ಪುಟ:ವೈಶಾಖ.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೬ ೫ ಹುಣಸೂರವರೆಗೆ ನಡದೋರು, ದ್ವಾವಾನಿ, ಕುಂಡಿಮಾದಿ, ಕುರುಬರ ಸಣ್ಣ, ಕುಂಬಾರರ ಲಕು, ಅವಳ ಗಂಡ ಮಾದಸೆಟ್ಟಿ, ಮತ್ತೆ ಸಕುನಿ ಕೊಪ್ಪಲ ಗೋಸು ಸಾಬರ ಮಗ ಬುಡನ್. ದ್ಯಾವಾಜಿ ವಂದಿಗಿದ್ದರೆ ಹೊತ್ತೋಗೋದು ತಿಳಿಯಕ್ಕಿಲ್ಲ... ಯಾರನಾದರ ತೀಟೆ ಮಾಡಬೇಕು. ಜ್ವತೇಲಿದ್ದೋರ ನಗಾಡಿಸಬೇಕು. ತಾನೂವೆ ನಗಾಡಬೇಕು. ಸಸನೆ ಹಾದೀಲಿ ವೋಗೋದು ಅವಳ ಜಾಯಮಾನಕ್ಕೆ ಬಂದಿರನಿಲ್ಲ. “ಯಾನು ಕುಂಬಾರಸೆಟ್ಟರೆ, ನಿಮ್ಮ ಲಗ್ಗಾಗಿ ಏಟು ವರ್ಸ್ ಆಯ್ತು?” -ಮಾದಸೆಟ್ಟಿಯ ಕೆಣಕಿದ್ದು. “ಯಾಕ ದ್ಯಾವಾಜಿ, ಎಂಟೊಂಬತ್ತು ವರ್ಸ ಆಗಿರಬೈದು”- ನಾಚುತ ಯೋಳಿದ ಮಾದ- ಸೆಟ್ಟಿ, - “ಚ್, ಚ್, ಚ್!- ಎಂಟೊಂಬತ್ತು ವರ್ಸ... ಈಟು ವರುಸಕೆ ನಾಕೈದು ಮಕ್ಕಳಾರು ಆಗರಬೇಕು... ವೋಗ್ಲಿ ಬೊಡ್ಡಮಗಂದು ಒಂದಾದರೂ ಬ್ಯಾಡದ?” ಅಂದಾಗ, ಮಾದಸೆಟ್ಟ ನಾಚಿ ತಲೆತಗ್ಗಿಸ್ತ, ಸಿವುನಿ ಕ್ವಾಡ್ತಾನೆ ಇದ್ಲು. ಅವನ ಎಡತಿ ಮೊದಲೇ ಕೆಂಪಿನಿ ಎಣ್ಣು. ಈ ಮಾತ ಕೇಳಿದ್ದಂಗೆ ಮೊಖದ ತುಂಬ ಕುಂಕುಮ ಎರುಚಿದಂಗಾಯ್ತು... ಉದ್ದಕ್ಕೂ ಇಂಗೇ ಏನಾರ ತೀಟೆ ಮಾಡ್ತ, ಪರಸಂಗ ಯೋಳ, ಲಲ್ಲೆ ವೊಡೀತ, ಹುಣಸೂರು ಹತ್ರ ಆಯ್ತಿದ್ದಂಗೆ, ಸಿವುನಿಯ ವಕ್ಕಡೆ ಕರದು, ಯಾರಿಗೂ ಕೇಳಿಸದಂತೆ ಕಿವೀಲಿ, “ಸಿವುನಿ, ನೀನು ನಮ್ಮೂರಿಗೆ ಬಂದು ಏಟು ಕಾಲ ಆಯ್ತು?”ಪಿಸುಗುಟ್ಟಿದ್ದು. “ಯಾಕತ್ತೆ?- ಏಡೋ ಮೂರೋ ತಿಂಗೈ ಆಗಿರಬೈದು.” “ಅವ್ವ, ಏಟೊಂದ ಜಿನ ಆಗೋಯ್ತು... ನಾ ಒಂದು ಮಾತ ಕೇಳುದ್ರೆ ಕ್ವಾಪ ಮಾಕ್ಕಂಡೀಯ?” “ಅದೇನು ಕ್ಯಾಳತ್ತೆ?” “ಅಲ್ಲ ಕನೆ ಸಿವುನಿ, ನಿಂಗಿನ್ನೂ ಚಿಕ್ಕ ಪ್ರಾಯ. ನೆಲ ಗುದ್ದಿದ್ರೆ ನೀರು ಕಡುಸೊ ವಯಸ್, ಗಂಡ ಇಲ್ಲೆ ಈಟು ಕಾಲ ಒಬ್ಬಳೇಯ ಎಂಗೆ ಸೈಸಿಕಂಡಿದ್ದೀ?”ಕ್ಯಾತೆ ಮಾಡದಾಗ, ಸಿವುನಿಗೆ ಸಾಜವಾಗೂ ಮೆಯ್ಕೆಲ್ಲ ಉರೀತು. “ಆಲಾದೋಳೆ...” ಅಂದು, ಇನ್ನೂ ಏನೇನೋ ಮಸ್ತಾಗಿ ಬಯ್ಯಬೇಕು ಅನ್ನೂ ವಸ್ಟರಲ್ಲಿ ದ್ಯಾವಾಜಿ ಕುಂಡಿಮಾದಿ ತಕ್ಕೆ ಜಾರಿ, “ನಿನ್ನ ಎಣ್ಣಿಗೆ ಗಂಡೆಲಿ ಕ್ವಾಡಿದ್ದೀ, ಮಾದಿ?- ನಮ್ಮ ಕಲ್ಯಾಣಿ ಮಗ ಲಕ್ಕ ಆದ್ರೆ ಯೆಂಗೆ?... ಜೋಡಿ