________________
೧೫೮ ವೈಶಾಖ “ಸಾಸ್ತಿಗೋಳು ತ್ವಾಟದಿಂದ ಬರನಿ, ರುಕ್ಕಿಣವ್ವ ?” ಕೇಳಿದ. ಅವ್ವ ಎಂದು ನಂಜೇಗೌಡ ತನ್ನನ್ನು ಸಂಬೋಧಿಸಿದ್ದು ರುಕ್ಕಿಣಿಯ ಕ್ರೋಧವನ್ನು ಇಮ್ಮಡಿಸಿತು. “ಹೊರಗೆ ಅವ್ವ ಅನ್ನೋದು, ಒಳಗೆ ಮಗ್ಗುಲಿಗೆ ಮಲಗಿಸಿಕೊಳ್ಳಲು ಬಾಯಿ ಬಾಯಿ ಬಿಡೋದು... ಜನ ಅನ್ನೋ ಹಾಗೆ, ಈ ಗೌಡ ಹೀನಸುಳಿ. ಇವನ ಬಗ್ಗೆ, ಹೆತ್ತ ತಾಯ ಲಾಡಿ ಬಿಚ್ಚಿ ಬಡ್ಡಿಹೈದ ಅಂತ ಬುಂಡಮ್ಮ ಹೇಳೋ ಮಾತು ಸಂಪೂರ್ಣ ಸತ್ಯ!” ಎಂದು ಸಿಡಿಮಿಡಿಗುಡುತ್ತ ಒಳನಡೆದಿದ್ದಳು. ರಾತ್ರಿ ಮಲಗುವಾಗ ಸರಸಿಯದೇ ನೆನಪು. ಮಲಗುವ ಮುನ್ನ ಮಾವಯ್ಯ ಬಾಯಿಪಾಠ ಮಾಡಿಸಿದ್ದ, ರಾಮಂ ಸ್ಕಂದಂ ಹನೂಮಂತಂಶ್ಲೋಕವನ್ನು ತಪ್ಪುತಪ್ಪಾಗಿಯಾದರೂ ಅವಳು ಹೇಳಿ ಮುಗಿಸಿಲೇಬೇಕು. ಪ್ರಾತಃಕಾಲ ಏಳುವಾಗಲೂ ಅಷ್ಟೆ, ಎರಡು ಹಸ್ತಗಳನ್ನೂ ಉಜ್ಜಿ ನೋಡಿಕೊಳ್ಳುತ್ತ -ಕರಾಗೇ ವಸತೇ ಲಕ್ಷ್ಮೀ, ಕರಮಧ್ಯೆ ಸರಸ್ವತಿ, ಶ್ಲೋಕ ಹೇಳಬೇಕು. * ಮಲಗುವ ಮುನ್ನ ಯಾವುದಾದರೂ ಕಥೆ ಹೇಳೆಂದು ಗಂಟು ಬೀಳುತ್ತಿದ್ದುದೂ ಉಂಟು. ಅದರಲ್ಲೂ “ಬುಡ ಬೆಳ್ಳಿ, ನಡುಚಿನ್ನ, ಎಲೆ ಪಚ್ಚೆ, ಗೊನೆ ಮುತ್ತು ಎನ್ನುವ ಬಾಳೆಕಂಬದ ಕಥೆ” ಅವಳಿಗೆ ಬಹಳ ಮೆಚ್ಚು... ಈ ರಾತ್ರಿ ಎಷ್ಟು ಪ್ರಯತ್ನಿಸಿದರೂ ನಿದ್ರೆ ಬಾರದೆ ಹೊರಳಾಡುತ್ತಿರುವಾಗ, ಸರಸಿ ಪಕ್ಕದಲ್ಲಿ ಮಲಗಿ ಕಥೆ ಕೇಳುತ್ತಿರುವಂತೆಯೂ ತಾನು ಅವಳನ್ನು ಮೃದುವಾಗಿ ತಟ್ಟುತ್ತ ಆ ಕಥೆಯನ್ನು ಮತ್ತೊಮ್ಮೆ ಹೇಳುತ್ತಿರುವಂತೆಯೂ ಭಾಸವಾಯಿತು: ಈ ಎಲ್ಲಾ ಅಡಸಗೊಲಜ್ಜಿ ಕಥೆಯಂಥದೆ ಒಂದು ಕಥೆ ಅದು. ಒಬ್ಬ ರಾಕ್ಷ ಒಬ್ಬಳು ರಾಜಕುಮಾರಿಯನ್ನು ಹೊತ್ತುಕೊಂಡು ಹೋಗಿ ಘೋರಾರಣ್ಯದ ನಡುವೆ ಇದ್ದ ಒಂದು ಭಾರಿ ಬೆಟ್ಟದಲ್ಲಿದ್ದ ಗುಹೆಯೊಳಗೆ ಸೇರಿಸಿ, ತನ್ನನ್ನು ವರಿಸುವಂತೆ ಆ ರಾಜಕುಮಾರಿಯನ್ನು ಒತ್ತಾಯಿಸುತ್ತಿರುತ್ತಾನೆ. ಎಲ್ಲಾ ಕಥೆಗಳ ರಾಜಕುಮಾರಿಯಂತೆ ಆ ರಾಜಕುಮಾರಿಯೂ ಮಹಾಚೆಲುವೆಯಾಗಿದ್ದುದೇ ಅಲ್ಲದೆ, ತುಂಬಾ ಜಾಣೆಯೂ ಆಗಿರುತ್ತಾಳೆ. ತಾನೊಂದು ವುತ ಆಚರಿಸುತ್ತಿರುವುದಾಗಿಯೂ ನಲವತ್ತೆಂಟು ದಿನಗಳ ಆ ವ್ರತ ಮುಗಿಯುತ್ತಲೂ ತಾನು ಅವನ ವಶಳಾಗುವುದಾಗಿಯೂ ತಂತ್ರ ಹೂಡುತ್ತಾಳೆ. ಅವಳ ಮಾತಿಗೊಮ್ಮೆ ಒಂದು ದಿನ, ಯಾವಾಗಲೂ ಹೊರಗೆ ಹೊರಡುವಾಗ ಮಾಡುತ್ತಿದ್ದಂತೆ ಒಂದು ಬಂಡೆಯನ್ನು ಆ ಗುಹೆಯ ಬಾಯಿಗಿಟ್ಟು ಮುಚ್ಚಿ ತರುವಾಯ ಅವನು ಆಹಾರವನ್ನರಸಿ ತೆರಳಿರುವ ವೇಳೆಯಲ್ಲಿ, ಬೇಟೆಗೆಂದು ಬಂದ