ್ತಿದ್ದರು... ಲಕ್ಕೆ ತನ್ನ ಹೇಳಿಕೆಯಂತೆ ಒಂದು ಚೆಂಬು ಮಜ್ಜಿಗೆಯನ್ನೆ ಕುಡಿದಿದ್ದ. ಮಜ್ಜಿಗೆ ಕುಡಿದು ದಾಹ ಪರಿಹಾರವಾದ ಬಳಿಕ, ತನ್ನ ನಿರೂಪಣೆಯನ್ನು ಮುಂದುವರಿಸಿದ್ದ: ಸುಶೀಲತೆ ದೈವಾಧೀನಳಾದ ಸಂಜೆಯೇ ಕ್ರಿಯಾದಿಗಳಿಗೆ ನೆಂಟರಿಷ್ಟರನ್ನು ಕರೆಸಬೇಕೆಂದು ಮಾವನವರ ಇರಾದೆಯಂತೆ. ಆದರೆ ಗತಿಸಿದ ಗಂಡ ಮನೆವರಿಗೂ ಸುಶೀಲತೆಗೂ ಬಾಂಧವ್ಯ ಕಡಿದು ಹೋಗಿ ಬಹುದಿನಗಳಾದ ಕಾರಣ, ಅವಳ ಗಂಡನ ಮನೆಯವರು ಯಾರೂ ಕರೆದೂರು ಬರುವಂತಿರಲಿಲ್ಲ. ನಾವು ಇರುವುದಂತೂ ಬಹಳ ದೂರದ ಊರಾದ ರುದ್ರಪಟ್ಟಣದಲ್ಲಿ. ನಮಗೋಸ್ಕರ ಶವವನ್ನು ಎರಡು ದಿನಗಳಾದರೂ ದಹನ ಮಾಡದೆ ಹಾಗೆಯೇ ಇಡಬೇಕಾಗುತ್ತಿತ್ತು. ಆದರೆ ಈ ರೀತಿ ವರ್ತಿಸಿದರೆ ಶಾಸ್ತ್ರಕ್ಕೆ ವಿರೋಧ, ತಂಗಳು ಹೆಣ ಆಗುತ್ತದೆ, ಎಂದು ಕೇರಿಯ ಬ್ರಾಹ್ಮಣರು ಮಾವನವರ ಮೇಲೆ ಒತ್ತಾಯ ಹೇರಲಾರಂಭಿಸಿದರಂತೆ. ಆದರೆ ಬ್ರಾಹ್ಮಣ ಗುಂಪಿನ ಈ ಒತ್ತಾಯದ ಹಿಂದಿದ್ದ ಪ್ರಬಲವಾದ ಕಾರಣವೇ ಬೇರೆ. ಹೆಣವನ್ನು ಸುಟ್ಟು ಗತಿ ಕಾಣಿಸುವವರೆಗೆ ಅವರಲ್ಲಿ ಅನೇಕರು ನೀರನ್ನು ಸಹ ಬಾಯಿಗೆ ಸೋಕಿಸುವಂತಿರಲಿಲ್ಲ.... ರುಕ್ಕಿಣಿ ಮನಸ್ಸಿನಲ್ಲೇ ನಕ್ಕಳು. ತನ್ನ ಗಂಡ ಸತ್ತಾಗ, ತನ್ನ ತಲೆ ಬೋಳಿಸದೆ,