________________
೧೮೮ ವೈಶಾಖ ತುಂಡು ಗ್ವಾಡಿಂದ ಇನ್ನೊಂದು ಗ್ವಾಡೆ ತುಗಿದ ತಗು, ಒಲೆ ಬೆಂಕಿ ಸಾಖಕ್ಕೆ ಆ ಮಾಂವುಸದ ತುಂಡುಗಳ ವಣಗುತ್ತಿದ್ದು, ಅಂಗೆ ವಣುಗಿದ ಉದ್ದಾನೆ ಮಾಲೆಗಳ ಗಳುಗಳಿಂದ ಇಳುಕಿ, ಅನ್ನ ಕಿರುಬೆಳ್ಳಿನ ಉದ್ದಕ್ಕೆ ಪುನಾ ಸಣ್ಣಸಣ್ಣದಾಗಿ ಕತ್ತುರಿಸಿ, ಆ ತುಂಡುಗೊಳ ಈ ಅಳಗೇಲಿ ತುಂಬಿಟ್ಟು, ಅವುನ್ನ ಬೇಕುಬೇಕಾದಾಗ ತಕ್ಕಂಡು ನಮ್ಮೆ ಬೇಯ್ಸ ಆಕ್ಕಿದ್ದು... ವಗೆತನದಲ್ಲಿ ಯಾರೂ ಬೆಳ್ಳು ಮಡಿಸೋ ಅಂಗಿಲ್ಲ. ನಿಪುಣೆ-ಇಂಗೆಲ್ಲ ಮನಸಿನಾಗೆ ಅಂದುಕೊತ್ತ, ಲಕ್ಕ, “ಈಟು ಜಿನ ನೀನು ಮಾಡಾಕಿದ್ರೂವೆ, ಇನ್ನೂ ಉಳುಕಂಡಿದ್ದವ ಮಾಂವುಸದ ತುಂಡುಗಳು?” ಅಂದ. ಸಿವುನಿ ಬೆಚ್ಚಿ, ಗಕ್ಕನೆ ತಿರುಗಿ “ನೀನಾ?- ಬುಡ್ತು ಅನ್ನು, ನಾನೇಟು ಬೆಚೋದಿ ಅಂತಾವ?” ಅಂದೋಳು, ಸಾವರಿಸಿಕತ್ತ, “ಆಡೀಲೆಲ್ಲೊ ವಸಿ ಉಳುದವೆ ಕನಣ್ಣ, ಇನ್ನೊಂದು ವೊತ್ತು, ತಪ್ಪದೆ ಏಡೊತ್ತು ಅಟ್ಟರೆ ಮೂಗೀತು” ಅಂದ್ಲು. “ಅಂಗಾರೆ ಈ ನಾತ್ರೀಕೆ ರಾಗಿಮುದ್ದೆ ಜ್ವತೆ ಈ ಬಾಡಿನ ಸಾರನೂವೆ ಮಾಡು ಮತ್ತೆ...” ಬಾಯಿ ಚಪುರಸ್ತ, ಲಕ್ಕ ಸೂಚನೆ ಊಟ, “ನಾಕೆ ನೀ ಯೋಳ್ತಂಗೆ ಬಾಡಿನ ಸಾ ಮಾಡಾದ್ಯಾನೊ ಮಾಡ್ತೀವಿ. ಆದ್ರೆ ನಿನ್ನಗಂಟ ನೀಡಕ್ಕೆ ಅಯ್ಯ ಆದ ಬುಡಬೇಕಲ್ಲ?...” ಸಿವುನಿ ಯೋಳ ಯೋಳ, ನಗಾಡಿ, ಅದೇತಾನೆ ಎಚ್ಚರಾಗಿ ಕಜೆ ತಗುದ ಕೂಸ ತಗಂಡು ಎದೆ ಕಚ್ಚುಸ್ತಿರೋನೂವೆ. “ನಮ್ಮ ಸುಖಕೆ ಈ ಅರೇದ ಎಣ್ಣ ಸೆರೆ ಅಕ್ಕಂಡಿರಾದು ಯಾವ ಚೆಂದವ?... ಅಯ್ಯ, ಅವ್ವ ಇಬ್ರ ಕುಟ್ಟೂ ಮಾತಾಡಿ, ಯಾವುದಾದ್ರೂ ಗಂಡ ನ್ಯಾಡಿ ಇವುಳ ಗಂಟಾಕಿಬುಡಬೇಕು,” ಅಂದುಕಂಡ ಲಕ್ಕ. ೧೭ ಲಕ್ಷಮ್ಮ ಮುಸುಕು ಹಾಕಿದ ಮಾತುಗಳಲ್ಲಿ ಸೂಕ್ಷ್ಮವಾಗಿ ರುಕ್ಕಿಣಿಯನ್ನು ಚುಚ್ಚುತ್ತ ಇದ್ದಳು... ಮೊದಮೊದಲು ಲಕ್ಷಮ್ಮನ ಮಾತುಗಳ ಹಿಂಬದಿಗೆ ಅಡಗಿದ್ದ ಮರ್ಮ ರುಕ್ಕಿಣಿಗೆ ಅರಿವಾಗಲಿಲ್ಲ. ಆದರೆ ಆ ಮಾತುಗಳನ್ನೆ ಮೆಲುಕು ಹಾಕಿದಂತೆ ಅವುಗಳ ಹಿಂದೆ ಯಾವುದೆ ಗೂಡಾರ್ಥ ಅಡಗಿದೆ ಎಂಬ ಶಂಕೆ ತಲೆದೋರಿತು. ಆ ಶಂಕೆಯ ನಿವಾರಣೆಗೆ ಬಹುಕಾಲವೇನೂ ಬೇಕಾಗಲಿಲ್ಲ. ಊರಿನೊಳಗೆ