________________
೧೦೬ ವೈಶಾಖ ರಸನಿಮಿಷವೇ ಆಗಿರುತ್ತಿತ್ತು. ಅಂಥ ಮಹಾನುಭಾವವನನ್ನು ಕಳೆದುಕೊಂಡು ತಾನಾದರೂ ಯಾಕೆ ಬದುಕಿರಬೇಕು?- ತಾನೋಬ್ಬಳೇ ಏಕಾಂತದಲ್ಲಿರುವಾಗ ತಟ್ಟನೆ ಮುಖಾಮುಖಿಯಾಗಿ ಎದಿರು ನಿಲ್ಲುತ್ತಿದ್ದ ಪ್ರಶ್ನೆಯಿದು... ಸದಾ ಬಾಧಿಸುತ್ತಿದ್ದ ಈ ಪ್ರಶ್ನೆ ಒಂದು ರಾತ್ರಿ ಅವಳಿಂದ ಸ್ಪಷ್ಟ ಉತ್ತರವನ್ನೇ ಬೇಡಿತ್ತು... ರುಕ್ಕಿಣಿಯು ಮೆಲ್ಲನೆ ಮೇಲೆದ್ದಿದ್ದಳು. ಪಕ್ಕದಲ್ಲಿ ಮಲಗಿದ್ದ ಸರಸಿಯನ್ನೊಮ್ಮೆ ತಾಯ್ತನದ ಕಂಬನಿದುಂಬಿ ದೃಷ್ಟಿಸಿದಳು. ತನ್ನನ್ನು ತನ್ನ ಸ್ವಂತ ತಾಯಿಗಿಂತಲೂ ಅತಿಶಯವಾಗಿ ಹಚ್ಚಿಕೊಂಡಿರುವ ಈ ಬಾಲೆಯನ್ನು ಬಿಟ್ಟು ಹೋಗುವುದಾದರೂ ಹೇಗೆ?- ಎಂದು ಪರಿತಪಿಸಿದಳು. ಆದರೆ ಈ ಮೋಹವನ್ನು ಕಡಿದುಕೊಳ್ಳದಿದ್ದಲ್ಲಿ, ಕುಟ್ಟೆಹುಳುವಾಗಿ ಕೊಪರೆಯುವ ಭರಿಸಲಾಗದ ಈ ಚಿಂತೆಯಿಂದ ತನಗೆ ಮುಕ್ತಿಯುಂಟೆ?... ಕಣಕಾಲ ಅಂತಃಕರಣ ಹೊಯ್ದಾಡಿತು. ಕೊನೆಗೊಮ್ಮೆ ಮನಸ್ಸು ಕಲ್ಲುಮಾಡಿ ಹೇಗೋ ಆ ಕೋಣೆಯಿಂದ ಹೊರನಡೆದಿದ್ದಳು. ತಲೆಬಾಗಿಲು ತೆರೆಯುವಾಗ ತಾನೆಷ್ಟು ಆಸ್ಥೆ ವಹಿಸಿದ್ದರೂ ಹೊನ್ನೆಮರದ ದಪ್ಪನೆಯ ಹಳೆಯದಾದ ಬಾಗಿಲು ಕಿರ್್ರ ಅನ್ನದೆ ಇರಲಿಲ್ಲ. ಆ ಗಳಿಗೆಯಲ್ಲಿ ಅವಳಿಗೆ ಅವಳ ಹೃದಯದ ಬಡಿತವೇ ನಿಂತಂತಾಗಿತ್ತು!- ಪುಣ್ಯಕ್ಕೆ ಆ ಶಬ್ದದಿಂದ ಮನೆಯವಯ್ಯಾರೂ ಎಚ್ಚರಗೊಳ್ಳಲಿಲ್ಲ.... ಹೊಸಿಲು ದಾಟಿದ್ದಳು... ಏನೋ ಕಳವಳ... ಮಾವಯ್ಯ, ಸುಶೀಲತೆ ಇಬ್ಬರೂ ತನ್ನ ಬೆನ್ನು ಹಿಂದೆಯೇ ತಡೆಯಲು ಬರುತ್ತಿರುವ ಹಾಗೆ... ಸರಸಿ ತನ್ನ ಪುಟ್ಟ ಕೈಗಳೆರಡನ್ನೂ ಬಾಚಿ ಅಡ್ಡನಿಂತು, ತಾನು ಮುಂದೆ ಅಡಿಯಿಡದಂತೆ ತಡೆಯುತ್ತಿರುವ ಹಾಗೆ... ನಿದ್ರೆಯಲ್ಲಿ ನಡೆಯುವವಳಂತೆ ಮನೆಯ ಮುಂದಿನ ಮೆಟ್ಟಿಲುಗಳನ್ನು ಒಂದೊಂದಾಗಿ ಇಳಿದಿದ್ದಳು. ಮೆಟ್ಟಿಲುಗಳಿಗೂ ಕತ್ತಲು ಮೆತ್ತಿದಂತಿತ್ತು. ಜಾಗರೂಕತೆಯಿಂದ ಮೆಟ್ಟಿಲಿಳಿದು ಕತ್ತಲು ಹಾಸಿದ ಬೀದಿಗೆ ಕಾಲಿಟ್ಟಳು. ಆಚೆಮನೆಯ ಬಾಣಂತಿಕೋಣೆಯ ದೀಪ ಹೊರಗಿನ ಕತ್ತಳನ್ನು ಕೆಣಕಲಾರದೆ ಒಳಗೇ ಅಡಗಿ ಕುಳಿತಿತ್ತು... ನಿಂತಳು. ಯಾರಾದರೂ ಈ ಸರಿಹೊತ್ತಿನಲ್ಲಿ ಎದ್ದಿರಬಹುದೆ?... ತರ್ಕಿಸಿದಳು... ಇಲ್ಲ, ಯಾರು ಕಾಣುತ್ತಿಲ್ಲ. ದೂರದ ಮನೆಯಲ್ಲಿ ಯಾವುದೊ ಹಸುಕಂದ ಅಳುವ ಸದ್ದ! ತಾಯಿ ಸನ್ಯಕೊಡುತ್ತಿರಬಹುದು.... ಈಗ ಆ ಸದ್ದೂ ನಿಂತದೆ... ಊರು ಮಲಗಿದಂತೆ, ಶಬ್ದವೂ ನಿದ್ದೆಯಲ್ಲಿ ಮುಳುಗಿದಂತಿತ್ತು... ಬಾವಿ ಇರುವುದು ತಮ್ಮ ಮನೆಯಿಂದ ನಾಲ್ಕು ಮನೆಯ ಆಚೆಗೆ, ರುಕ್ಕಿಣಿ