ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೦ ವೈಶಾಖ ಕಳಿಸಿಕೊಡಬೇಕೆಂದು ಸಾವಿತ್ರಿ ಶಾಸ್ತಿಗಳಿಗೆ ನಿವೇದಿಸಿದಳು. ಅವರು ಒಪ್ಪಲಿಲ್ಲ. ಸರಸಿಯ ಕಡೆ ಕೈಮಾಡಿ, “ಇಲ್ಲಿ, ಇವಳನ್ನು ಯಾರು ನೋಡಬೇಕು?” -ಪ್ರಶ್ನೆ ಹಾಕಿದರು. “ಇವಳನ್ನೂ ಕಳಿಸಿ, ತಾಯಿಯನ್ನು ಕಳೆದುಕೊಂಡಿರುವ ಹುಡುಗಿ, ಸ್ಥಳ ಬದಲಾವಣೆಯಿಂದ ಅವಳಿಗೂ ದುಃಖ ಶಮನವಾಗಲು ಅನುಕೂಲವಾಗುತ್ತೆ.” -ಸಾವಿತ್ರಿ ವಾದಿಸಿದಳು. ಶಾಸ್ತ್ರಿಗಳು ನಿರುಪಾಯರಾದವರಂತೆ ಕೈಚೆಲ್ಲಿ, ಅವಳನ್ನೆ ಕೇಳಿ, ಅವಳು ನಿಮ್ಮೊಡನೆ ಬರುವುದಾದರೆ ನನ್ನದೇನೂ ಅಭ್ಯಂತರವಿಲ್ಲ” ಎಂದರು. ಸಾವಿತ್ರಿ ಸರಸಿಯನ್ನು ಅತಿಶಯವಾಗಿ ಮುದ್ದಿಸುತ್ತ, “ನಮ್ಮ ರುದ್ರಪಟ್ಟಣ ನಿಮ್ಮ ಹಳ್ಳಿಯ ಹಾಗಲ್ಲ. ಅಲ್ಲಿ ಜುಳುಜುಳು ಹರಿಯುವ ಹೊಳೆಯಿದೆ. ಅದರಲ್ಲಿ ನೀನು ಮುಳುಗುಹಾಕಿ ಆಟ ಆಡ್ಡ ಸ್ನಾನ ಮಾಡಬಹುದು... ಅಮೇಲೆ ಹೊಳೆ ದಡದಲ್ಲಿ ಹರಗಲು ನಿಂತಿರುತ್ತೆ. ನೀನು ಆ ಹರಿಗಲಿನಲ್ಲಿ ಕುಳಿತು ಬೇಕಾದ ಹಾಗೆ ಹೊಳೆಯ ಆಚೆ ದಡದಿಂದ ಈಚೆ ದಡಕ್ಕೆ ಅಡ್ಡಾಡಬಹುದು...” ಎಂದೆಲ್ಲ ಅಮಿಷ ಒಡ್ಡಿ, “ನೋಡು ನಮ್ಮೂರಲ್ಲಿ ಇಷ್ಟೆಲ್ಲ ಇದೆ. ನಮ್ಮ ಜೊತೆಗೆ ಬರೀಯ, ಸರಸು?” ಎಂದು ಕರೆದಳು. ಜಾನಕಿಯೂ “ಬಾರೆ, ಸರಸು” ಎಂದು ರಮಿಸಿದಳು. ಸರಸಿಯದು ಒಂದೇ ಖಡಕ್ಕಾದ ಉತ್ತರ: “ನಾ ಬರಲ್ಲ.” ಸಾವಿತ್ರಿ ಪೆಚ್ಚಾದಳು. ಅಶ್ವತ್ಥ ಪಾತುವಿನ ಕಡೆ ತಿರುಗಿ “ನೀನಾದರೂ ಬಾಮ್ಮ -ನೀನೂ ನಿನ್ನ ಯಜಮಾನರೂ ನಮ್ಮ ಊರಿಗೆ ಬಂದು ಬಹಳ ಕಾಲವೇ ಸಂದಿದೆ. ನೀವೆಲ್ಲ ಈಗಲಾದರೂ ಬನ್ನಿ, ಹಾಯಾಗಿ ಒಂದೆರಡು ತಿಂಗಳವರೆಗೆ ಇದ್ದು ಬೇಸರ ಕಳೆದು ಹೋಗುವಿರಂತೆ” ಎಂದು ಆಹ್ವಾನಿಸಿದ್ದ. - “ಯಜಮಾನರೇ ಇದಾರಲ್ಲ, ಕೇಳಿ. ಅವರು ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ. ನಾನು ಕೇವಲ ಬಸವನ ಹಿಂದಿನ ಬಾಲ. ಅವರು ಹೇಗೆ ಹೇಳಿದರೆ ಹಾಗೆ”, ಎಂದು ಪಾರ್ವತಿ, ಚಂದ್ರಶೇಖರಯ್ಯ ನವರತ್ತ 'ಏನಪ್ಪಣೆ? ಎನ್ನುವ ಹಾಗೆ ನೋಟ ಬೀರಿದ್ದಳು. ಚಂದ್ರಶೇಖರಯ್ಯ ನಗುತ್ತ, “ಭಾವ ಇಷ್ಟು ಪ್ರೇಮದಿಂದ ಕರೆಯುವಾಗ, ಯಾಕೆ ಹೋಗಬಾರದು?... ನಡಿಯೆ ಪಾತು, ರುದ್ರಪಟ್ಟಣವನ್ನು ನಾನೂ ನೋಡಿ ತುಂಬಾ ಸಮಯಾನೆ