ಪುಟ:ವೈಶಾಖ.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೦ ವೈಶಾಖ ಅದು ವಂದಿಗೆ ಬತ್ತಾ ಅದೆ- ನಮ್ಮ ಗಾಡಿ ಕೆಳಾಗಡೆ, ಏಡೂ ಚಕ್ರಗಳ ನಡೂಮದ್ಯ ಬೆಳುಗ್ನಲ್ಲಿ ಅದ್ರೆ ನೀವು ಗಡದ್ದಾಗಿ ಬೋನೆ ಆಕ್ಕಿಲ್ಲವಾ?- ಬಯಾರೆ ತಾವಕೆ ಯಾಕಾರು ವೋಗಬೇಕು ಅದು?” ಲಕ್ಕ ಮಾತಾಡುತ್ತಿರುವಂತೆ ಬಂಡಿ, ಗುಡಿಯನ್ನೂ ಗುಡಿ ವಠಾರದವರ ಮನೆಗಳನ್ನೂ ದಾಟುತ್ತಿರುವಾಗ, ಗುಡಿಯ ಹಿಂಭಾಗದಲ್ಲಿ ಕಾಣುವ ಕೋಟೆಯ ಅವಶೇಷಗಳನ್ನೇ ನೋಡುತ್ತ ಆಶ್ವತ್ಥ, - “ಪಿರಿಯಾಪಟ್ಟಣದ ಪಾಳೆಯಗಾರರ ಕಾಲದಲ್ಲಿ ಈ ಊರಿಗೆ ಕೋಟೆ ಕಟ್ಟಿಸಿ ರುದ್ರನಾಯ್ಕ ಅನ್ನೋನು ಇಲ್ಲಿ ಆಳಿದನಂತೆ. ಅವನ ಹೆಸರಿನ ಮೇಲೇ ಈ ಊರಿಗೆ ರುದ್ರಪಟ್ಟಣ ಎಂದು ಹೆಸರು ಬಂದಿತಂತೆ. ಆ ನಾಯಕನ ಕಾಲದಲ್ಲಿ ಈ ಊರು ಎಂಥ ವೈಭೋಗದಿಂದ ಮೆರೆದಿರಬೇಕು. ಅಲ್ಲವೇ?...” ಎಂದಾಗ, “ಈಗ ಈ ಮಾತು ತೆಕ್ಕೊಂಡು ಯಾವ ಪುರಷಾರ್ಥ ಅಂತೀನಿ?” ವೀಳೆಯದೆಲೆಗೆ ಸುಣ್ಣ ಹಚ್ಚುತ್ತ ಸಾವಿತ್ರಿ, “ಅದಿಲ್ಲಿ, ತೋಟದ ವ್ಯವಸ್ಥೆ ಏನು ಮಾಡಿ ಬಂದಿದೀರಿ?- ಆದಾದರೂ ಪ್ರಸ್ತುತಕ್ಕೆ ಬಂದದ್ದು. ಆ ವಿಚಾರ ಹೇಳಿ.” ರಸ್ತೆಗೇ ಕಾಣುತ್ತಿದ್ದ ತಮ್ಮ ತೋಟವನ್ನೇ ನೋಡುತ್ತ ಸಾತು ಕೇಳಿದಳು. - “ಅದನ್ನೆಲ್ಲ ಬಂದೋಬಸ್ತು ಮಾಡಿ ಬಂದಿದೀನಿ, ನೀನು ಏನೂ ತಲೆ ಕೆಡಿಸಿಕೊಳ್ಳಬೇಕಿಲ್ಲ. ಕಾವಲಿಗೆ ಸಾಬೂಲಾಲ್ ಹಾಕಿದೀನಿ, ಅವನಿಗೆ ಎಷ್ಟು ಎಂದು ಮಾತಾಡಿ, ಹೊಸ ಅಡಿಕೆ ಸೊಸಿಗಳಿಗೆ ನೀರು ಹಾಕಲಿಕ್ಕೂ ಏಪಾಡು ಮಾಡಿದೀನಿ. ನಮ್ಮ ಸುಬ್ಬಧಾನಿಗಳೂ ನಮ್ಮ ಪಕ್ಕದ ತೋಟದವರೇ ಆದ್ದರಿಂದ ಬಾಳೆಹಣ್ಣಿನ ಮಾರಾಟವನ್ನೂ ಅವರಿಗೆ ವಹಿಸಿಬಿಟ್ಟಿದೀನಿ.” ಗಾಡಿ ರುದ್ರಪಟ್ಟಣದ ಬಂಡಿ ಹಾದಿಯಿಂದ ಹನ್ಯಾಳು ಬಳಿ ಎಡಕ್ಕೆ ಹೊರಳಿ ದೊಡ್ಡ ಮಾರ್ಗವನ್ನು ಹಿಡಿಯಿತು. ಅಶ್ವತ್ಥನಿಗೆ ಮಾತಿನ ಚಪಲ, ಹನ್ಯಾಳು ದಾಟುತ್ತಿರುವಂತೆ ಹನ್ಯಾಳಿನ ಬಗ್ಗೆ ವಿವರಣೆ ಕೊಡುತ್ತಿದ್ದ: “ಹನ್ಯಾಳು ಅಂದರೆ ಹಸುಳೆಯ ಹಾಲು. ಹಿಂದೆ ಈ ಊರಿನಲ್ಲಿ ಹಾಲು ಮೊಸರು ಧಂಡಿಯಾಗಿದ್ದ ಕಾರಣ ಈ ಗ್ರಾಮಕ್ಕೆ ಈ ಹೆಸರನ್ನು ಇಟ್ಟರಂತೆ.” ಸಾವಿತ್ರಿಗೆ ತಲೆಚಿಟ್ಟು, “ಸಾಕು ನಿಲ್ಲಿಸಿ” ಸಿಡುಕಿ, ಗಂಡನ ಬಾಯಿ ಮುಚ್ಚಿಸಿ, “ರುಕ್ಕು, ನಿಮ್ಮಣ್ಣ ಹಾಡಿದ್ದನ್ನೇ ಹಾಡುವ ಕಿಸಬಾಯಿದಾಸರು. ಇವರ ವರ್ಣನೆ ಕೇಳಿ ಕೇಳಿ ನನ್ನ ಕಿವಿ ಕಿವುಡಾಗಿದೆ ಉಳಿದಿರೋದೆ ನನಗೆ ಪರಮಾಶ್ಚಯ್ಯ!” ಎಂದಳು. ರುಕ್ಕಿಣಿ ನಕ್ಕಿದ್ದಳು. ಅದು ಸದ್ದಿಲ್ಲದ ನಗು. ಗಟ್ಟಿಯಾಗಿ ನಕ್ಕರೆ ಅಣ್ಣನಿಗೆ