________________
ಸಮಗ್ರ ಕಾದಂಬರಿಗಳು ೧೧೯ “ನೆನ್ನೆ ನಾನಾಗ ಬಾಡಿನೆಸರ ಮಾಡ್ಲಿಲ್ಲಾಂತ ನನ್ನ ವಂದಿಗುಟ್ಟೆ ಕದ್ದ ಮಾಡ್ಲಿಲ್ಲ ನಿಮ್ಮಯ್ಯ?- ಈಗ ಆ ಪುಣ್ಯಾತ್ಮನಿಗೆ ಅದ್ಯಾವ ಮಾರಕ್ಕೆ ತಾಯಿ ಗ್ಯಾನ ಕ್ವಿಟ್ಟಳೋ ಕಾಣೆ. ಬೋ ಜಿನದ ಮ್ಯಾಗೆ, ಈ ದಿವೃ ಗೇದ ದುಡ್ಡ ಮೂರ್ತ ನನ್ನ ಕಯ್ಯಗೆ ಹಟ್ಟಿ `ಕಲ್ಯಾಣಿ-ನಾಳಿಕೆ ಈ ದುಡ್ಡು, ನಿನ್ನ ಕಂಬಳದ ದುಡ್ಡು, ಲಕ್ಕ ಗೆದು ತಂದ ದುಡ್ಡು ಯಲ್ಲಾನೂವೆ ಜಮಾಯಿ ಪಸಂದಾಗಿ ಬಾಡೀನ ಸಾರು ಮಾಡು ಮತ್ತೆ ರಾಗಿ ಮುದ್ದೆಗೂವೆ ಬಾಡಿನ ಸಾರಿಗೂವೆ ವೈನಾಯ್ತದೆ. ಸುಮಾರು ಜಿನವೇ ಆಯ್ತು ನಿನ್ನ ಕಯ್ಯನ ಬಾಡಿನ ಸಾರು ರುತಿ ನ್ಯಾಡಿ, ಆ ರಾಚನ ಹಳು ಹುರಿ ಬಾಡು ತಿಂದು ಬಾಯೆಲ್ಲ ಕೆಟ್ರೋಗದೆ, ಅಂದೋನು 'ಜಪ್ಪಯ್ಯನ ಮಟದ ಅಯ್ಯೋರು ಯೋಳಿ ಕಳಿಸಿ, ನಾಳೀಕೆ ಅವರ ಮಠದ ಜಮೀನಿನ ಕೇಮೆ ಇರಬೈದೇನೊ. ಕ್ಯಾಳಿಕಂಬತ್ತೀನಿ' ಅಂತೇಳಿ, ಅಯ್ಯ ಆ ಕಡಿದ. ನೀ ಈ ಕಡೀಕೆ ಬಂದೆ” ಅಂದ್ಲು. ಅಂಗಂದು, ಸೊಂಟದಿಂದ ಇಮ್ಮಣಿ ಚೀಲವ ತಗದ ಅದರೊಳಿಕೆ ಅಂಗೈ ದುಡ್ಡೆಲ್ಲ ಸುರುದು, ಮತ್ತೆ ಇಮ್ಮಣಿ ಚೀಲವ ಸೊಂಟಕೇ ಸಿಕ್ಕುಸ್ತ. “ಲಕ್ಕೆ, ನಿಮ್ಮಯ್ಯನ ಕ್ವಾಪ-ಆದ್ರಿ ಮಲೆ ಇಲ್ಲ ಅಂದೆ. ಅದು ಬಂದು ಬೀಳೋ ಬಿರುಸ್ಸಲ್ಲಿ -ಹಾಳು ಗಂಡಸಿನ ಜಲ್ಮ ಎಂಗಸಾಗಾರೂವೆ ಉಟ್ಟಬಾರದಾಗಿತ್ತ- ಅನ್ನುಸಿ, ಅದೇ ಬಿರುಸ್ಸಲ್ಲಿ ನಿಂತೋಗಕ್ಕಿಲ್ಲ, ಅಂಗೆ! ಚಾಪೆ ಮ್ಯಾಲೆ ವೋಳ್ಳಾಡ್ತ ಮನಗಿದ್ದ ಲಕ್ಕ ಯೋಚ್ಛೆ ಮಾಡ್ತಾನೆ ಇದ್ದ... ಅಯ್ಯನಲ್ಲಿ ಇಂದಕಿದ್ದ ಕ್ವಾಪ ಬತ್ತಾಬತ್ತಾ ಯೆತ್ತಾಗಿ ವೊಂಟೋಯ್ತು... ಈಗ್ಗೂವೆ ಬರಕ್ಕಿಲ್ಲ ಅಂತಲ್ಲ. ಬತ್ತದೆ, ಮಾತ್ರ, ಆ ಕ್ವಾಪದಲ್ಲಿ ಇಂದ್ರೆ ಇದ್ದಂತಾ ಊರಣ ಇವತ್ತಿಲ್ಲ...ಯಾಕೆ?... ಹಯ್ಯೋ, ಯಾಕೆ ಅಂತ ಈ ಇಚಾರವ ಐಗಂಚಿ ಪಟ್ಟಕ್ಕೋಗಿ ಉಡುಕಬೇಕ?... ನಮ್ಮಣ್ಣ ಬದುಕಿರಾ ಕಾಲದಾಗೆ ನಮ್ಮಯ್ಯ ಕುಸಾಮತ್ತೆ ಕುಸಾಮತ್ತು ಅಣ್ಣ ಜೊತೆಗಿದ್ದಾಗ ಅಯ್ಯ ಆಕಾಸದಾಗೆ ನಡೀತಿದ್ದ, ಆಸೆ ವೊರತು, ಆಗೇನು ಅಯ್ಯ ಯಾರ ಮ್ಯಾಲೂವೆ ತಟಕ್ಕೆ ಕ್ವಾಪ ಮಾಡಿಕರಿಲ್ಲಮಾತ್ಮಾತಿಗೂ ಸಿಣಿಸಿಣೀಂತಿರನಿಲ್ಲ. ತಾನೂ ನಗೋದು, ಬರೆಯೋರು ಕುಸಿ ಮಾಡಿ ನಗಸೋನು... ನಮ್ಮಣ್ಣ ವೋದ, ಇಂದುಗುಡ್ಡೆ ಅಮರಿಕತ್ತು ಕ್ವಾಪ ನಮ್ಮಯ್ಯ... ಗೆಜ್ಜುಗಣ್ಣ, ಅಯ್ಯಂಗೆ ಇರೀ ಮಗ. ನಡೂವೆ ಅವಳಿ ಜವಳಿ ಮಕ್ಕಳುಒಂದು ಗಂಡು, ಒಂದು ಎಣ್ಣು. ಇದಾದ ನಾಕೈದು ವರುಸಕೆ ಉಟ್ಟಿದೋನಂತೆ