ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೦೧ ಹಚ್ಚಬೇಕು! ಆದರೆ ಈ ದಿನ ಅವರು ತುಟಿ ಪಿಟಕ್ಕೆನ್ನದ ಮೌನವಾಗಿ ಸಾಗುತ್ತಿದ್ದುದು ಲಕ್ಕನಿಗೆ ಅಚ್ಚರಿ ತಂದಿತ್ತು. “ಇವೊತ್ತು ಈ ಅಯ್ಯನೋರ ಚರ್ಯೇನೆ ಒಂದು ತರಾ ಆಗದೆ. ಇವುರ ಅಟ್ಟೇಲಿ ಯಾನೊ ಯಾಸ ನಡದಿರಬೈದು, ಅತ್ವಾ, ಭೀಮನಳ್ಳಿಗೆ ವೋಗಿರೋ ಇವರ ಎಣ್ಣು ಇನ್ನೂ ಬರನಿಲ್ಲ ಅನ್ನಾ ಬ್ಯಾಸರವೊ?” ಅಂತ ತನ್ನ ಮನಸ್ಸಿನಾಗೆ ಅಂದುಕೊತ್ತ ಅಪರ ಮನೆಗಂಟ ಇಂಬಾಲಿಸಿದೋನು, “ಇನ್ನು ನಾ ಬತ್ತೀನಿ ಕನ್ನಯ್ಯ” ಅಂತಯೋಳಿ, ಲಕ್ಕ ಹೊಲಗೇರಿ ಕಡೀಕೆ ನಡುದ... ಶಾಸ್ತ್ರಿಗಳು ಕೈಕಾಲು ತೊಳೆಯಲು ಮನೆಯ ಅಂಗಳಕ್ಕೆ ಇಳಿದರು ರುಕ್ಕಿಣಿಯ ಒಳಗಿನಿಂದ ಹಿತ್ತಾಳೆ ತಂಬಿಕೆಯಲ್ಲಿ ನೀರು ತಂದಳು. “ಅಲ್ಲಿ ಇಟ್ಟು ಹೋಗು.” ಯಾರೊ ಅಪರಿಚಿತರನ್ನು ಉದ್ದೇಶಿಸಿ ಹೇಳುವಂತೆ ಶಾಸ್ತ್ರಿಗಳು ನುಡಿದಿದ್ದರು. ಕೈಲಿದ್ದ ತಂಬಿಗೆಯನ್ನು ಕಟ್ಟೆಯ ಮೇಲೆ ಇಡುವಾಗ, ಮನಃಕೇಶದಿಂದ ಜರ್ಝರಿತವಾದ ಅವರ ಮುಖವನ್ನು ಗಮನಿಸದೆ ರುಕ್ಕಿಣಿ ಒಳ ನಡೆದಳು. ಇಷ್ಟು ದಿನ ಕೈ ಕಾಲು ತೊಳೆದು, ಮನೆಯಲ್ಲಿ ಒದ್ದೆಯಾದ ಬಟ್ಟೆಯನ್ನು ಕಳಚಿ, ಮಡಿಪಂಚೆಯನ್ನೊ ರೇಶಿಮೆ ಮಗುಟವನ್ನೊ ಉಡುತ್ತಿದ್ದ ಶಾಸ್ತ್ರಿಗಳು ಇಂದು ಒದ್ದೆ ಬಟ್ಟೆಯಲ್ಲಿ ದೇವರ ಪೂಜೆಗೆ ಕುಳಿತರು. ರುಕ್ಕಿಣಿ ಅಭಿಷೇಕದ ಹಾಲನ್ನು ತಂದಿಟ್ಟು ದೇವರ ಬಾಗಿಲಿನಲ್ಲಿ ವಾಡಿಕೆಯಂತೆ ಶ್ರೀಗಂಧ ತೇಯುತ್ತ ಕುಳಿತಳು. ಶಾಸ್ತ್ರಿಗಳು ಸಂಧ್ಯಾವಂದನೆ ಮಾಡಿ, ಪರಸ್ತ್ರೀ ಸಂಗಜನಿತದೋಷವೃತ್ಯರ್ಥಂ ಮಹಾ ಚರಿತ ದುಷ್ಕರ್ಮದೋಷನಿವೃತ್ಯರ್ಥಂ ಮಮ ಶರೀರಶುಧ್ಯರ್ಥಂ ಸಹಸ್ತಗಾಯಜಪಂ ಕರಿಷ್ಟೇ... -ಎಂದು ಸಂಕಲ್ಪವನ್ನು ವಟಗುಟ್ಟಿ ಗಾಯತ್ರೀ ಜಪ ಮಾಡುತ್ತ ಕುಳಿತಾಗ, ರುಕ್ಕಿಣಿಯು ಮರ್ಮಾಹತಳಾಗಿ ಗಂಧ ತೇಯುವುದನ್ನು ಅರ್ಧಕ್ಕೇ ನಿಲ್ಲಿಸಿ, ಎದ್ದು ಹೋದಳು. ಸಹಸ್ರ ಗಾಯತ್ರೀ ಜಪ ಮುಗಿಸಿ, ಶಾಸ್ತ್ರಿಗಳು ಪೂಜೆಗೆ ಕುಳಿತರು.