ಪುಟ:ವೈಶಾಖ.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೪೯ ಮುರಿಯೊ ಕೇಮೆ ಮಾಡಿಸಿದ್ದು, ಅದು ಯಾರೋ ಯಾನು ಮಾಡಕ್ಕೂ ಉಮ್ಮಸ್ಸೇ ಬತ್ತಾ ಇಲ್ಲ. ಮಮ್ಮಿ ಕಯ್ಯಲ್ಲ ಯಾತಾವು ಹುಣ್ಣು ನೋಯೂವಂಗೆ ನೋಯ್ತಾ ಅವೆ... ಈಗ ಕಿಸ್ಟಸಾಸ್ತಿಗಳ ಅತ್ರ ತಕ್ಕಂಡಿದ್ದ ಸಾಲ ತೀರೋಗಿ, ತಾನು ಊರಲ್ಲಿ ಬ್ಯಾರೆಬ್ಯಾರೆಯೋರ ತ್ವಾಟತುಡಿಕೆಗೂ ಕೂಲಿಕಂಬಳಕೆ ವೋಗಕ್ಕೆ ಅವಕಾಸ ಸಿಕ್ಕಿತ್ತು. ಆದ್ರೂವೆ ಸಾಸ್ತಿಗಳ ತ್ವಾಟಕೇ ಈಗಲೂ ಎಚ್ಚಾಗಿ ವೋಯ್ತಿದ್ದದ್ದು. ಒಂದೊಂದು ಜಿನ ಸಾಸ್ತಿಗಳ ತ್ವಾಟದಲ್ಲಿ ಅಪ್ಪರ ಕೆಲ್ಸ ಇಲ್ಲಿದ್ದ ಜನ, ಅವರೇನು “ನಾಳೆ ಬ್ಯಾರೆ ಯೆಲ್ಲಾರು ಕೂಲೆ ಕ್ವಾಡಿಕಳ್ಳ' ಅಂದುಬುತ್ತಿದ್ದರು. ಅಂಗಾಗಿ, ತಾನೂವೆ ಈಚೀಚೆ ಅವರಿವರ ತ್ವಾಟಕೂ ವೋಗೋದ ಪಾಟಮಾಡ್ಕಂಡಿದ್ದ. ಅದೇ ಕಾರಣಕೆ ಈ ಜಿನ ಕೇಸವಯ್ಯಾರ ತ್ವಾಟಕೋಗಿದ್ದ... ಆ ಕೇಸವಯ್ಯ ಕೆಲಸ ತಗಿಯಾದಲ್ಲಿ ಬೋ ನಿಪುಣ! ಮಾತಿನ ಸಂದೀಲೇ ಅವರೇಕಾಯಿ ಕುಯ್ಯೋ ಆಸಾಮಿ. ವಳ್ಳಿ, ಮಾತಾಡ್ ಮಾತಾಡ್ತಾನೆ, ನಾವು ಏಟು ಕೇಮೆ ಮಾಡೋ ಅನ್ನಾದೆ ಗ್ವತ್ತಾಗದ ತರ, ಮಂಕುಬೂದಿ ಯೆರಚುಬುಡ್ತಾನೆ!-* ಲೋ ಲಕ್ಕ, ಈ ದರುಮನಳ್ಳಿ ಬಡ್ಡಿ ಮಕ್ಕಳೆಲ್ಲ ಊಟುಕೆ ಮುಂದು, ಕೆಲಸಕ್ಕೆ ಇಂದು... ಸೋಂಬೇರಿ ಇಸಂಗಳು... ನಾನ್ನಾಡಿದಲ್ಲಿ ನೀನೋಬೈ ಮಮ್ಮಿಗಳನ ಮಡ್ಡೆ ನಿರ್ವಂಚನ್ಯಾಗೆ ಕೆಲ್ಸ ಮಾಡೋನು. ನಾವು ಕ್ವಡೋ ದುಡ್ಡಿಗೆ ನೀನೆಂದೂ ಮಾಸ ಮಾಡಕಿಲ್ಲ. ಅದೇ ನಂಗೆ ತಾರೀಪು. ಅದುಕೆ ನಾನು-ಬಾಳೆ ಗುಣಿ ತೋಡೋದು, ನೀರು ಹರಿಯೊ ಹಿಕ್ಕಲು ಸೋಸೊದು, ಇಂತಾ ದೊಡ್ಡ ಕೆಲ್ಪ ಕಾರಗಳೆಲ್ಲ ನಿನ್ನೇ ಕರೆಯೋದು!... ಬಾಕಿಯೋವು ಬತ್ತವ-ಮೂದೇವಿ ಮುಕ್ಕಗಳು!... ಹಾರೆ ಇಳುಕಿ ನೆಟ್ಟಗೆ ಒಂದು ಮೊಳ ಗುಂಡಿ ತೋಡಿಲ್ಲ, ಗುದ್ದಲಿ ಆಡಿ ನೆಟ್ಟಗೆ ಮೂರು ಮೊಳ ಹಿಕ್ಕಲು ಸೋಸನಿಲ್ಲ-ನಡ ಬಿದ್ದೋದೊರಂಗೆ ಉಸ್ ಅಂದುಕುಂತುಗಂಡು ಬುಡೋದೇಯ.... ಅಂತಾ ಹೊಳ್ಳಂದೊಳ್ಳೆ ಆಸಾಮಿಗೊಳ ಕಂಡರೆ ನಂಗೆ ಉಂಗುಸ್ತದಿಂದ ಇಡಿದು ನಡುವೆತ್ತಿ ತನಕ ಉರಿ ಕಿತ್ತುಗತ್ತದೆ, ನ್ಯಾಡಪ್ಪ... ಚ್, ಅವರ ಮಾತು ಈಗ್ಯಾಕೆ ಬುಡು. ನೀ ಎಸ್ಸಾದರೂ ವಸಿ ಓದ್ದೋನು. ಅ-ಆ-ಇ-ಈ ಅನ್ನಕ್ಕಾರೂ ಬತ್ತದೆ. ಬಣ್ಣ ಒಂದೇ ಅಂತ ಕಾಗೇನೂ ಕೋಗಿಲೆನೂವೆ ಒಂದೇ ಅನ್ನಕಾದಾತ?- ನೀನೇ ಯೋಳು...' ಇದೇ ತರ ತನ್ನ ಕೆಲ್ಸ ಸಾಧಿಸಬೇಕಾದ್ರೆ ಮಾತ್ಮಾಡ್ಲಿ ಬೆಣ್ಣೆ ಸವುತ್ತಾನೆ ಇದ್ದಾನೆ... ಲಕ್ಕನ ಯೋಚ್ಛೆ ಇಂಗೆ ಗಾಣ ವೋಡೀತಿದ್ದಾಗ, ಕೆರೆ ಓಣಿ ತಿರುವಿನಲ್ಲಿ ಬೊಡ್ಡ ಒಂದೇ ಸಮನೆ ಬೋಗುಳ ಇದ್ದದ್ದ ಕೇಳಿ, “ಯಲ, ಇಲ್ಲೆ ನನ್ನ ಕಾಲು