ಪುಟ:ವೈಶಾಖ.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೦೧ ನೋವು-ಅತ್ತಿಗೆಯ ಹಾಸ್ಯಕ್ಕೆ ಓಗೊಟು ನಗದಿದ್ದರೆ ಅತ್ತಿಗೆಗೆ ನಿಷ್ಠುರ. ಅಲ್ಲಿಂದ ಮುಂದೆ ತಮ್ಮ ಊರಿನ ಹಾಗೂ ಬಸವಾಪಟ್ಟಣದ ಕೆಲವು ಮನೆಗತನಗಳ ಸುರುಳಿ ಬಿಚ್ಚಿ ಅವನ್ನು ಆದಷ್ಟು ಕೆಟ್ಟದು ಮಾಡಿ ಹರಟಿದಳು ಸಾವಿತ್ರಿ, ರುಕ್ಕಿಣಿಗೆ ವಿಸ್ಮಯ. ತನ್ನ ಪಕ್ಕದಲ್ಲಿ ಕುಳಿತ ಮಗಳು ಜಾನಕಿಯ ದೃಷ್ಟಾಂತವೆ ಇನ್ನೂ ಹಸಿಹಸಿಯಾಗಿರುವಾಗ ಇನ್ನೊಬ್ಬರನ್ನು ಹಳಿಯುವ ದಾಷ್ಟ್ರೀಕ ಅತ್ತಗೆಗೆ ಹೇಗಾದರೂ ಬಂತು? ಎಂಬ ಪ್ರಶ್ನೆ ಉದ್ಭವಿಸಿ, ಉತ್ತರ ಸಿಗದೆ ಅಲ್ಲೇ ಕಮರಿ ಹೋಯಿತು... ಸಾತು ಅತ್ತಿಗೆಯ ರಂಬಾಟದಲ್ಲಿ ರುದ್ರಪಟ್ಟಣವನ್ನು ಬಿಡುವಾಗ ಸುಮಾರು ಎಂಟು ಗಂಟೆಯೇ ಸಂದಿರಬೇಕು. ರಾಮರೂರು, ಹಳಗನಹಳ್ಳಿ ದಾಟಿ ಅವರು ಬೆಟ್ಟದಪುರ ಸೇರುವ ವೇಳೆಗೆ ಮಧ್ಯಾಹ್ನ ಒಂದು ಗಂಟೆಗೂ ಮೀರಿರಬೇಕು. ಅಲ್ಲಿ ಗಾಡಿ ನಿಲ್ಲಿಸಿ, ಎತ್ತುಗಳನ್ನು ಅಟ್ಟಿಕೊಂಡು ಹೋಗಿ ತಾವರೆಕೆರೆಯಲ್ಲಿ ನೀರು ಕುಡಿಸಿ, ಪಕ್ಕದ ಮರದ ತೋಪಿಗೆ ತಂದು ಅವಕ್ಕೆ ಲಕ್ಕ ಹುಲ್ಲು ಹಾಕಿದ್ದ. ಅಷ್ಟರಲ್ಲಿ ಅವರೆಲ್ಲರೂ ಕೆರೆಯಲ್ಲಿ ಕೈಕಾಲು ತೊಳೆದು ಬಂದು ತೋಪಿನಲ್ಲಿ ಅಡಿಕೆಪಟ್ಟೆಯ ಬುತ್ತಿ ಬಿಚ್ಚಿದೆವು. ಮೊದಲು ಅಶ್ವತ್ಥನಿಗೆ ಬಲು ಪ್ರಿಯವಾದ ಅಕ್ಕಿ ರೊಟ್ಟಿ, ಅದಕ್ಕೆ ನೆಂಚಿಕೊಳ್ಳಲು ಕೊಬ್ಬರಿ ಖಾರ, ಹಸುವಿನ ಬೆಣ್ಣೆ- ಇವನ್ನು ಬಾಳೆಯೆಲೆಯ ಮೇಲಿಟ್ಟು ಸಾವಿತ್ರಿ ಎಲ್ಲರಿಗೂ ವಿನಿಯೋಗ ಮಾಡಿದಳು. ತರುವಾಯ ಸಣ್ಣ ಸಣ್ಣ ಈರುಳ್ಳಿಗಳಲ್ಲಿ ಹುಳಿ ಮಾಡಿ ಅದರಲ್ಲಿ ಕಲೆಸಿದ ಅನ್ನ, ಗಟ್ಟಿಮೊಸರಿನಲ್ಲಿ ಕಲೆಸಿದ ಅನ್ನ, ನೆಲ್ಲಿಕಾಯಿ, ಮಾಗಳಿಬೇರು ಉಪ್ಪಿನಕಾಯಿಗಳು ಇವಿಷ್ಟನ್ನೂ ರುಕ್ಕಿಣಿ ಸರಬರಾಜು ಮಾಡಿದ್ದಲು. ಊಟ ಮುಗಿಯುತ್ತಿದ್ದಂತೆ ರಸಬಾಳೆ ಹಣ್ಣುಗಳನ್ನು ಎಲ್ಲರೂ ಸೇವಿಸಿದ್ದಾಯಿತು. ಲಕ್ಕ ಎಲ್ಲರಂತೆ ಅಷ್ಟಿಷ್ಟು ಹುಳಿ ಅನ್ನ ಮೊಸರನ್ನ ಎರಡು ರೊಟ್ಟಿಗಳಿಗೇ ತೃಪ್ತನಾಗಿದ್ದರೆ, ಆಶ್ವತ್ಥ ನಾಲ್ಕು ರೊಟ್ಟಿಗಳನ್ನು ತಿಂದುದಲ್ಲದೆ, ಈರುಳ್ಳಿ ಹುಳಿ ಅನ್ನ ಮೊಸರನ್ನಗಳನ್ನು ಪುಷ್ಕಳವಾಗಿ ಸವಿರಿಸಿ, ದಾರಿಯಲ್ಲಿ ಒಂದು ಚಿಪ್ಪು ರಸಬಾಳೆಹಣ್ಣುಗಳನ್ನೂ ಹೊಟ್ಟೆಯೊಳಗೆ ಇಳಿಸಿದ್ದ! ಲಕ್ಕ ರುಕ್ಕಿಣಿಯ ಬಲಾತ್ಕಾರಕ್ಕೆ ನಾಲ್ಕು ಬಾಳೆಹಣ್ಣು ತಿಂದಿದ್ದ. ಕೆರೆಯ ನೀರಿನಲ್ಲಿ ಈಜಾಡಿ ಬಂದ ಬೊಡ್ಡನ ಯೋಗಕ್ಷೇಮವನ್ನು ರುಕ್ಕಿಣಿಯೇ ನೋಡಿಕೊಂಡಿದ್ದಳು... ಊಟ, ವಿಶ್ರಾಂತಿಗಳಲ್ಲಿ ಮುಕ್ಕಾಲು ಗಂಟೆಯೇ ಕಳೆದುಹೊಗಿತ್ತು. ಸಾವಿತ್ರಿಗೆ ತೋಪು ಬಿಟ್ಟು ಏಳುವ ಮನಸ್ಸೇ ಇರಲಿಲ್ಲ. ಲಕ್ಕ “ಇಲ್ಲಿ ನೀನು ಇಂಗೆ ವೊತ್ತು ಮಾಡ್ತಾ ಕುಂತಿದ್ರೆ ನಾವು ಅಸವಾಳು