ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೮ ವೈಶಾಖ ಉಂಟೇನವ್ವ?- ಒಂದು ಪಕ್ಕಸ ನಮ್ಮ ಸಾವಂತ್ರಿ ರುತುಮತಿಯೇ ಆಗಿದೆ, ಯಾನ ಗತಿ?” ಕುಂಡಿಮಾದಿ ಇವರಿಸಿದ ಆ ಸಂಗ್ತಿ ಅಲ್ಲಿ ನೆರೆದಿದ್ದೋರು ಎಲ್ಲಾರನೂ ದಿಗ್ಧಮೆಗೊಳಿಸಿದ್ರೂ ದ್ಯಾವಾಜಿ ಮಾತ್ರ “ಇಸ್ರೇಯ?” ನಗಾಡ, ಬೆಪ್ಪಾಗಿ ಕುಂತಿದ್ದ ಆ ಎಂಗಸರ ಇನ್ನೂ ಬೆಷ್ಟುಗುಡಿದಳು. ಎಲ್ಲಾರು ತಂತಮ್ಮ ಚಾಪೆ ಎಣೆಯಾದ ನಿಲ್ಲುಸಿ, ದ್ಯಾವಾಜಿ ಮೊಖಾನೆ ಒಂದು ಚಣ ನೋಡದ್ರು, ದ್ಯಾವಾಜಿ ನಗಾಡಾದ ನಿಲ್ಲುಸಿ, “ಹಯ್ಯೋ, ಇದರಾಗೆ ಯಾವ ಅತಿಸಯ ಇದ್ದದು ತಗಿ... ಆವಯ್ಯ ಸರಕಾರಿ ಗೂಳಿ ಅಂಗೆ ಕಂಡ ಕಂಡ ಅಮೀರು ಮ್ಯಾಲೆಲ್ಲ ಹಾರಿ, ತನ್ನ ಪುರುಸಾನೆಲ್ಲ ಕಳಕಂಡು ಭಾಳ ಕಾಲ ಆಗೋಯ್ತು, ಈಗ ಮ್ಯಾಲೆ ದಬ್ಬನೆ ಬೀಳಾದು, ಪ್ರಸಕಾಡಾದು, ಈಟೇಯ ಆವೃ ಕಣ್ಣು ಕಿಸಿಯಾದು! ಅವು ಮಡಕ್ಕಂಡಿದ್ದ ಮರಸು ವಕ್ಕಲಿಗರ ದ್ಯಾವೀನೆ ನನ್ನ ಕುಟ್ಟೆ ನಗಾಢ ಯೋಳಿದ್ದು... ಈಗ ನಿನ್ನ ಸಾವಂತ್ರಿ ರುತುಮತಿ ಆಗದಿದ್ರೂ ವೋಟೇಯ, ಆಗಿದ್ರೂ ವೋಟೇಯನಿಂಗ್ಯಾಕಮ್ಮಿ ಬಯ?... ನೀನೊಂದ ಪೆದ್ದುಗರ, ಸಾವಂತ್ರಿಗೆ ಯೋಳುಕಡು. ಇನ್ನೊಂದು ದಪ ಇಂಗೇನಾರ ಆಡುಕ್ಕೆ ಬಂದ್ರೆ ಮೊದ್ದು ದುಡ್ಡು ಮಡಗು ಅನ್ನಲಿ” ಅಂದೋಳು, ಇನ್ನೊಟು ಹೊಗೆಸೊಪ್ಪ ಇಮ್ಮಣಿಚೀಲದಿಂದ ತಗದು ದವಡೆಗೆ ವತ್ತರುಸ್ತ, “ಈವಯ್ಯ ಆಡೋ ಆಟಕೆ ದ್ಯಾವರು ಐನಾತಿ ಎಡತೀನೆ ಗಂಟಾಕಪ್ಪೆ, ತಕೋ.... ಇನ್ನು ಕದ್ದು ಮಾಡಾದ, ಅವಳು ರಾಜಾರೋಸವಾಗೆ ಮಾಡ್ಡವಳಲ್ಲ?... ಈ ಮುಂಡೇದೇನಾರ ತುಟಿಪಿಟಕನ್ನಾಕೆ ಅಪ್ಪಣೆ ಉಂಟ?ನಮ್ಮೂರಲ್ಲಿ ಆಡೋ ಯಕ್ಷಗಾನದಲ್ಲಿ ಮರದ ಅಟ್ಟ ನಡಗಿಸಕ್ಕಿ, ತೊಂಡಾ ನೂರು ರಕ್ಕಸಿ, ಅವಂಗೆ ಒಂದು ದಪ ಅಬ್ಬರಿಸು ಮುಗಿದೊಯ್ತು, ಇಂದುಗಡೆ ಸ್ಯಾವಿಗೆ ಒತ್ತಿಗತ್ತದೆ ಅಯ್ಯನಿಗೆ?...” ರಸ್ತತಾಗಿ ಇಂಗೆ ಯೋಳಿದಾಗ ಎಂಗಸರೆಲ್ಲ ಬಿದ್ದು ಬಿದ್ದು ವೊಟ್ಟೆ ಉಣ್ಣಾಗೊ ವಝವೆ ನಗಾಡಿದರು ಹುಚ್ಚು ಬೋರಿಯಂತೂ “ಅವ್ವಯ್ಯ! ನಾ ಇನ್ನು ನಗನಾರಿ...” ಅಂತ ತನ್ನ ಪಕ್ಕೇನೆ ಏಡು ಕಯ್ಯ ಇಡಕಂಡ್ಲು. ದೂರದಿಂದ್ದೆ, ಲಕ್ಕನೂ ನಕ್ಕ. ಕುಸಾಮತ್ತಿನ ಮಾತುಗಾರಿಕೇಲಿ, ನಿಮ್ಮ ಹೊಲಗೇರಿಗೆಲ್ಲ ದ್ಯಾವಾಜೀನೆ ಒಂದನೆ ನಂಬೂಂತ ಕೇಸವಯ್ಯಾರು ಯೋಳ್ತಿದ್ದದ್ದು ಸಪ್ಪಟ್ಟೆ ಮಾತೇನಲ್ಲ!... ಲಕ್ಕಂಗೆ ತಾನೂವೆ ಆ ಎಂಗಸರ ಜ್ವತೆ ಸೇರಿ ಚಾಪೆ ಎಣೆಯೊ ಚಪಲ. ಆದ್ರೆ, ಈ ದಿನ ದೇಸವಯ್ಯರು ತಮ್ಮ ತ್ವಾಟದಲ್ಲಿ ಮಯ್ಯ