ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೪ ವೈಶಾಖ ನೆಗೆಯುತ್ತ ಬೊಡ್ಡ ಏಟಿಗೆ ಸಿಕ್ಕದೆ ತೊಪ್ಪಿಸಿಕೊಳ್ಳುತ್ತಿರುವಂತೆ, ಲಕ್ಕ ಮೊದಲು ತನ್ನಿಂದ ಏಟು ತಿಂದವನಿಗೆ ಮೇಲೆ ಏಳದಂತೆ ಇನ್ನೂ ಒಂದೆರಡು ಏಟು ಬಿಗಿದು, ನಾಯಿಯಿಂದ ಕಚ್ಚಿಸಿಕೊಂಡು ಕೆಳಗೆ ಬಿದ್ದವನ ಮೇಲೆ ಹರಿಹಾಯ್ದ, ದೊಣ್ಣೆಯಲ್ಲಿ ಬಾರಿಸಿ, ಒದ್ದು ಉರುಳಿಸಿದ. ಅಷ್ಟರಲ್ಲಿ ಗಾಡಿಯ ಹಿಂದುಗಡೆ ಬಂದು ನಿಂತ ಇಬ್ಬರಲ್ಲಿ ಒಬ್ಬಾತ ಅಶ್ವತ್ಥನ ಕೈಯಿಂದ ಬೆಳ್ಳಿಯ ನಶ್ಯದ ಡಬ್ಬಿಯನ್ನು ಕಸಿದಿದ್ದ. ಇನ್ನೊಬ್ಬ ಜಾನಕಿಯ ಕೊರಲಿನಿಂದ ಚಿನ್ನದ ಒಂದೆಳೆ ಸರವನ್ನು ಕಿತ್ತಿದ್ದ. ಮುಂದಿನವರಿಬ್ಬರೂ ಪೆಟ್ಟು ತಿಂದು ಕೆಳಗುರುಳಿದ್ದನ್ನು ಕಂಡು ಹಿಂದಿದ್ದ ಇವರಿಬ್ಬರೂ ಕೆರಳಿ, ಲಕ್ಕನ ಮೇಲೆ ನುಗ್ಗಿ ಆಕ್ರಮಣ ಮಾಡಿದರು. ಲಕ್ಕ ಬೊಡ್ಡ ಒಂದು ಕಡೆ, ಇವರಿಬ್ಬರೂ ಇನ್ನೊಂದು ಕಡೆ – ಹೀಗೆ ಹೋರಾಟ ನಡೆಯುತ್ತಿರುವಂತೆ, ಆ ಜಾಗದಲ್ಲಿ ನಡೆಯುತ್ತಿದ್ದ ಗದ್ದಲ ಎದಿರುಗಡೆಯಿಂದ ಅನತಿದೂರದಲ್ಲಿ ಬರುತ್ತಿದ್ದ ನಾಲ್ಕು ಗಾಡಿಗಳ ಜನರಿಗೆ ಕೇಳಿ ಅವರು, ಈಚಲುಗುತ್ತಿಯ ಸಮೀಪ ಕಳ್ಳರು ಯಾವುದೋ ಗಾಡಿಯ ಮೇಲೆ ಆಕ್ರಮಣ ಮಾಡಿರಬಹುದೆಂದು ಊಹಿಸಿ, “ಬಂದೊ, ಬಂದೂ-ಹೆದರಬ್ಯಾಡಿ, ಹೆದರಬ್ಯಾಡಿ...” ಎಂದು ಜೋರಿನಿಂದ ಕೂಗಿದ್ದು ಕೇಳಿಸಿತು. ಆ ಕೂಗನ್ನು ಕೇಳಿ, ಕಳ್ಳರು ಅಲ್ಲಿಂದ ದೌಡು ಹೊಡೆದು ಈಚಲುಗುತ್ತಿಯ ಕತ್ತಲಲ್ಲಿ ಮರೆಯಾದರೆ. ಎದಿರು ಗಾಡಿಗಳ ಕೆಲವು ಗಂಡಸರು ಕೆಳಗಿಳಿದು ಬಂದರು., ಲಕ್ಕನ ಕಾಲಿಗೆ, ಬೆನ್ನಿಗೆ ಪೆಟ್ಟು ಬಿದ್ದಿತು. ದೊಡ್ಡ ಮಾತ್ರ ಅತ್ತ ಇತ್ತ ನೆಗೆದು ಹೇಗೋ ಹೆಚ್ಚು ಜಖಂ ಆಗದೆ ಉಳಿದಿತ್ತು... ಎದಿರು ಗಾಡಿಯವರು ನಮ್ಮನ್ನುದ್ದೇಶಿಸಿ ಹೇಳಿದ್ದರು: “ಇಷ್ಟು ಬೇಗ ಸಾಮಾನ್ಯವಾಗಿ ಕಳ್ಳರು ಬೀಳೋದು ಅಪರೂಪ. ಏನಿದ್ದರೂ ಒಂಬತ್ತು ಗಂಟೆ ಕಳೆದ ಮ್ಯಾಲೇ ಇಲ್ಲಿ ಅವಾಂತ, ಈ ಮುಚ್ಚಂಜೇಲಿ ನಿಮ್ಮ ಒಂಟಿಗಾಡಿ ನೋಡಿ ಧೈರ್ಯ ಮಾಡಿರೋಹಂಗೆ ಕಾಡ್ತಿದೆ. ಸದ್ಯಕ್ಕೆ, ದ್ಯಾವರು ನಿಮ್ಮ ಇಸ್ಪಕ್ಕೇ ಪಾರು ಮಾಡಿದ. ನಿಮ್ಮ ಪುಣ್ಯ ಚೆಂದಾಗಿತ್ತು. ಅವರು ಏನು ಮಾಡಕ್ಕೂ ಹೇಸದೇ ಇರೋ ಜನ!” “ನೀವೆಲ್ಲಗೆ ಹೊರಟಿರೋದು?” -ಅಶ್ವತ್ಥ ಕೇಳಿದ್ದ. “ಬೆಟ್ಟದಪುರಕ್ಕೆ” ಎಂದಿದ್ದರು. ಲಕ್ಕ ಕುಂಟುತ್ತಲೆ ಗಾಡಿಯನ್ನು ಹತ್ತಿ ಕುಳಿತಿದ್ದ. ಅಶ್ವತ್ಥ ಆ ಗಾಡಿಗಳ ಮುಂದಾಳುಗಳಿಗೆ