ಪುಟ:ವೈಶಾಖ.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೫೧ ಆ ಕ್ಷಣದಲ್ಲಿ ಕೀರ ಆ ಜಾಗ ಖಾಲಿಮಾಡಿ, ಗುಡುಗಡೆ ವಾಟ ಹೈಡಿಯಕ್ಕೆ ಸುರು ಮಾಡ್ತು. ಆದ ಕಂಡು ಲಕ್ಕನ ಆಸಕ್ತಿ ಕೆರಳು, ಅವು ಕೇಳಿದ್ದಹಾಮ್ಮಿಂದ ಕಚ್ಚಿಸಿಕೊಂಡ ಕೀರ ತಕ್ಷಣದಲ್ಲಿ ಯಾವುದೊ ಮೂಲಿಕೆ ತಿಂತದೆ, ಅದರಿಂದ ಅದಕೆ ಹಾವಿನ ಇಸ ಅಂತಕ್ಕಿಲ್ಲ. ಅಂತಾವ... ಜನದ ಮಾತ ಪರೀಕ್ಷೆ ಮಾಡಬೇಕು ಅನ್ನುಸಿ, ಅದರ ಇಂದಿಂದೇನೆ ದೌಡಾಯಿಸ್ತ, ಆದರೆ ಆ ಕೀರ ಅಲ್ಲಿ ನುಗ್ಗಿ ಇಲ್ಲಿ ನುಗ್ಗಿ, ಅಲ್ಲಿ ನುಸುದು ಇಲ್ಲಿ ನುಸುದು, ವೋಟು ದೂರದವರೂ ಕಣ್ಣಿಗೆ ಕಾಣಿಸ್ತಿದ್ದದ್ದು, ಲಾಜಾದಲ್ಲಿ ಎತ್ತಾಗೊ ಪರಾರಿಯಾಯ್ತು. “ಬಡ್ಡಿ ಹೆತ್ತದ್ದು ಗಸ್ತು ಕ್ವಟ್ಟುಬುಡ್ತಲ್ಲ!” -ಬಾಯಿ ತುಂಬ ಸ್ಯಾಪ ಆಕ್ತ ಬತ್ತಾ ಇರೋನೂವೆ, ಕೆರೆ ಓಣೀಲಿ, ವೋಟು ದೂರದಲ್ಲಿ ಸವುದೆ ತುಂಬಿದ ಗಾಡಿಗೋಳು ಊರ ದಿಕ್ಕೇ ಇರಾದು ಮಂದಟ್ಟಾಗಿ, ಲಕ್ಕ, “ಯಾರ ಗಾಡಿಗಳು ಇವು?... ಈಟು ನತ್ರೀಲಿ ಸವುದೆ ತಕ್ಕಂಬರ ಬಂಜರ ಯೇನ ಇದ್ದದ್ದು?... ಇದರಾಗೆ ಯೇನಾರ ಇಕಮತ್ತು ಇರಬೈದ?”.. ತರ್ಕ ಮಾಡ್ಕತ್ತ, ಹಲಸಿದ ಮರದ ಮರೆಗೆ ಹೊಳ್ಳಿ ನಿಂತ. ಗಾಡಿಗಳು ಸಮೀಪಿಸ್ತ ಸಮೀಪಿಸ್ತ ಮಾರಿಗುಡಿ ಅಣ್ಣದೀರು-ಬೈಲಿಗರಂಗ, ಗುರುಮಲ್ಲು, ರುದ್ರ, ರಾಚೇವಾರದ ಕಾಳೂರ, ಕೊಪ್ಪಲು ಚೆನ್ನ-ಒಬ್ಬೊಬ್ಬರೂವೆ ಒಂದೊಂದು ಗಾಳ ವೋಡೀತ ಇದ್ದದ್ದು ಕಾಣುಸ್ತು. ಭರ್ತಿ ಗಾಡಿಗಳು, ಅವುಗಳ ತುಂಬ ಸವುದೆ!... ಗಾಡಿಗೊಳು ಊರ ವಳಿಕೆ ಬರದೆ, ಕೊಪ್ಪಲು ಓಣಿ ಚೋರೀಕೆ ತಿರುಕ್ಕಂಡೊ. ತಿರುಕ್ಕಂಡೋವ ಅಂಗೆ ನಿಂತೊ... ಯಾಕಪ್ಪ ನಿಂತೊ ಅಂತ ಲಕ್ಕ ಅಂತು ಸ್ವಾಡುದ್ರೆ, ಎದುರ್ಗೆ ನಂಜೇಗೌಡರು ನಿಂತಿ!- ಅವರು ಎಲಡಿಕೆ ರಸವ ಪಿಚಕ್ಷೆ ಉಗದು, “ಏನಲ್ಲ, ಹುಚ್ಚುಕಳ್ಳಿ ಸತ್ಯಾಗಿ ತುಂಬಿಕಂಡು ಬಂದಿದೀರೇನಲ?” - ಕೇಳಿದ್ದಕ್ಕೆ ಬೈಲಿಗ ರಂಗನ ದನಿ ಮುಂದಾಗಿ, ಉಳಿಕೆಯೋರ ದನಿಗಳೂ ಜ್ವತೆಯಾಗಿ, “ಊ, ಸಹ್ಯಾಗೆ ತುಂಬಿಕಂಬದಿವಿ ಕನ್ನಯ್ಯ” ಅಂದರು. “ಆ ಫಾರೆಸ್ಟ್ ಗಾರ್ಡು ರಾಮಯ್ಯನ, ನೀವು ಅಲ್ಲಿದ್ದಾಗ, ಫಾರೆಸ್ಟಿಗೆ ವೋಗದಂಗೆ ತಡೀಬೇಕಾದ್ರೆ ನಂಗೂವೆ ಇನ್ನೊಂದು ಸಲ ತಾಯಿ ವೋಟೇಲಿ ಉಟ್ಟಿ ಬಂದಂಗಾಯ್ತು. ಗಡದ್ದಾಗಿ ಊಟ ಆಕಿಸ್ಥೆ, ಕಯ್ಯ ಬೆಚ್ಚಗೂ ಮಾಡ್ಡೆ. ಆದ್ರೆ ಅವಯ್ಯಂಗೆ ಗ್ಯಾಮಾಳೆಯೇ ಇಲ್ಲ. ಪರ್ತಿ ಸಲಾನೂ ಸುಲುದು ಬುಡ್ಗನೆ” ಅಂದು, “ಊ, ಅದು ನನ್ನ ಅಣೆಬರಾವು. ಈಗ ಬುಡಿ ಗಾಡ್... ಪೊಲೀಸನೊರತ, ಮೈಸೂರು ತೋಲ್‌ಗೇಟ್ನಲ್ಲಿ ಜ್ವಾಪಾನ. ಈಟು ಜಿನದಂಗೇಯ ಆ ಪಿಶಾತಿಗಳೆ