________________
೧೮೨ ವೈಶಾಖ ಸಂತೇಲಿ ಖರೀದಿ ಮಾಡಿದ್ದ ಸಾಮಾನ ನನ್ನ ವಸಕ್ಕೊಮುಸಿ ವೋದ... ಅವನು ಅಂಗಡಿ ಮನೆ ವಳುಗೆ ವೋದ್ದೇ ಸಮ, ಮುಂದುಕೆ ನಡದ್ದ ಯೆಲ್ಲಾವು ಅವಂಗೆ ಒಂದು ಕನಸ ಕಂಡಂಗೇ ಆಯ್ತಂತೆ!... ವಳಗೆ ಕುಂತುಗಂಡ ಕೂಡ್ಲಿ. “ಲೂಸಿ ಯೆಲ್ಲ?” ಕ್ಯಾಳಿದ್ದಂತೆ. “ವಳುಗವಳೆ, ಬತ್ತಾಳೆ, ನಾನಿಲ್ಲಿ ಬಂದೆ” ಅಂತ ಮನೆ ಮೊರಗೋದೋಳು, ಅವಳು ವಾಪ್ಪು ಬಂದಾಗ ಅವಳ ವಂದುಗುಟ್ಟೆ ಆ ದೊಡ್ಡ ಕಿರಿಸ್ತಾನದ ಗುರು ರೋಸಯ್ಯ ಪಾದ್ರಿನೂ ಬಂದರಂತೆ. ಇವತ್ಯಾಕಪ್ಪ ಬಂದರೂಂತ ಅಣ್ಣಂಗೆ ಜೋಜಿಗ... ಬಂದೋರೆ, ಸಿದ್ದು ಬಡಿದಂಗೆ ಯೋಳಿದರಂತೆ! “ನ್ಯಾಡಪ್ಪ, ಮುಟ್ಟಾರಿ, ನೀನು ಈ ಸೂಸಾನಮ್ಮ ಮಗಳು ಲೂಸ್ಯ ಬೋಸರು ಮಾಡಿದ್ದೀ. ಅವುಳಿಗೀಗ ನಾಕು ತಿಂಗಳು...” ಈ ಮಾತುಗಳು ಕಿವಿಗಿಳಿತಿದ್ದಂಗೆ, ಅಣ್ಣ ಭೂಮಿಗೆಕುಸುದೋಗಿ “ನಾಕು ತಿಂಗಳ ಇಂದ್ರೆ ಅವಳಾಗಿ ಈ ಸೂಸಾನಮ್ಮನ್ನಾಗಿ, ನಾ ಕಂಡೆ, ಇರನಿಲ್ಲ...” ಅಂದುದಕೆ, ಆ ಗುರುವು “ನೀ ಏಟು ಜಿನದಿಂದ ಅವಳ ಸಮ್ಮಂದ ಇಟ್ಕಂಡಿದ್ದೀ ಅನ್ನಾದ ನಾ ಬಯಾ ?... ಈಗ ಲೂಸಿ ನಿನ್ನಿಂದ ಬೋಸರಾಗಿರಾದಂತೂ ಗಟ್ಟಿ, ಆ ಕಾರಣಕ್ಕೇ ಅವುಳ್ಳ ನೀನು ಲಣ್ಣಾಗಬೇಕು” ಅಂದೊರು, ಕಿಟಿಕಿ ಆಚೆ ನ್ಯಾಡ, ಸಿಕರೋಟು ಕತ್ತುಸುದ್ರಂತೆ. “ನಾಕು ತಿಂಗಳ ಆಗಿದೆ ಕಂಡ ಅವುಳು ಬ್ಯಾರೆ ಯಾರೋ ಬೋಸರಾಗಿರಬೇಕು. ನಂಗೂ ಅವುಳೂ ಸಮ್ಮಂದ ನ್ಯಟ್ಟಗೆ ಏಡು ತಿಂಗಳೂವೆ ಮುಟ್ಟಿಲ್ಲ...” ಅಣ್ಣ ವರಲುದ್ದು ಯಾವ ಸಪಲಕೂ ಬರನಿಲ್ಲ. ರೋಸಯ್ಯ ಗುರುಗೋಳು ಆ ದೊಡ್ಡ ಇನ್ನೂ ಮೂರು ನಾಕು ಜನ ಕರುಸಿ ಪಂಚಾತೀನೆ ನಡಸಿದ್ರಂತೆ. ಅವರೆಲ್ಲಾರೂವೆ ಅಣ್ಣನ ಕ್ಯಾಳಿದ್ದು ಒಂದೇ ಪ್ರಶ್ನೆ: “ನಿಂಗೂ ಲೂಸಿಗೂವೆ ಸಮುದ ಉಂಟ, ಇಲ್ವ-ವೊಸ್ಸು ಯೋಳು, ಸಾಕು.”- ಅದುಕೆ ನಮ್ಮ ಪುಟ್ಟಾರಿ, “ಹಯ್ಯೋ, ನಿಮ್ಮುಂದೆ ಅದ್ಯಂಗೆ ಸುಳ್ಳು ನುಡೀಲಿ?- ಉಂಟು... ಮಾತ್ರ ನಾಕು ತಿಂಗ ಆಗಿದ್ರೆ, ಅದು ನನ್ನ ಸುಪರ್ದಿಗೆ ಬರಾ ಇಸ್ಯ ಅಲ್ಲ” ? (