ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೦ ವೈಶಾಖ ಇದ್ದಂತೆ. ವೋಟಲ್ಲಿ, ವಂದಿಗೇ ಬತ್ತಿದ್ದ ಚಿಲ್ಲರೆ ಅಂಗಡಿ ಸೂಸಾನಮ್ಮ ಅಂಗೂ ಅವರ ಗೆಣೆಕಾರ ಪಿಳಿಪ್ಪು ಇಬ್ಬರೂವೆ ಅವ್ರು ಬಿದ್ದೋಗದಂಗೆ ತಬ್ಬಿ ಇಡಿದು ಎಂಗೆಂಗೂ ಮೆತ್ತಮೆತ್ತಗೆ ನಡುಸಿಗುತ್ತ ಉಪಾಯಾಗಿ ಕಿರಿಸ್ತಾನ ದೊಡ್ಡಿಗೆ ಅಮ್ಮ ತಟಾಯಿಸಿ, ಸುಸಾನಮ್ಮ ಅಂಗಡಿ ಮನೆ ಕೂಡಿದ್ರಂತೆ! ಆ ಸೂಸನಮ್ಮ ಅಂಗಡಿ ಮನೇಲಿ ಪೂರಾ ನಾತ್ರೆ ಕ್ವಿಂಟಾಗಿ ಬಿದ್ದಿದ್ದ ನಮ್ಮಣ್ಣ ಪುಟ್ಟಾರಿಗೆ ಬೆಳುಕು ಅರೀಫ್ ಎಚ್ಚರಾದಾಗ ತನ್ನೆದುರೆ ಕೆಪ್ಪಟೆ ಕೆಂಪು ಲಂಗ ಉಟ್ಟು, ತೆಳೆ ಬೆಳೆ ಸುಳುದಾಡ್ತಿದ್ದ ಸುಸಾನಮ್ಮ ಅರೇದೆಣ್ಣು ಲೂಸಿ ಅನ್ನಾಳ ಕಂಡ ಬೆರುಗಾಡ್ರಂತೆ!... ಅವನೆದ್ದದ ಗಮ ತಟಕ್ಕೆ ಓಡೋಗಿ ಟೀ ಕಾಯ್ಕಿ ಗಾಜಿನ ಗಳಾಗ್ನಲ್ಲಿ ತಂದು ಕೃಷ್ಣಂತೆ ಲೂಸಿ... “ನೀ ಯಾರು?” ಮುಟ್ಟಾರಣ್ಣ ಉಸುರಿದ್ದಂಗೇಯ, ಇಂದುಗಡೀಂದ ಬಂದ ಸೂಸಾನಮ್ಮ, “ಯಾಕಪ್ಪ, ಇವುಳುನನ್ನ ಮಗಳು, ಲೂಸಿ” ಅಂದ್ದಂತೆ. ಸರಿ, ಅಂದು-ಮೊಖ ತಳಕಂಡು, ಲೂಸಿ ಕ್ವಟ್ಟ ಟೀ ಹೀರಿ, ಮುಟ್ಟಾರಿ - “ಅಪ್ಲೋಯ್, ನಾತ್ರೆ ಪೂರಾ ನಿಮ್ಮ ಗುಡ್ಡಲ್ಲೆ ಮನಗಿಬುಟ್ಟಿದ್ಮಾ? ಸರಿಕವ್ವ ನಾತ್ರೆ ಯೆಲ್ಲೋಗಿದ್ದೆ ಅಂದ್ರೆ, ನಮ್ಮಯ್ಯಂಗೆ ಯಾನಂತ ಜಬಾಬು ಕೂಡ್ಲಿ?”- ಪೇಚಾಡದಂತೆ – ಅದುಕೆ, “ಅದ್ಯಾಕಪ್ಪ ಮೊಸ್ಸು ಪೇಚಾಡೀ? -ಯೇನಾರ ಒಂದು ಸುಳ್ಳು ಜೋಡುಸುದ್ರಾಯ್ತು” ಅನ್ನಾದ ಸೂಸಾನಮ್ಮ? ನಮ್ಮ ಪುಟಾರಣ್ಣ ಫಟ್ ಅಂತ ಯೋಳಿದಂತೆ: “ಸುಳ್ಳು ತಪವಟ ನನ್ನ ಜಲ್ಮದಾಗೆ ಬರನಿಲ್ಲ. ನಡದುದ್ದು ನಡದಂಗೆ ಯೋನಿ, ಅಯ್ಯನ ಕುಟ್ಟೆ... ಮಾಡಿದ ತೆಪ್ಪಗೆ ಅಯ್ಯ ಬಲ್ಕಿದ್ರೆ ಬಲ್ಕಿಸ್ಕತ್ತೀನಿ.”

  • ಅಂಗೇನೆ ಆಯ್ತು. ಅಣ್ಣ ಯೋಳಿದ್ದ ಕ್ಯಾಳಿ ದೊಡ್ಡಯ್ಯ ರಾಂಗ್ ರಾಂಗ್ ಆದ.

“ನೀ ಕುಡೀತಾನೇಂತ ನಂಗೂ ಬಂದಿತ್ತು ಕನ್ಹ. ನಾ ನಂಬಿಲ್ಲ. ಈಗ ನೀನೇಯ ರುಜ್ವಾತು ಮಾಡಿ ಯೋಳ್ತಿದ್ದಾಗ ಇನ್ನೇನ ಉಳಿದಿರಾದು?... ನೀನು ಚಿಕ್ಕೋನು ಪುಟ್ಟೋನು ಆಗಿದೆ, ದಡಿ ತಕ್ಕಂಡು ಚಮಚ ಸುಲೀತಿದ್ದೆ. ಈಗ ದಾನ ಧಡಿಯ ಆಗಿ ಬೆಳುದು ನಿಂತಿದ್ದೀ. ಈಗ ನಿಂಗೇನು ಯೋಳೊ ಅಂಗಿದ್ದದ್ದು?- ನನ್ನತ್ರ ಒಂದೇ ಮಾತು: ಪುನಾ ಈ ಇಂಗೇನಾರ ಅನಾವುತ ಮಾಡ್ಕಂಡು ಆ ಕಿರಿಸ್ತಾನದ ಲೌಡಿ ತಾವಿಕ ಯೇನಾರ ಹ್ವಾದೆ, ಆಮ್ಯಾಕೆ ನನ್ನ ಗುತ್ತಿಗೆ ಮಾತ್ರ ನೀ ಕಾಲ ಆಕಬಾರು. ಈ ಮಾತು ಗಟ್ಟಿ-ತಿಳುಕೊ...”