________________
೯೮ ವೈಶಾಖ “ಈಗ ನಾವು ಎಲ್ಲ ಏರ್ಪಾಡು ಮಾಡಿ ಹೊರಟು, ದರುಮನಳ್ಳಿ ಸೇರಲು ಮಧ್ಯರಾತ್ರಿಯೇ ಅಗತ್ತೆ. ದಾರಿಯಲ್ಲಿ ದರೋಡೋಕಾರರ ಅಪಾಯ ಇದೆ ಎಂದು ಲಕ್ಕ ಹೇಳುವ ಮಾತನ್ನು ಯಾರೂ ತೆಗೆದುಹಾಕುವಂತಿಲ್ಲ. ಈ ದಾರಿಯಲ್ಲಿ ರಾತ್ರಿವೇಳೆ ಪ್ರಯಾಣ ಹೊರಟ ಗಾಡಿಗಳನ್ನು ಕಳ್ಳರು ಅಡ್ಡ ಹಾಕಿದ ಪ್ರಕರಣಗಳು ಆಗಾಗ ಜರುಗುತ್ತಲೇ ಇವೆ. ಎರಡು ತಿಂಗಳಿಗೊ ಮೂರು ತಿಂಗಳಿಗೊ ಒಂದು ಸರ್ತಿ ಇಂಥ ಪ್ರಕರಣ ನಡೆದು ರಾತ್ರೆ ಪ್ರಯಾಣಕ್ಕೆ ನಮ್ಮ ಜನ ಹೆದದಾರೆ. ಆದ್ದರಿಂದ ಬೆಳಿಗ್ಗೆ ಹೋಗೋದೆ ವಾಸಿ. ಏನಂತೀಯ ಸಾತು?” ಅತ್ತಿಗೆ ಮನಸ್ಸಿನಲ್ಲಿ ಏನಾದರೂ ಬಂದರೆ ತುದಿಗಾಲಿನ ಆತುರ. “ಹೋಗೀಂದ್ರೆ ಕೊತ್ತಿ ಸೀತ ಹಾಗೆ ನೀವು ಏನೇನೋ ಹೇಳಿ ನನ್ನ ಕೈ ಕಾಲು ಬಿಡಿಸಿದಿರಿ. ನೀವು ಧೈರ್ಯ ಮಾಡಿದ್ರೆ ಲಕ್ಕನೂ ಕೂಡ ಒಪೇ ಒಪ್ಪಿದ್ದ. ಆ ಕಳ್ಳರು ನಮ್ಮ ಹತ್ತಿರ ಏನಿದೆ ಎಂದು ನಮ್ಮ ಮೇಲೆ ಬೀಳ್ತಾರೆ?.... ನೀವು ಬಿಡಿ, ಮಹಾ ಪುಕ್ಕಲು. ನರಿ ಬಂತು ಅಂದರೆ ಹುಲಿ ಬಂತು ಅನ್ನುವ ಜಾತಿ!”.... ಆದರೆ ರುಕ್ಕಿಣಿಗೆ ಒಳಗೇ ಸಂದೇಹ. ಆಶ್ವತ್ಸಣ್ಣ ಸಂಜೆ ಪ್ರಯಾಣಕ್ಕೆ ತಡೆ ಹಾಕಿದ್ದು ಕಳ್ಳಕಾಕರ ಭೀತಿಯಿಂದಲೋ ಅಥವಾ ಈ ಇಳಿಹೊತ್ತಿನಲ್ಲಿ ಕೇವಲ ಒಂದು ಲೋಟ ಕಾಫಿ ಹೀರಿ ಹೊರಟು ಮಧ್ಯರಾತ್ರಿಯಲ್ಲಿ ದರುಮನಳ್ಳಿ ಸೇರಿದರೆ, ಅಂಥ ಆವೇಳೆಯಲ್ಲಿ ಸಾವಿನ ಮನೆಯಲ್ಲಿ ಹೊಟ್ಟೆ ತಾಳ ಹಾಕುತ್ತ ಮಲಗಬೇಕಾಗಬಹುದು ಎಂಬ ಭಯದಿಂದಲೊ!... ಇಷ್ಟಾದರೂ ಅತ್ತಿಗೆಯ ಮಾತು ತಾನೆ ನಡೆಯಬೇಕು ಆ ಮನೆಯಲ್ಲಿ!... ಆದರೆ ಲಕ್ಕನೂ ಸಹ ಅಣ್ಣನ ಮಾತನ್ನೆ ಜೋರಾಗಿ ಸಮರ್ಥಿಸಿದ್ದರಿಂದ, ಅತ್ತಿಗೆ ಗೊಣಗುತ್ತಲೇ ಒಪ್ಪಬೇಕಾಯಿತು... ಬೆಳಿಗ್ಗೆ ಏಳು ಗಂಟೆಗೆ ಹೊರಡಲು ಸಕಲ ಸಿದ್ಧತೆಗಳೂ ಮುಗಿದಿದ್ದವು. ಸುಬ್ಬಾವಧಾನಿಗಳನ್ನು ಒಪ್ಪಿಸಿಯಾಗಿತ್ತು. ಮನೆಯ ಬೀಗದ ಕೀಲಿಯನ್ನು ಸುಬ್ಬಾವಧಾನಿಗಳ ಹಿರಿಮಗ ಸುಬ್ಬರಾಮುವಿನ ವಶಕ್ಕೂ ಕೊಟ್ಟದ್ದಾಯಿತು. ಇನ್ನೇನು ಹೊರಡಬೇಕು ಎನ್ನುವಾಗ ಅವರ ಮಗ ಶೇಷ ತಾನು ರುದ್ರಪಟ್ಟಣದಲ್ಲಿ ಉಳಿಯುವುದಾಗಿ ರಂಬಾಟ ಮಾಡಿದ. ಮಗಳು ಕೆಡಲು ತನ್ನ ಪೋಲಿ ಸ್ನೇಹಿತರಿಗೆ ಜಾನಕಿ ಮೈನೆರೆದ ವಿಚಾರ ತಿಳಿಸಿದ್ದರಿಂದ ಅಲ್ಲವೆ ಎಂಬ ಬೇಗೆ ಸುಡುತ್ತಿದ್ದರೂ ಆ ಸಮಯದಲ್ಲಿ ಅದೇ ಕಾರಣ ಹೇಳಿ ದಂಡಿಸಿದ್ದರೆ ಗುಟ್ಟು ರಟ್ಟಾಗಬಹುದು ಎಂಬ ಭಯದಿಂದ ಸಾವಿತ್ರಿ ಹಿಂದೆ ನಡೆದ ಪ್ರಸಂಗದಲ್ಲಿ ಸುಮ್ಮನಾಗಿದ್ದುಂಟು. ಆದರೆ ಈಗ ಒಳಗೊಳಗೇ ಅವಳನ್ನು ದಹಿಸುತ್ತಿದ್ದ ಕಿಚ್ಚಿಗೆ ಒಂದು ಹೊರದಾರಿ