ಪುಟ:ವೈಶಾಖ.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೮ ವೈಶಾಖ ವೋಗಾನೆ, ಬಟ್ಟಲ್ಲದಿದ್ರೆ ಸಮಾಸು-ಅಂದ. ಇನ್ನೇನ ಮಾಡಾದು ಅಂತ ನಾವೇಡಾಳೂವೆ ಅಂಗಡಿ ಮುಂಚೂರಿ ಹಬ್ಬುಗೆಗಳ ಇಳೀತಿರೋ ಸಮಯಕೆ ಸರಾಗಿ ನಮ್ಮಿ ಕೇಸವಯ್ಯಾ ಕಾಣಿಸುದ್ದು, ನಮ್ಮ ಕಂಡು-ಯೇನಲ್ಲಾ ಇಲ್ಲಿ ಅಂದ್ರು, ನಾನೂವೆ ಇಸ್ಕಾನೆಲ್ಲ ಯೋಳಬೇಕಾಯ್ತು. ಯೆಲ್ಲಾನು ಕ್ಯಾಳಿ-ಈಟೇಯ? ಇದ್ಯಾವ ಬೋ ಗನಂದಾರಿ ಇಸ್ಕಾಂತ ಚಿಂತೆ ಮಾಡ್ತೀರೊ? -ಬನ್ನಿ ಬನ್ನಿ, ನಾನು ಕಡ ಕ್ವಡುಸ್ತೀನಿ. ನೀವಿಬ್ರೂವೆ ಆಗಾಗ ಬಂದು ನಮ್ಮ ತ್ವಾಟದಲ್ಲಿ ಕಂಬಳ ಮಾಡಿ ತೀರಿಸುದೆ ಆಯ್ತು- ಅಂತ, ಅಂಗಡಿ ವಳಕ್ಕೆ ಕರಕಂಬ೦ದು ಕಡುಸ್ತಾ ಆವರೆ!.... ನೀ ಬ್ಯಾಡ ಅನ್ನಬ್ಯಾಡ, ಸುಮ್ಮೆ ನಿಂಗೆ ಪಸಂದು ಅನ್ನುಸ್ಥ ಒಂದು ಸ್ಯಾಲ್ಯ ತಕ್ಕಂಡು, ಜತೆ ಒಂದು ರವಿಕೆ ಚೀಟಿನೂವೆ ಆರಿಸು.” ಸಿವುನಿ “ನಂಗೆ ಯಾನೂ ಬ್ಯಾಡಾಕೆ ಬ್ಯಾಡ” ಅಂದು, ರಂಗಪ್ಪಶೆಟ್ಟರ ಅಂಗಡಿ ಆಚೆಗೆ ಹೊಂಟೇ ವೋದಳು. ಅವಳು ಅಂಗಡಿ ಮೆಟ್ಟಿಲ ಇಳಿಯುವಾಗ ತೂಗಾಡುವ ಅವಳ ಹಿಂಭಾಗದ ಚೆಂದವನ್ನು ನಿಟ್ಟಿಸುತ್ತಿದ್ದ ಕೇಶವಯ್ಯ, - “ಭೇಷ್, ಭೇಷ್. ನಿನ್ನ ಮಗಳ ನಡತೆ ನನಗೆ ತುಂಬಾ ಮೆಚ್ಚಿಕೆಯಾಯ್ತು, ಕಣೋ, ನಿಂಗ... ಅಬ್ಬ, ಎಂಥ ನಿಷ್ಟುರಗಾತಿ. ಹೆಣ್ಣು ಎಂದರೆ ಹೀಗಿರಬೇಕು?... ಬೇಡ, ಬೇಡ. ಅವಳಿಗೆ ಇಷ್ಟವಿಲ್ಲದ್ದನ್ನ ತೆಗೊ ಎಂದು ಜುಲುಮೆ ಮಾಡೋದು ನ್ಯಾಯವಲ್ಲ.... ಸಂಸಾರವಂದಗಿತ್ತಿ ಎಂದರೆ ಹೀಗಿರಬೇಕು, ನೋಡು, ನನ್ನ ಹೆಂಡತಿ ಹಾಗೆ ದಂಧರಾಳಿ ಅಲ್ಲ, ಇವಳು!... ಇಂಥ ಮಗಳ ಪಡೆಯೋಕೆ ನೀನು ಬಲು ಪುಣ್ಯ ಮಾಡಿದ್ದೆ ಕಣೋ, ನಿಂಗ!”- ಎಂದು ನುಡಿಯುವಾಗ ಅವನ ಒಂದೊಂದು ಮಾತು ಒಂದೊಂದು ಮುತ್ತಿನಂತೆ ನುಣುಪಾಗಿ ಹೊರಬಿದ್ದಿತ್ತು. ನಿಂಗಯ್ಯನೂ ಕೇಶವಯ್ಯನ ಅಭಿಪ್ರಾಯವನ್ನು ಒಪ್ಪಿ ಕತ್ತು ಕುಣಿಸಿದ. “ರವಿಕೆಯನ್ನು ಹೊಳಿಸಬೇಕಾದರೆ, ನಿನ್ನ ಹೆಂಡತೀದೊಂದು ಹಳೆ ರವಿಕೆ ಅಳತೆಗೆ ಬೇಕಲ್ಲಪ್ಪ?” - ಕಟ್ಟಿದ ಜವಳಿಯನ್ನು ನಿಂಗಯ್ಯನ ಕೈಗಿಡುತ್ತ ರಂಗಪ್ಪಶೆಟ್ಟರು ಕೇಳಿದರು. ಅದಕ್ಕೇ, “ನಾಳೀಕೆ ನಮ್ಮೋರು ಯಾರಾರ ಹುಣಸೂರೆ ಬರೋರ ಕಯ್ಲಿ ಕಟ್ಟು ಕಳುಸ್ತೀನಿ” ಎಂದು, ನಿಂಗಯ್ಯ ಜವಳಿ ಗಂಟನ್ನು ಕಂದುಳಲ್ಲಿ ಇರುಕಿ ಮೆಟ್ಟಿಲುಗಳನ್ನಿಳಿದು ಲಕ್ಕ ಅವನನ್ನು ಹಿಂಬಾಲಿಸಿದ. ನಿಂಗಯ್ಯ, ಲಕ್ಕ ಇಬ್ಬರೂ ಸಿವುನಿಯನ್ನು ಕೂಡಿಕೊಳ್ಳತ್ತಲೂ, ನಿಂಗಯ್ಯ “ಹುಣಸೂರಲ್ಲಿ ಇನ್ನೇನಾರ ಕೇಮೆ ಇದ್ದಾತ?- ಊಗ್ಗೆ ಮೊಂಡಾದು