ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೮ ವೈಶಾಖ ಕುಂದೂರಯ್ಯ ಒಳಗಡೆ ಕಾಲಿಡುತ್ತಿದ್ದಂತೆಯೆ, “ಅಸ್ಸಿಸ್ಸಿ-ಗಬ್ಬುನಾತ!... ಯಾವಾಗ ಬುಟ್ಟಿಯೊ ತಮ್ಮ ಈ ಚಾಳ್ಯ?... ಇದು ಪಾಟಾಗಿ ನನ್ನ ಮಗ ನಿಪಾತಾದ. ಸದ್ಯಕ್ಕೆ ನಿನ್ನ ಮಗ ಕಲೀನಿಲ್ಲವಲ್ಲಅದೇ ನಂಗ ಚೋಜಿಗ!” – ಹೇಳುವಾಗ ಅವನ ದನಿಯಲ್ಲಿ ಕಡುಬೇಸರ ಹಾಗೂ ನೋವು ತುಂಬಿದ್ದವು. ಆ ಮಾತಿಗೆ ತನ್ನ ಅಯ್ಯ ಇಲಿ ಸುಂಡನಂಗೆ ಮುಲಕಾಡೋದು ನೋಡಿ, ಲಕ್ಕನಿಗೆ ನಗು ಬಂತು... ಅಯ್ಯನಿಗಿಂತಾನು ಭಾರಿ ಅಳು ದೊಡ್ಡಯ್ಯ, ಉದ್ದಕ್ಕೆ, ದಪಗೆ, ತ್ಯಾಗದ ಮರದಂಗೆ ಹುಲುಮಲವಾಗಿ ಬೆಳುದಿದ್ದ. ಅವನ ತಲೆ, ಕೆಪಾಲ, ಗದ್ದ ಯೆಲ್ಲಾ ಕಡೇನೂವೆ ನರೆಕೂದಲು ಅಲ್ಲಲ್ಲ, ಅಲ್ಲಲ್ಲೆ ಸುರುಳಿ ಸುತ್ತುಗಂಡು ಅವನ ಅಗಲಾದ ಮೊಖವ ನ್ಯಾಡಕ್ಕೆ ಯಾರಿಗಾರು ಎದುರಿಕೆ ಆಗೋವಂಗಿತ್ತು, ಆದರಾಗು ಅವನು ಚೂಪುಗಣ್ಣ ಬುಟ್ಟುಗಂಡು ತಿವಿಯೋನಂಗೆ ದ್ರುಸ್ಟಿಸ್ತ ಬತ್ತಿರಬೇಕಾರೆ, ಎದುರುಗಡಿಂದ ಒಂದು ಹೆಬ್ಬುಲೀನೆ ಬಂದಂಗೆ ಜನ ಬೆದುರೋರು!... ಆದರೆ ದೊಡ್ಡಯ್ಯ ಈಗ ಕಯ್ಯ ಕಾಲು ತೊಳುದು ತಮ್ಮೆಲ್ಲಾರೊಟ್ಟಗೆ ಉಣ್ಣಕ್ಕೆ ಕುಂತಾಗ, ಅವನ್ನ ಸ್ವಾಗ್ತಿದ್ದಂಗೆ ಲಕ್ಕಂಗೆ ಅಯ್ಯೋ ಅನ್ನಿಸಿ, ಹೊಟ್ಟೆ ವಳಗೆ ತೊಳುಸಿ ಬಂದಂಗಾಯ್ತು. ಸಾಧಾರಣಾಗಿ ಮರಿ ಕಡಿದರೆ, ನಾಕಾಳು ತಿನ್ನೊ ಮಾಂವುಸವ ಒಬ್ಬೆ ಒಬ್ಬಾಲಕೆ ತಿಂದು ಮುಗುಸೋನು, ಈಗ ಪಾಪ ಅಯ್ಯ ತಿಂದದ್ರಲ್ಲಿ ಅರ್ಧಾನು ತಿನ್ನನಾರೆ, ಅವ್ವ ಏಟು ಬರೇಲಿ ಜುಲುಮೆ ಮಾಡಿ ನೀಡುತ್ತೀನಿ ಅಂದರೂವೆ, ಬ್ಯಾಡ ಅಂತೆದ್ದು ಕಯ್ಯ ಊಳುದು ವೊಂಟೋಯ್ತಿದ್ದ. * ಮುಂಬೈ ಮೂರು ನಾಕು ಜಿನ ಲಕ್ಕ ಯಾವ ಕೇಮೆ ಮಾಡ್ತಿದ್ದರೂವೆ ದೊಡ್ಡಮ್ಮ ರೂಪೇ ತನ್ನೆದುರೆ ಬಂದು ನಿಂತಂಗೆ ಆಗೋದು!... ಅವನ ಮಗ ಮುಟ್ಟಾರಿ ಇದ್ದಾಗ, ಅವನ್ನ ಇಡುದು ನಿಲ್ಲಸಾರು ಯಾರದ್ರು ನಮ್ಮೂರಿನಾಗೆ!ಉತ್ತುಮರೂ ಕೂಡ ಅವ್ರ ಕೆಣುಕಕ್ಕೆ ಇಂದು ಮುಂದು ನೋಡ್ತಿದ್ರು. ಆದರೆ, ಅವನ ಎಡತಿ-ನಮ್ಮ ದೊಡ್ಡವ್ವ, ಅವಳ ಜತೆ ಲಗ್ಗಾಗಿದ್ದ ಒಬ್ಬಳು ಎಣ್ಣಮಗಳೂವೆ ಪ್ಲೇಗಾಗಿ ತೀರಿಕಂಡದ್ದೂ ಅಲ್ಲದೆ, ಅವನ ಇರಿಮಗ ಕಿರಿಮಗ ಇಬ್ಬರೂವೆ ಮಲೆ ಮದೇಶ್ವರನ ಬೆಟ್ಟಕ್ಕೆ ಅರಕೆ ವಪ್ಪುಸಕ್ಕೆ ಊರಿನ ಇನ್ನೂ ಬ್ಯಾರೆ ಕುಳಗಳೊಂದ್ದೆ ವೋದೋರು, ಅಲ್ಲಿ ವಾಂತಿಭೇದಿ ರೋಗ ಅಮರಿಕಂಡು, ಅವರೆಲ್ಲಾರ ಜ್ವತೆ ಸುರೀಟಾಗಿ ಕೈಲಾಸ ಸೇರುದಾಗ, ದೊಡ್ಡಯ್ಯ ಅಲ್ಲಿಗಂಟ ತನ್ನೆದೆಯ ಮ್ಯಾಕ್ಕೆ