ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೮೫ ಬಿರನೆ ಯೋಳು...” ಅಂತಿದ್ದಂಗೇಯ, ರಾಗಿತೆಂಬೆ ವಳುನ್ನಿಂದ ಯಾರೊ ಜೋನ್ನಿಂದ ಸೀನು ಕಡಸುದ್ದಲು ಕೇಳುಸ್ತು, ಬೆಟ್ಟೋಗಿ ಖಾಲಿ ತೊಂಬೆ ವಳೀಕೆ, ಬಗ್ಗೆ ಕ್ವಾಡುದ್ರೆ- ವಳಗಡೆ ರೋಸಯ್ಯ ಗುರುಗಳು ಕುಂತಿ... ಅಣ್ಣಂಗೆ ಹೇಸೋಯ್ತು. ಎಡತಿಯ ತರಾಟೆ ತಕ್ಕಂಡು “ಈಗ ಬಯಲಾಯ್ತು ನಿನ್ನ ಬೊಸರು ಮಾಡಿದೋರು ಯಾರು ಅಂತಾವ!- ಕಳ್ಳ ಭೋಷಡಿ, ನೀನೂ ನಿಮ್ಮವ್ವನೂ ಸೇರಂಡು ನಂಗೆ ಮ್ಯಾಸ ಮಾಡಿದ್ರಿ, ಈ ರೋಸಯ್ಯ ಗುರುಗಳು, ಯೆಲ್ಲಾರೂ ಪುರಾಣ ಯೋಳೋರು, ಇಂತಾ ಲುಚ್ಚಾ ಕೆಲ್ಸ ಮಾಡ್ತಾರೆ ಅಂತ ನಾ ಎಣುಸೇ ಇರನಿಲ್ಲ ಥ, ಧೂ... “ ಅಂತಿರೋನೂವೆ, ರೋಸಯ್ಯ ತೊಂಬೆ ವಳುಖ್ಯಿಂದ ಎದ್ದು ಬಂದು, “ನನ್ನ ತೆಪ್ಪ ಕೈಮೀಸಪ್ಪ, ನಿನ್ನ ದಮ್ಮಯ್ಯ ಕಣೋ, ಪೀಟರು-ನನ್ನ ಮಾನ ಕಳೀಬ್ಯಾಡ.” ಬೇಳುಗರೀತ ಕಾಲು ಕಟ್ಕಂಡರಂತೆ! | ಅಣ್ಣ ಉಕ್ತಾ ಇದ್ದ ಕ್ವಾಪದ ನುಂಕೊಂಡು, “ಆಳಾಗೋಗಿ, ನಿಮ್ಮ ಪಾಪಕೆ ನೀವೇ ವೊಯ್ದಿರಿ ನಂಗೇನಂತೆ... ಈಗ ಈ ಲೂಸ್ಮಿಂದ ನನ್ನ ಬಿಡುಗಡೆ ಮಾಡುದ್ರೆ ಸರಿ. ಇಲ್ಲದಿದ್ರೆ, ಈ ದೊಡ್ಡಿಲೆಲ್ಲ ನಿಮ್ರಾಟವ ಟಾಂಟಾಂ ಮಾಡಿ ರಾಣಾರಂಪ ಮಾಡಾಕೀನಿ!” -ಬೆದುರಿಸಿದ್ದಂತೆ. “ಆಗ್ಲಿ ಆಗ್ಲಿ, ಅಂಗೇ ಮಾಡುವ... ಸೂಸಾನಮ್ಮ ಸಂತೈಂದ ಬರೋಗಂಟ ತುಸ ಸೈಸಿಗಪ್ಪ”- ಬೇಡಿದ್ರಂತೆ ರೋಸಯ್ಯ. ಈ ಸಂದೆ ದನೀಗೆ ಸೂಸಾನಮ್ಮ ಸಂತೈಂದ ಅಂಗಡಿ ಸಾಮಾನ ಯಾರ ಗಾಡೀಲೊ ಹೇರಿಕಂಡು ಮನೆಗೆ ಬಂದ ವಸಿ ವೊತ್ತಿಗೇಯ ಪಂಚಾತಿ ಸೇರುಸಿ, - “ನಂಗೆ ಈ ಎಡತಿ ಬ್ಯಾಡ. ಇವುಗಳಿಂದ ನನ್ನ ಬಿಡುಗಡೆ ಮಾಡಿ,” – ಅಣ್ಣ ಖೈಡಾಗಿ ಯೋಳಿಬುಟ್ನಂತೆ. ಅಸ್ಸಾರಾಗೆ ರೋಸಯ್ಯ ಗುರುಗಳು ಸೂಸಾನಮ್ಮಂಗೆ ಗುಟ್ಟಾಗಿ ನಡುದ ಇಸ್ಕಾನೆಲ್ಲ ಸೂಕ್ಷ್ಮಾಗಿ ಯೋಲಿರಬೇಕು. ಅವಳು ಕಮಕ್ ಕಿಮಕ್ ಅನ್ನಲಿಲ್ಲವಂತೆ. ಪಂಚಾಯಿತಿದಾರಲ್ಲಿ ಒಬ್ಬ ಮಾತ್ರ ಕ್ಯಾಳಿದ್ದಂತೆ “ಎಡತೀಲಿ ಅಂತದೇನು ತಪ್ಪು ಕಂಡು ಇಡುದೆ?” ಅಣ್ಣ ಬಾಯಿ ಬುಡಕ್ಕೆ ಮುಂಚೇಯ, ಲೂಸಿ “ನಂದೂ ತಪ್ಪಿಲ್ಲ, ಅವರೂ ತಪ್ಪಿಲ್ಲ. ನಮ್ಮಿಬ್ಬರೂವೆ ವೋದಾಸ್ಯೆ ಆಯ್ತಾ ಇಲ್ಲ...” ಅಂತಿದ್ದಮಗೇಯ ಅವರಲೊಬ್ಬ ಕಿಲಾಡಿ, “ವೊಂದಾಣಿಕೆ ಆಗ್ಗೆ ನಾಕು ತಿಂಗೃ ಯೆಂಗಾಯ್ತು?” ಅಂತ