ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೪ ವೈಶಾಖ ಮರುದಿನ ಎದ್ದಾಗ ಹಿಂದಿನ ಎರಡು ರಾತ್ರಿಗಳ ಕಠೋರ ಅನುಭವವನ್ನೇ ಅವಳ ಮನಸ್ಸು ಚಿಂತಿಸುತ್ತಿತ್ತು. ಇದೇ ಚಿಂತೆಯಲ್ಲಿ ಮನೆಗೆಲಸಗಳನ್ನು ಹೇಗೋ ಯಾಂತ್ರಿಕವಾಗಿ ಮುಗಿಸಿ, ಹಾಸಿಗೆಯ ಮೇಲೆ ಮೈಚೆಲ್ಲಿದ್ದಳು. ಹಿಂದಿನ ರಾತ್ರಿಗಳಲ್ಲಿ ಸರಿಯಾಗಿ ನಿದ್ದೆ ಬಾರದಿದ್ದುದರಿಂದಲೇ ರುಕ್ಕಿಣಿಗೆ ಈ ರಾತ್ರಿ ನಿಶ್ಚಿಂತ ನಿದ್ದೆ! ಅವಳ ಮೈಮೇಲೆ ಯಾವುದೋ ಭಾರ ಬಿದ್ದಂತಾದಾಗಲೆ ಅವಳಿಗೆ ಎಚ್ಚರ. ಕಣ್ಣು ತೆರೆದಾಗ ಅವಳ ಮುಖದೆದುರು ಅಗಲವಾದ ಮಾವಯ್ಯನ ಮುಖ! ಕಿರುಚಲು ಪ್ರಯತ್ನಿಸಿದಾಗ ಮಾವಯ್ಯ ಬಾಯಿ ಮುಚ್ಚಿದರು-ಕಮ್ಮಿಂದ ಅಲ್ಲ, ತಮ್ಮ ದಪ್ಪನೆ ತುಟ್ಟಿಗಳಿಂದ... ತನ್ನ ಹೊಯ್ದಾಟ, ಮಾವಯ್ಯನ ಧಡೂತಿ ಶರೀರವನ್ನು ಮೈಮೇಲಿನಿಂದ ತಳ್ಳಹಾಕುವ ತನ್ನ ದುರ್ಬಲ ಪ್ರಯತ್ನ ಯಶಸ್ವಿಯಾಗಲಿಲ್ಲ. ಮನಸ್ಸು ಎಲ್ಲೆಲ್ಲೂ ತೇಲಿತು... ಸುರಕ್ಷಿತ ವಾಗಿ ತಾನು ಕುಳಿತು ಸಾಗುತ್ತಿದ್ದ ಹರಿಗಳು ಥಟ್ಟನೆಮಗುಚಿದಂತಾಗಿ ಹೊಳೆಯ ನೀರಿಗೆ ಬಿದ್ದು ಉಸಿರುಕಟ್ಟಿ ಕೈಕಾಲು ಬಡಿಯುತ್ತಿರುವ ಅನುಭವ... ನೀರಿನ ಸೆಳಕು ಮುಳುಗಿಸಿ, ಮೇಲೆತ್ತಿ ತೇಲಿಸಿ ಸೆಳೆದೊಯ್ಯತ್ತ, ರಾಮನಾಥಪುರದ ಗೋವುಗಳಲ್ಲಿನ ಗರ್ಭದದ ಕತ್ತಲಿಗೆ ನೂಕಿ, ಅಲ್ಲಿ ಹೊಳೆಯ ನೀರು ಎತ್ತಿಎತ್ತಿ, ಕುಕ್ಕಿಕುಕ್ಕಿ, ಕಡೆಗೊಮ್ಮೆ ಆಚೆಗೆ ದಬ್ಬಿದಂತಾಗಿ, ದಡಕ್ಕೆ ಬಂದು ಬಿದ್ದಿದ್ದಳು... ಹೊರಗೆ ಬಂದಾಗ ಭಾರ ಇಳುಕಿದಂತೆ ಶರೀರ ಹಗುರಾಯಿತು... ಕಣ್ಣು ತೆರೆದಾಗ, ಹೊರಳಿ ಮೇಲೆದ್ದ ಮಾವಯ್ಯ, ಕಚ್ಚೆಯನ್ನು ಸರಿಪಡಿಸಿಕೊಳ್ಳುತ್ತ, ಕೋಣೆಯ ಬಾಗಿಲು ತೆರೆದು ಸರಸರ ಹೊರಟುಹೋದರು. ಯಾಕೊ ಆ ಗಳಿಗೆಯಲ್ಲಿ ತನ್ನ ಗಂಡ ಹೇಳಿದ್ದ ಅಹಲ್ಯಯ ಪ್ರಸಂಗ ನೆನಪಾಯಿತು. ಅಪರಾಧಿಯಂತೆ ತಲೆತಗ್ಗಿಸಿ ಅವರು ಹೊರಟುಹೋದ ರೀತಿ, ಅವಳಿಗೆ ಕೃತ್ರಿಮದಿಂದ ಅಹಲೈಯನ್ನು ಭೋಗಿಸಿದ ಇಂದ್ರನ ಚೋರವರ್ತನೆಯಂತೆ ಕಂಡಿತು. ಆ ಭಾವನೆ ಬಂದೊಡನೆಯೆ ತಬ್ಬಿಬ್ಬು ಆದಳು... ತಾನು ಏನೇ ಆದರೂ ಅವಕಾಶ ಕೊಡಬಾರದಿತ್ತು -ಆದರೆ ಭಕ್ತಿ, ಗೌರವಗಳು ಇರುವ ಕಡೆ ಪ್ರತಿಭಟಿಸುವುದು ಅಷ್ಟು ಸುಲಭವೆ?... ಯಾವುತ್ತೂ ಮಹಾ ಸಂಯಮಿಯಾಗಿದ್ದ ಮಾವಯ್ಯ ಈ ಹೊತ್ತು ಯಾಕೆ ಸಡಿಲಗೊಳ್ಳಬೇಕಿತ್ತು?... ಈ ತನಕ ಗತಿಸಿದ ಗಂಡನ ಬಗ್ಗೆ ತಾನು ಇರಿಸಿಕೊಂಡಿದ್ದ ಪ್ರೇಮ ಏನಾಯಿತು?... ತಪ್ಪು ಯಾರದೇ ಆದರೂ ಇನ್ನು ಮುಂದೆ ತನಗೆ ಮಾತ್ರ ಈ ಯಾತನೆಯಿಂದ, ಈ ಪಾಪಭಾವದಿಂದ