ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೨ ವೈಶಾಖ ಸಾಲಿಗ್ರಾಮಗಳಿಗೆ ಕ್ಷೀರಾಭಿಷೇಕ ಮಾಡಿ, ಅನಂತರ ನೀರಿನಲ್ಲಿ ತೊಳೆದು ಮಡಿವಸ್ತ್ರದಿಂದ ಅವನ್ನು ಒರಿಸಿ ಇಟ್ಟರು. ತರುವಾಯ ರುಕ್ಕಿಣಿಯು ಅರ್ಧ ತೇಯ್ದಿದ್ದ ಗಂಧವನ್ನು ಇನ್ನೂ ಗಟ್ಟಿ ಬರುವಂತೆ ತೇಯ್ದು, ಅದನ್ನೂ ಕುಂಕುಮವನ್ನೂ ಸಾಲಿಗ್ರಾಮಗಳಿಗೂ ದೇವರ ಪಟಗಳಿಗೂ ಹಚ್ಚಿ, ರುಕ್ಕಿಣಿಯು ಹಿತ್ತಲಿನ ಹೂಗಿಡಗಳಿಂದ ಆರಿಸಿ ಬಿದಿರು ಬುಟ್ಟಿಯಲ್ಲಿ ತಂದಿಟ್ಟಿದ್ದ ಮಲ್ಲಿಗೆ, ಕೆಂಪು ದಾಸವಾಳ, ಇತ್ಯಾದಿ ಹೂಗಳನ್ನು ಧರಿಸುತ್ತ ನಾರಾಯಣಸೂಕ್ತವನ್ನು ಪಠಿಸಿದರು. ಶಾಸ್ತ್ರಿಗಳ ಪೂಜೆ ಈ ದಿವಸ ಮಧ್ಯಾಹ್ನ ನಾಲ್ಕೂವರೆಯಾದರೂ ಮುಗಿಯಲಿಲ್ಲ. ತಾವು ಎಸಗಿದೆ ಅಪರಾಧಕ್ಕೆ ವ್ರತೋಪವಾಸಗಳಿಂದ ತಮ್ಮ ದೇಹ ದಂಡಿಸಿ ಹತೋಟಿಯಲ್ಲಿಡಬೇಕೆಂದು ಅವರು ಸಂಕಲ್ಪ ಮಾಡಿದಂತಿತ್ತು. ರುಕ್ಕಿಣಿಯು ಕಾದು ಕಾದು ಸೊಪ್ಪಾಗಿ ಅಡಿಗೆಕೋಣೆಯಲ್ಲಿ ನೆಲದ ಮೇಲೇ ಒರಗಿ ನಿದ್ದೆ ಹೋಗಿದ್ದಳು. ಶಾಸ್ತ್ರಿಗಳು ಪೂಜೆ ಮುಗಿಸಿ ಬಂದು ನೋಡಿದವರು, ಯಾಕೆ ಎಬ್ಬಿಸಬೇಕೆಂದು ಹೊರಟುಹೋಗುವುದರಲ್ಲಿದ್ದರು. ಆದರೆ ತಮಗೇನೊ ಆಹಾರದ ಅಗತ್ಯವಿರಲಿಲ್ಲ. ಹಾಗೆಂದು ಪಾಪ ರುಕ್ಕಿಣಿಯೇಕೆ ಹಸಿದಿರಬೇಕು, ಎನ್ನಿಸಿ- “ರುಕ್ಕು- ಎಂದು ಕರುಣೆ ತುಂಬಿದ ಸ್ವರದಲ್ಲಿ ಕೂಗಿದರು. ರುಕ್ಕಿಣಿಯು ದಡಬಡ ಎದ್ದು ಕುಳಿತಳು. ಸೆರಗಳನ್ನು ಸರಿಪಡಿಸಿಕೊಳ್ಳುತ್ತ, “ಬೆಳಿಗ್ಗೆ ಮಾಡಿದ ಉಪ್ಪಿಟ್ಟಿದೆ” ಎಂದು ತಡವರಿಸಿದಳು. ಶಾಸ್ತ್ರಿಗಳು ಶಾಂತಸ್ವರದಲ್ಲಿ. “ಬೇಡ, ಬೇಡ. ಇನ್ನು ಮೇಲೆ ನಾನು ಬೆಳಗಿನ ಫಳಾರ ಮಾಡಲ್ಲ. ಮಧ್ಯಾಹ್ನ ಒಂದು ಊಟವಾದರೆ ಮುಗಿಯಿತು. ರಾತ್ರಿಯ ಊಟ ಬೇಕಿಲ್ಲ, ಕುಡಿಯಲು ತುಳಸೀ ದಳ ಹಾಕಿದ ನೀರಿದ್ದರೆ ತೀರಿಸು- ಎಂದರು. ರುಕ್ಕಿಣಿಯು ಮರುಮಾತಾಡದೆ ಅವರ ಅಪೇಕ್ಷೆಯಂತೆ ಮಧ್ಯಾಹ್ನದ ಊಟವನ್ನೆ ಬಡಿಸುತ್ತ, “ಕೆಲವೇ ಗಂಟೆಗಳಲ್ಲಿ ಎಂಥ ಬದಲಾವಣೆ!” ಎಂದು ವಿಸ್ಮಿತಳಾದಳು. ಈಗ ಅವರು ವ್ಯಕ್ತಗೊಳಿಸುತ್ತಿರುವ ವೈರಾಗ್ಯವು ಅವಳನ್ನು ದಂಗುಗೊಳಿಸಿತು. ತಮ್ಮಿಬ್ಬರ ನಡುವೆ ಏನೂ ಆಗಿಲ್ಲವೆನ್ನುವ ಹಾಗೆ ಅವರು ವರ್ತಿಸುತ್ತಿದ್ದರು! ೧೯ ದಿನದ ಹಗಲು ಕಳೆದು ಇರುಳು ಕವಿಯಿತು. ಹಾಸಿಗೆಯ ಮೇಲೆ ಬಿದ್ದು ಕೊಂಡ ರುಕ್ಕಿಣಿಗೆ ಏನೋ ಆಸರ, ಬೇಸರ. ಒಂದು ವರ್ಷಕ್ಕೂ ಮಿಕ್ಕಿ ಹಾಸಿಗೆ ಸುಖದಿಂದ ವಂಚಿತಳಾಗಿದ್ದ ಅವಳಿಗೆ ಮತ್ತೆ ಪುರುಷಪ್ರವೇಶದಿಂದ ನರನಾಡಿಗಳಲ್ಲೆಲ್ಲ ವಿದ್ಯುತ್ ಸಮಚಾರವಾದಂತಾಗಿತ್ತು. ಗಂಡನೊಡನೆ