ಪುಟ:ವೈಶಾಖ.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೩೭ ಬಲದಾ ಕಾಲ ಯೆಬ್ಬೆಟ್ಟಿಂದ ನೆಲ ಮೀಟ, ನಾನು “ಈ ಮರದ ಹಂಬ ನಂಗೇ ಬುಡಿ. ನಾನು ಇಳುತ್ತೀನಿ ಕನ್ನಯ್ಯ” ಅಂತ ತಡ್ಕರಿಸಿದ್ದೆ. ಸಾಸ್ತಿಗೊಳು ನಗಾಡ್ರ. “ಈ ಹಂಬು ಇಳುಕೊ ಕೆಲ್ಲ ಬಾಳ ಸೂಕ್ಸದ್ದು, ಇಂಗೇ ಬಂದು ಬಂದು ಸ್ವಾಡ ಕಲ್ಲುಕೊ. ನೀನು ಬೆಳುದು ದೊಡೇನಾದಂಗೆ, ನೀನೂ ಒಂದು ಜಿನ ನನ್ನಂಗೆ ಏಣಿ ಅತ್ತಿ ಹಂಬ ಇಳುಕೀವಂತೆ.” ಯೋಳಿ, ಬಿದಿರೇಣಿ ಅತ್ತೋಗಿದ್ರು... ಕೊನೆ ಗುಂಡಿಗೆ ಮಣ್ಣು ತಳ್ಳಿ, ನೀರುಣ್ಣುಸಿ ಆಗಿತ್ತು, ಕೊಳದಾಗಿ ಕೈಕಾಲು ತೊಳುದು ಸಾಸ್ತಿಗೊಳು ಊರು ದಿಕ್ಕೆ ಮೊಖ ಮಾಡಿದ್ರು, ಹಾದೀಲಿ, “ನಿಮ್ಮ ಮಗಾರು ಎಲ್ಲಿ ಅಯ್ಯಾರೆ?” ಕುತೂಹಲವಾಗಿ ಕ್ಯಾಳಿದ್ದೆ. “ಅಡಿಕೆ ಯಾಪಾರಕೆ ಸಿವಮೊಗ್ಗದ ಕಡೆ ಶಾಂಪಲ್ ತಕ್ಕಂಡೋಗವೆ. ಮೊನ್ನೆ ತಾನೆ ವೊದ್ದು. ಬರಾದು ಇನ್ನೂ ಅಯಿದರು ದಿನವೇ ಆಗಬೈದು” ಅಂದಿದ್ರು. ಮುಂಬೈ, ಹಾದಿ ಉದ್ದಕ್ಕೂ ಏಡು ಆಳಿನದೂ ಮಾತಿಲ್ಲ. ಅಟ್ಟಿ ತಲುಪುತಿಒದ್ದಂಗೆ, ಸಾಸ್ತಿಗಳು, “ಈವೊತ್ತಿಗಾಯ್ತಲ್ಲ, ನಾಳೀಕೂ ಬಂದುಬುಡು. ಇವೊತ್ತಿಂದೂ ನಾಳೆದೂ ಯೆಲ್ಲಾನೂ ಸೇರುಸಿ, ಒಟ್ಟಿಗೇ ಕೂಲಿ ಕ್ವಿಟ್ಟು ಬುಡ್ತೀನಿ” ಅಂದ್ರು. ನನ್ನ ಮುಖ ಸಪ್ಪಗಾಯ್ತು. “ನಾಳೀಕೆ ನಾ ಯೆಂಗೆ ಬರಾನೆ?” -ಪ್ರಶ್ನೆ ಎಸುದು ಆಕಾಸ ಸ್ವಾಡುದಾಗ, ಸಾಸ್ತಿಗಳು, “ಅಂಗಂದ್ರೆ ಯೇನೋ ಅರ್ತ?” -ಕ್ಯಾಳಿದ್ರು. ನಡುದಲ್ಲಾನೂವೆ ತುದಿಬಾಲ ಒಂದನೂ ಬುಡದೆ ನಾ ಯೋಳಿಕಂಡಾಗ, “ವಸಿ ಇಲ್ಲೆ ನಿಂತುಗೊ” ಅಂದೋರು, ದಾಪುಗಾಲು ಆಕ್ತ ಅಟ್ಟಿವಳಿಕೆ ವೋಗಿ, ತುಸ ವ್ಯಾಲ್ಯದಲ್ಲೇ ವೋರೀಕೆ ಬಂದು, ಇಡೀಂತ ಆಯಿವತ್ತು ರೂಪಾಯಿ ನನ್ನ ಕಯ್ಯಾಗಿಡ್ಡ. “ಈ ಅಣವ ನಿನ್ನ ಜೀತಕೆ ಕೂಡಾ ಇಲ್ಲ. ಈಗ ಬಂದಿರೋ ದರದು ತೀರುಸ್ಕೊ, ನಮ್ಮ ತ್ವಾಟಕ್ಕೆ ನೀನು ಬಂದೂ ಬಂದೂ ಕಂಬಳ ಮಾಡದಂಗೆ ಈ ಅಣವ ಕಳೆ ಆಕ್ತ ವೋಯ್ತಿನಿ. ಯಾವೊತ್ತೂ ಒಂದು ಜಿನ ತೀರದೆ. ಯೋಚ್ಛೆ