ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೨೧ ಏಡಾಳ್ವೆ ಮೂಗ್ನಲ್ಲಿ ಕವಡೆ ಕಟ್ಟಿ ಗೇದರೂವೆ, ಆ ವೊರೆ ಬಾರಕ್ಕೆ ನಮ್ಮ ನೇರಳೆ ಮರದ ಪಾಲಿನ ಜಮೀನ ಆವುತಿ ತಕ್ಕಂಡಿತ್ತು... ನಮ್ಮಯ್ಯ ಹೊಲದಂಚಿಗಿದ್ದ ಜಮ್ಮುನೇರಳೆ ಮರದ ಬುಡದಲ್ಲಿ ಕುಂತು, ಗೆಜ್ಜುಗಣ್ಣನ ಕೊಳ್ಳ ತಬ್ಬಿ, ನಮ್ಮೊಲದ ಕೆಬ್ಬೆಮಣ್ಣಿಗೆ ಕಣ್ಣೀರು ಸುರುಸ್ಥ. ನಮ್ಮವ್ವ ಆ ಕೆಂಪಾನೆ ಮಣ್ಣ ಕಯ್ಯ ಬೊಗಸೇಲಿ ಯೆತ್ತಿ ಯೆತ್ತಿ ತನ್ನ ತಲೆಮ್ಯಾಕ್ಕೆ ಸುರುಕು “ಕೆಟ್ಟೆವಲ್ಲಷ್ಟೋ...”ಅಂತ ಗೋಳಾಡುದ ಕಂಡೋರೆಲ್ಲ ಕಣ್ಣೀರಾಕ್ತ ವೋಯ್ತಿದ್ರು... ನಂಗಿನ್ನೂ ಹೈಲಾಟದ ವಯಸ, ನಮ್ಮ ಜಮೀನು ಬ್ಯಾರೆಯೋರ ವಸಕ್ಕೆ ವೊಂಟೋದರೆ, ಇನ್ನು ಈ ನೇರಿಳೆ ಮರದ ತಕ್ಕೆ ಬರಾದು ಬಂದಾಯ್ತದೆ ಅನ್ನಾದು ಧ್ವತ್ತಾಗಿ, ಆಗ್ಗೆ ಆದೋಟು ನೇರಿಳೆ ಅಣ್ಣ ಕಮಾಯಿಸುವ ಅಂತ, ಕಲ್ಲು ತಕ್ಕಂಡು ಬೀರಿ, ಉದುರ ನೇರಿಳೆ ಅಣ್ಣ ಆರುಸಿ ಆರುಸಿ ಚಡ್ಡಿ ಜೋಬಿಗೆ ತುಂಬುಕತ್ತಿದ್ದೆ..... ಆಗ ನಾನು ಮಟಕೋಯ್ತಿದೆ. ನಮ್ಮಯ್ಯ ಕೆಂಗಣ್ಣಪ್ಪನ ತಾವು ಮತ್ತೆ ಅಯಿವತ್ತು ರೂಪಾಯ ಈಸುಗಂಡು ಅವನಟ್ಟಿಗೆ ಜೀತಕ್ಕೆ ಸೇರುಸಿದ್ದ. ಅಲ್ಲಿಂದ ಮಾರನೆ ವರುಸ ಕೆಂಗಣ್ಣಪ್ಪ ಅಯಿವತ್ತು ರೂಪಾಯಿ ಸಾಲ ತೀರುಸಿ, ಬುಂಡಮಾರು ಅದರ ಮ್ಯಾಲೆ ಅಯಿವತ್ತು ರೂಪಾಯಿ ಕ್ವಟ್ಟು ತಮ್ಮ ಅಟ್ಟಲೆ ಜೀತಕಿರುಸಿಕಂಡು... ನನ್ನ ಕಂಡರೆ, ಗೆಜ್ಜುಗಣ್ಣಂಗೆ ಪಂಚಪ್ರಾಣ. ಅಯ್ಯ ನನ ಮಟ ಬುಡಸಿ ಕೆಂಗಣ್ಣಪ್ಪ ತಾವು ಜೀತಕ್ಕೆ ಇರುಸಿದ್ದೆ ಅಣ್ಣಂಗೆ ತಾಪ ಆಗಿತ್ತು. ಈಗ ಬುಂಡಮಾರ ಅಟ್ಟಿ ಸೇರುಸಿದ್ದು ಅವಂಗೆ ಇನ್ನೂ ಬ್ಯಾಸರಾಯ್ತು. - “ನಂಗೇನೂ ವೋದು ಬರಾವು ಕಲಿಯಾ ಪುಣ್ಯ ನನ್ನಣೇಲಿ ಬರೀನಿಲ್ಲ....ತಮ್ಮಂಗೂ ಮಟದಿಂದ ದೂರ ಮಾಡಿ ಬುಟ್ಯಲ್ಲ?” - ಅಂತ ಅಯ್ಯನ ಕುಟ್ಟೆ ಕದ್ರಕ್ಕೆ ಬಿದ್ದಿದ್ದ.... ಆದ್ರೆ ಬುಂಡಮ್ಮಾರ ಅಟ್ಟಿ ಬುಡಿಸಬೇಕಾದರೆ ಒಂದು ನೂರು ರೂಪಾಯಿ ಜಮಾ ಆಗಬೇಕು. ಯಲ್ಲಿಂದ ವೋಟು ದುಡ್ಡ ವೊಂದಿಸಾದು?- ಅದೇ ಕೊರಗ್ನಲ್ಲಿ ಕಾಲ ತಳ್ತಾ ಇದ್ದ ಅಣ್ಣ... ಇಂಗೇ ಇರೋನೂವೆ ಪುಣ್ಯಕ್ಕೆ ಎಡತೊರೆ ಸೀಮಿಂದ ಎಣ್ಣು ಕೂಡ್ತೀವಿಂತ ಯಾರೊ ಬಂದರು. ಅಯ್ಯ, “ವಳ್ಳಿ ಸಮ್ಮಂದ, ನಿಂಗೂ ವಯಸ ಜಿನಾ ಜಿನಾ ಕಳುದಂಗೆ ಕಮ್ಮಿ ಆದಾತ, ಗೆಜ್ಜುಗ?- ಸುಮ್ಮೆ ವಷ್ಟುಗಯ್ಯಾ” ಅಂತ ಮೀಟ. ಅವ್ವನ ವರಾತವೂ ಕಮ್ಮಿ ಇರನಿಲ್ಲ. ಲಕುಸಣದಲ್ಲಿ ಎಣ್ಣು ಅಂತಾ ತಗದಾಕೊ ಬಾಬತ್ತಿಂದಲ್ಲ. ಆದರೂವೆ ಅಣ್ಣ ಅಳದೂ ಸುರದೂ ತೊಂಟಿತಕರಾರು ತಗದು, ಒಂದು ದೀವಳಿಗೆ ದಾಟಿಸಿದ್ದ....