ಪುಟ:ವೈಶಾಖ.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೧೫, ಮಾಡುತ್ತ ಇದ್ದು. ಅಂಗಾಡಿ ಇಂಗಾಡಿ, ಆ ಮಾತು ಈ ಮಾತ್ನಲ್ಲಿ ಸಂಜೆಗಪ್ಪು ಗುಡ್ಲುಮ್ಯಾಲೆಲ್ಲ ಕವೀತು. - “ಸೊಡ್ಲುಯೆಲ್ಲಿಟ್ಟಿದಿಯೋಳವ್ವ ದೀವಿಗೆ ಕತ್ತಿಸ್ತೀನಿ” ಅಂತ ಸಿವುನಿ ಅಂದಾಗ ಹಣೆ ಚೆಚ್ಚಿಗೊತ್ತ, “ಹಯ್ಯೋ, ಬರಿ ಸೊಡ್ಡ ಕಟಿಗಂಡು ಯೇನ ಮಾಡಾದು! ಎಣೆ ಮೊನ್ನೆ ನಾತಿಂದ್ರ ನಾನೂವೆ ಜೋಪಾರು ಅತ್ತದ್ದೆ ಅತ್ತದ್ದು. ಯಾರಾರ ಅಟ್ಟಿಗೊ ವೋಗಿ ಗ್ವಾಗತ್ತೆ, ಯಾತಾವೂ ದ್ವರೀನಿಲ್ಲ” ಅಂತ ಕಲ್ಯಾಣಮ್ಮ ಉಸುರು ಬುಟ್ಟು. ಅವ್ವ ಇಂಗೆ ಹೇಳುತ್ತಲೆ, ಲಕ್ಕ ದಿಗ್ಗನೆದ್ದು, “ಇದ್ಯಾಕವ್ವ ಬಟ್ಟಾಡಿಯೇ? -ಎಂಗೂ ನನ್ನತ್ರ ಒಂದು ರೂಪಾಯಿ ಇಲ್ಲ?...ಅಮ್ಮದ್ ಕಾಕನ ಅಂಗಡೀಲಿ ಸೀಮೆಎಣ್ಣೆ ಬುಡಿಸಿ ತನಂತೆ. ಆ ಖಾಲಿ ಸೀಸೆ ಕೂಡು” ಅಂದು ಈಸಿಕೊಂಡು ಎಣ್ಣೆ ತರಕ್ಕೆ ತೆರಳ, ಸಿವುನಿ ಉರೀತಿದ್ದ ಒಲೆಗೆ ಮತ್ತೆ ನಾಕೈದು ಸೀಳು ಸೌದೆ ಒಟ್ಟಿ, ಉರುಬಿ, ದೊಡ್ಡುರಿ ಮಾಡಿದ್ದು, ಅನಂತ್ರ ಉರಿಯೊ ಕೊಳ್ಳಿಗಳ ಒಲೆ ಈಚೆ ಹಿರದು, ಕೆಲವು ಸೀಳು ಮೊರಗಡೆಗೂ ಉರಿಯುವಂಗೆ ಮಾಡಿದ್ದು, ಆ ಬೆಳಕು ಗುಡಿಸಿಲ್ಪವಳಗೆ ಸೋಲ್ಲ ಭಾಗದಿಂದ ಕತ್ತಲು ಫೇರಿ ಕೀಳೋವಂಗೆ ಮಾಡಿತ್ತು. ಕುದಿಯೊ ನೀರಿಗೆ ರಾಗಿ ಹಸಿಟ್ಟಾಕಿ ತಿರುವಿ, ಅದು ಹದವಾಗಿ ಬೆಂದ ಬಳಿಕ, ಹಿಟ್ಟಿನ ಮಡಕೆಯ ಒಲೆ ಮ್ಯಾಲಿಂದ ಕೆಳಕ್ಕಿಳಿಕಿ, ಕಾಂದ ವದೆ ಊಟ, ಅಡಕೆ ದಬ್ಬಿಂದ ಹಿಟ್ಟು ಜಡೀತ ಇದ್ದಂಗೆ, ಲಕ್ಕ ಕಾಕನ ಅಂಗಡಿಂದ ಸೀಮೆಯೆಣ್ಣೆ ಬುಡಸಿ ತಂದು ತಗಡಿನ ಸೀಮೆಎಣ್ಣೆ ಬುಡ್ಡಿ ಹೊತ್ತಸ್ಥ, ಸಿವುನಿ ರಾಗಿಮುದ್ದೆಗಳ ಕಟ್ಟಿಟ್ಟು, ಒಲೆ ಮ್ಯಾಲೆ ಇನ್ನೊಂದು ಮಡಕೇಲಿ ನೀರಿಟ್ಟು, ರಾಗಿ ಅಂಬಲಿ ಕಾಯಿಸಿ, ಹೋಗ್ನಲ್ಲಿ ಹುರುಳಿ ಎಸನ್ನೂ ತಯಾರಿ, “ಅವ್ವ, ಇಟ್ಟು ಆಗದೆ. ಅಮ್ಮ ಇಬ್ಬರಿಸಿಗಂಬಾ. ಅವರಿಗೆ ರಾಗಿ ಅಂಬಲೀನೂ ಲಡಿಮಾಡಿ” ಅಂದ್ಲು. ಎಲ್ಲಾರೂವ ಒಲೆ ಮುಂದೆ ಬಂದು ಉಣ್ಣಕ್ಕೆ ಕುಂತರು. ನಿಂಗಯ್ಯನೂ ಸೀಟಾಡ್ ಸೀಟಾಡ ಬಂದು ಕುಂತ, ಎಲ್ಲಾರ ತಣಿಗೆಗೂವೆ ಕಟ್ಟಿದ ಮುದ್ದೆ ಇಕ್ಕಿ, ಹುರುಳಿ 'ಉದಕ' ಬುಟ್ಟಳು. ಬಳಿಕ ಬೆಂದ ಹುರುಳಿ ಕಾಳನೂವೆ ಎಲ್ಲಾರ ತಣಿಗೂ ಇಟ್ಟು, ತನ್ನ ತಣಗ್ಗೆ ಮಗಳು ಅಂಬಲಿ ಸುರಿಯಕ್ಕೆ ಬಂದಾಗ, “ಯಾಕಮ್ಮಿ, ನಂಗೇನಾಗದೆ ಅಂತ ರಾಗಿ ಅಂಬಲಿ ನೀಡುತ್ತಿದ್ದೀ?... ತಮ್ಮ