ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೮೭ ಲಕ್ಕೆ ವಳುಗಡೆ ಅತ್ತುಗಂಡ ಊರಿಗೆ ಬಂದಿದ್ದ. ಅತ್ತುಗಂಡೇ ದೊಡ್ಡಯ್ಯಂಗೆ ಸುದ್ದಿ ಮುಟ್ಟುಸಿ, ಅವನತ್ರ ನಿಂತುಕೊನಾರದೆ, ತಮ್ಮ ಗುಡ್ಡಿಗೆ ಬಂದಿದ್ದ... ಇಂದೈ ನಡುನ್ನೆಲ್ಲ ಗ್ಯಾಪಸ್ಕತ್ತ, ಮುಟ್ಟಾರಿ ಅಣ್ಣ ಸೈನ್ಯ ಸೇರದೇಯ ವಂದಿಗೇ ಇದ್ರೆ, ದೊಡ್ಡಯ್ಯ ಇಂಗ್ಯಾಕೆ ಸುಂಡೋಗೋನು?- ಅಂತ ಚಿಂತೆ ಮಾಡ್ತಾನೆ ಲಕ್ಕ, ಮಾಮೂಲ್ಕಂತೆ ಒಂದು ಬೇಸ್ತವಾರ ಸಂತೇಗೋತಿದ್ದ, ಹುಣಸೂರಿಂದ ವಾಪ್ಪು ಬತಾನೂವೆ ಅದೇ ಚಿಂತೆ ಯಾಕೊ ಅವ್ವ ಇವತ್ತೂ ಕಾಡ್ತಾನೇ ಇತ್ತು... ಅದೇ ಮನಸಿನಾಗೆ ತಮ್ಮ ಗುತ್ತಿಗೆ ಬಂದಾಗ ಸಿವುನಿ ಮಣ್ಣಿನ ಅಳಿಗೆ ಮುಚ್ಚಳ ತಗುದು ಅದರೊಳೆ ಅಡಕಿದ್ದ ಮಾಂವುಸದ ತುಂಡುಗೊಳ ಕೆಟ್ಟೋಗಿದ್ದದೊ ಯೆಂಗೆ ಅಂತ ಚುರುಚೂರಾಗಿ ಎತ್ತಿ ಎತ್ತಿ ಮೂಸಿ ಮೂಸಿ ವಳೀಕೆ ಇಡ್ತಾ ಇದ್ಲು. ಲಕ್ಕ ಅಡುಗೆ ಕಾಣೆ ಬಾಗಿಲಲ್ಲಿ ನಿಂತು ತಂಗಿ ಸಿವುನಿ ಯೇಕಾಗಾಗಿ ಮಾಡ್ತಿದ್ದ ಕೆಲುಸಾನೆ ಕ್ವಾಡ್ತಾ ಇದ್ದ... ತನ್ನ ತಂಗಿ ಬಂದೀನಿಂದ್ಲವೆ ತನ್ನ ಅಯ್ಯನಿಗಾಗಿ, ಅವ್ವನಿಗಾಗಿ, ತನಗಾಗಿ ಏಟೊಂದು ಮುತುವರ್ಜಿ ವಯಸ್ತವಳೆ. ಅವಂಗೂ ವಯಸ ಆಗೋಯ್ತು, ಈನದಿಂದ ಜಿನಕೆ ಅವುಳ ಸಕ್ತಿ ಕುಂದೊಯಾ ಅದೆ! ಅವನ ಕೇಮೆ, ಯೇನೇ ಅಂದರೂ, ದಪ್ಪಡಿದುಪ್ಪಡಿ. ಆದ್ರೆ ಸಿವುನಿ ಜಾಯಮಾನೈ ಬ್ಯಾರೆ. ಇವರ ವಗೆತನವೇ ಅಚ್ಚುಗಟ್ಟು, ರುತಿರುತ್ಯಾಗಿ ತಮಗೆಲ್ಲಾ ಮಾಡಾಕಬೇಕು. ಕರ್ಚೂವೆ ಹದ್ದು ಮೀರಬಾರು -ಅತೋಟೀಲೆ ಇರಬೇಕು. ಅವೊತ್ತು ಮರಿ ಕಡುದು ವಸಿ ಮಾಂವುಸ ಬೇಯಿ ನಮಗೆಲ್ಲ ನೀಡಿದ್ದಲ್ಲ - ಈಗ ಉಳುಕೆ ಮಾಂವುಸವ ಉದ್ದಾನೆ ತುಂಡತುಂಡ್ರಂಗೆ ಕತ್ತರಿಸಿದ್ದು. ಆ ತುಂಡಗಳ ತಕ್ಕಂಡು ಈಳಿಗೆಮಣೇಲಿ, ಚೋಟುದ್ದ ಇಂದುಕೆ ಬುಟ್ಟು, ಸೀಳಿದ್ದು. ಅಂಗೆ ಸೀಳ ಒಂದೊಂದು ತುಂಡನೂವೆ ಸಾಲಾಗಿ ಬಿದಿರು ಗಳೀನ ಮ್ಯಾಲೆ ನ್ಯಾತಾಕಿದ್ದು. ಆಮ್ಯಾಕೆ, ಆ ಗಳುಗಳ ನಮ್ಮ ಗುಡ್ಡ ಇಂಚೋರಿ ಇತ್ತಲ್ಲಿ ಕೊಣಮಾವಿನ ಕೊಂಬೆಯಿಂದ ಚುಜ್ಜಲು ಮರದ ಕೊನೆಗಳೆ ತಲುಲಾಗಿ- ಹದ್ದು, ಕಾಗೆ, ಕೊತ್ತಿ ಯಾವುದೊ ಆ ಮಾಂವುಸದ ತುಂಡುಗಳ ಮುಟ್ಟದಂಗೆ ಎಂಟು ಹಗಲು ಒಬ್ಬಳೇಯ ಒಂದೇ ಸಮನೆ ಕಾಯ್ಕಂಡಿದ್ದು, ಸ್ವಾಮಿ ಪಡುವಲಲ್ಲಿ ಮುಳುಗುತಿದ್ದಂಗೆ ಆ ಗಳುಗಳ ಯೆತ್ತಿಂಗಂಬಂದು ವಪರ್ತಿನಾತ್ರೆಯೂವೆ ಅಡುಗೆಕ್ಸಾಣೇಲಿ ಒಂದು