________________
ವೈಶಾಖ ಸೊಸಿಯ ಹೇಗಿದಾನೆ ನೋಡೋಣಾಂತ ನಿಮ್ಮ ಹೊಲಗೇರಿಗೆ ಹೋದೆ. ಅವರ ಗುಡಿಸಲ ಮುಂದೆ ಆರಾಮವಾಗಿ ಬಿಸುಲ ಕಾಯಾ ಕೂತಿದ್ದ ಸೊಸಿಯ ನನ್ನ ಮುಖ ಕಂಡಕೂಡಲೆ, ತನ್ನ ಗುಡಿಸಲೊಳಗೆ ಗುಡಕ್ಕನೆ ನುಸುಳಿದ. ನಾನು ನಿಂತೇ ಇದ್ದೆ. ಅವನವ್ವ ಗುಡಿಸಲಿನೊಳಗೇ ಇದ್ದು ತನ್ನ ಕತ್ತು ಮಾತ್ರ ಇಚೆಗೆ ತೂರಿಸಿ 'ಬೇಜಾರು ಮಾಡಿಕೊಬ್ಯಾಡಿ ಅಮ್ಮಾರೆ, ಚೆಂಗೂಲಿ ಹೈದ, ನಾಯೇನು ಮಾಡ್ಲಿ?... ಈ ಹಕ್ಕಳ ಕಟ್ಟಿಕಂಡು ನಂದೂ ಹೃಡಬಾಳು...ದನ ಬುಡೊ ವ್ಯಾಳ್ಯಾಕ್ಕೆ ನಾಳೀಕೆ ನಾನೇ ಒದ್ದು ನಿಮ್ಮಟ್ಟಿ ತಾವಿಕೆ ಅವ್ರ ಕರಕೊಂಬತ್ತೀನಿ. ಈ ಜಿನ ರವೋಟು ಎಂಗಾರು ನಿಮ್ಮ ಬದುಕ ನೀಸುಗನ್ನಿ” ಅಂದ್ಲು. ಆದ್ರೆ ಇಲ್ಲಿನಕ ಈ ಕಡೆ ಮುಖ ಹಾಕಿಲ್ಲ. ಇವೊತ್ತು ಕಸ ಹಾಕ್ತಕ್ಕೆ, ದನ ಕಾಡಿಗೆ ಅಟ್ಟಿಗೊಂಡು ಹೋಗಲಿಕ್ಕೆ ಯಾರನ್ನ ಹಿಡಿಯಲೀಂತ ಯೋಚಿಸ್ತಿದ್ದೆ. ನಿನ್ನ ನೆನಪಾಯ್ತು. ನಿನಗೆ ಹೇಳಿಕಳಿಸೋಣ ಅಂತ ಯೋಚಿಸ್ತಿದ್ದೆ. ಅಷ್ಟರಲ್ಲಿ ನೀನೇ ಬಂದೆ... ಇನ್ನು ಆ ಕಡಸಿನ ವಿಚಾರ!- ನಮ್ಮ ಮಾವಯ್ಯನ ನೀನು ಕಂಡೇ ಇದ್ದೀಯೆ. ಅವರು ಹಟ್ಟಿ ಬಿಟ್ಟು ಹೊರಗೆ ಹೋದರೆ ತೋಟದ ಕೆಲಸ, ಸಂತೆ ದಿವಸ ಪ್ಯಾಟೆ, ಅಡಿಕೆ ವ್ಯಾಪರಕ್ಕೆ ಶಿವಮೊಗ್ಗದವರೆಗೂ ಒಂದೊಂದು ಸಾರಿ ಹೋಗೋದುಂಟು. ಅವರು ಹಟ್ಟಿಲೆ ಇದ್ದರೆ ಪೂಜೆಪುನಸ್ಕಾರ, ಜಪತಪ, ಇವೇ ಆಯ್ತು- ನಮ್ಮ ಸುಶೀಲತೆಯು ಹುಷಾರಿಲ್ಲದೆ ಹಾಸಿಗೆ ಹಿಡಿದು ಮಲಗಿಬಿಟ್ಟಿದ್ದಾರೆ. ಇನ್ನು ನಮ್ಮ ಸರಸಿ- “ಎನ್ನುತ್ತಿದ್ದ ಹಾಗೆ,” ಅದು ಬುಡಿ ಆಟುಗುಳಿ ಎಣ್ಣು” ಅಂತಂದ ಲಕ್ಕ, “ನಿಮ್ಮ ಗುಡ್ಡಲ್ಲಿ ತಂಗಳ ಆಯಿತೇನೋ?” ಕೇಳಿದ್ದಕ್ಕೆ, ಆಯಿತು ಅನ್ನೂವಂಗೆ ಲಕ್ಕ ತಲೆ ಕುಣಿಸ್ಟಾಗ “ಸುಳ್ಳು ಸುಳ್ಳು” ಅಂದ ರುಕ್ಕಿಣಿ, ಮನೆಯೊಳಗೆ ನಡೆದು, ಎರಡು ಅಕ್ಕಿರೊಟ್ಟಿಯ ಮೇಲೆ ಬದನೆಕಾಯಿ ಎಣ್ಣೆಗಾಯಿ ಹಾಕಿ ತಂದು, “ತೆಗೆದುಕೊ” ಎಂದು ಅವನ ಕೈಗಿಟ್ಟಳು. “ಅಂತ ನಿಮ್ಮಟ್ಟಿಗೆ ಬಂದ್ರೆ ಯೇನಾರ ಕ್ವಾಡ್ತಾನೆ ಇತ್ತೀರಿ, ಬಾಯಾಡಕ್ಕೆ. ನಂಗೆ ನೆಪ್ಪಿರೂವಂಗೆ ಯಾವತ್ತೂ ನೀವು ತಪ್ಪಿಸನೇ ಇಲ್ಲ.” ಚೂರು ರೊಟ್ಟಿ ಮುರುದು ಎಣ್ಣೆಗಾಯಿಗೆ ಅಗ್ನಿ ಅದ್ದಿ ತಿನ್ತಾ ತಿನ್ತಾ ಲಕ್ಕ ಯೋಳಿದ. ಅವನ ಜ್ವತ್ತೇ ಬಂದು ಪಕ್ಕದಲ್ಲೆ ಹ್ಯಾ ಹ್ಯಾ ನಗರ ಬಿದ್ದು ಕಂಡಿದ್ದ ಅಮ್ಮ ನಾಯಿ ಬೊಡ್ಡ, ನಾಲಿಗೆಯ ಇರಿದು, ಉದ್ದಕ್ಕೆ ಜೋಲು ಬುಟ್ಟು, ಜೋಲ್ಲು ಸುರುಸ್ತ, ಲಕ್ಕನ್ನೆ ಕಣ್ಣೆಲ್ಲ ಆಸ್ಕಾಗಿ ಕ್ವಾಡ್ರ ಇತ್ತು. “ಅಲಿ, ನಿನ್ನ ಮರೆತೇಬುಟ್ಟು ತಿನ್ನಕ್ಕೆ ಸುರು ಮಾಡಿದ್ಯಲ್ಲೊ, ಬೊಡ್ಡ!