ಪುಟ:ವೈಶಾಖ.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೈಶಾಖ ಸುರು, ತಾನೂ ಕ್ವಿಟ್ಟಿಗಿಂದ ವೊರಬಿದ್ದ ಲಕ್ಕ, ದಡಕ್ಕನೆ ಅಮ್ಮ ಇಂದೇನೆ ಮೊಂಟ ಬೊಡ್ಡ ನಾಕು ದಾಪು ಇಡೋದರೊಳ್ ಅವ್ರಗಿಂತ್ತೂವೆ ಒಂದು ಮಾರು ಮುಂದಾಗಿತ್ತು. ಲಕ್ಕ ರುಕ್ಕಿಣವ್ವನ ಅಟ್ಟಿಂದ ಸಾಗ್ತ ಇನ್ನೂ ಆ ಬೀದೀಲಿದ್ದ ಏಡು ಬಾಂಬ್ರ ಅಟ್ಟಿಗಳೊವೆ ದಾಟಿರಿಲ್ಲ. ಅಸ್ಟರಾಗೆ ಎದುರುಗಡಿಂದ ಸೊಸಿಯ ಸಿಳ್ಳಿ ಆಗ್ತಾ ಆರಾಮಾಗಿ ಬತ್ತಿದ್ದ. ಅವನ್ನ ಕಂಡು ಲಕ್ಕಂಗೆ ಇಪರೀತ ಸಿಟ್ಟು ಬಂತು. “ಕಳ್ಳ ಬಡ್ಡಿದೆ. ಜರ ಅಂತ ಯಾಸ ಅಕ್ಕಂಡು ಸೋಕಿ ಮಾಡ್ಡ ಬತ್ತಿದ್ದೀಯ?...ನಡಿ, ನಡಿ, ನಾನಾಗ್ಗೆ ರುಕ್ಕಿಣಿಲ್ವಾರ್ ಕಟೆಗೆ ತೊಡುದು ಬಂದಿಮ್ಮಿ, ಜಟಜಟ್ಟಿ ಎಜೆ ಆಕಿ, ಇಲ್ಲೆಲ್ಲಿ ಕಟ್ಟಿರೊ ದನಗಳ ಬಿಚ್ಚಂಡು ಕಾಡಿಗಟ್ಟಗಂಡೋಗು” ಅಂದು ಲಕ್ಕ, ತನ್ನ ಕಣ್ಣುಗಳ ಕ್ವಾಪದಿಂದ ಮರಳಿಸ್ಲ, ಸೊಸಿಯ ಸಿಳ್ಳಿ ಆಕೋದ ತಟಕ್ಕೆ ನಿಲ್ಕ ಬಾಲ ಮುದುರ ನಾಯಿ ಮರಾಗಿ ತಲೆ ತಗ್ಗುಸಿ ರುಕ್ಕಿಣವ್ವನ ಅಟ್ಟ ಕಡೀಕೆ ದೌಡಾಯ್ಲಿ ವೊಂಟ. ೪ ರುಕ್ಕಿಣಿಯ ಮನೆಯ ಮುಂಬಾಗಿಲು ತೆರೆದಾಗ ಬಾಳೆಲೆ ಆಡಿಕೆಪಟ್ಟಿಗಳನ್ನು ಕಂಕುಳಲ್ಲಿ ಇರುಕಿ ಗೊದಮೊಟ್ಟೆಗಳ ಕಟ್ಟನ್ನು ತಲೆಯ ಮೇಲೆ ಹೊತ್ತ ಕೃಷ್ಣಶಾಸ್ತ್ರಿಗಳು ತಮ್ಮ ಬಲಿಷ್ಠ ಕಾಲುಗಳನ್ನು ಎತ್ತೆತ್ತ ಇಡುತ್ತ ಒಳಗೆ ಬಂದರು. ಹೊರೆಯನ್ನು ಅಂಗಳದಲ್ಲಿ ಇಳುಕುತ್ತಿರುವಂತೆ, “ಸುಶೀಲ ಈಗ ಹೇಗಿದ್ದಾಳಮ್ಮ?” ಎಂದು ರುಕ್ಕಿಣಿಯನ್ನು ಕೇಳಿದರು, “ಇನ್ನು ಸ್ವಲ್ಪ ಜ್ವರ ಇದೆ. ಪಂಡಿತರು ಬಂದು ಔಷಧಿ ಕೊಟ್ಟು ಹೋದರು” ಎಂದು ರುಕ್ಕಿಣಿ ತಿಳಿಸಿದರು. “ಹೊಟ್ಟೆಗೇನು ತೆಗೊಂಡಳು?” ಎಂದು ಕೈಕಾಲು ತೊಳೆಯುತ್ತ ಶಾಸ್ತ್ರಿಗಳು ಕೇಳಿದರು. “ಏನೂ ಬೇಡ ಎಂದು ಹಟ ಮಾಡ್ತಾಳೆ. ನಾನು ಎಷ್ಟೋ ಪ್ರಯತ್ನಪಟ್ಟೆ, ಹಾಲನ್ನಾದರೂ ಕುಡಿ ಅತ್ತೆ ಅಂತ ಒತ್ತಾಯಪಡಿಸಿದೆ. ಆದರೂ ಸುಶೀಲತ್ತೆ ನನಗೆ ಹಸಿವಿಲ್ಲ, ಏನೂ ಬೇಡ, ಅಂದಳು.” ರುಕ್ಕಿಣಿ ಹೀಗೆ ವಿವರಿಸಿದಾಗ, ಕೃಷ್ಣಶಾಸ್ತ್ರಿಗಳು, “ಎಲ್ಲಾದರೂ ಉಂಟೆ. ಹೊಟ್ಟೆಗೆ ಏನೂ ತೆಗೊಳ್ಳದೆ ಹೋದರೆ ಇನ್ನೂ ನಿಶ್ಯಕ್ತಿ ಆಗುತ್ತೆ” ಎನ್ನುತ್ತ ತಾವೇ ಸುಶೀಲೆ ಮಲಗಿದ್ದ ನಡುಮನೆಗೆ ನಡೆದು, ಅವಳು ಎಷ್ಟು ಹಟ ಮಾಡಿದರು ಬಿಡದೆ ಹಾಲನ್ನು ಕುಡಿಸಿಯೇ ಕುಡಿಸಿದರು... ಅಣ್ಣ ತಂಗಿಯರೆಂದರೆ ಹೀಗಿರಬೇಕೆಂದು ಒಳಗೆ ಸಂತೋಷಪಡುತ್ತ, ರುಕ್ಕಿಣಿ ಮಾವನವರನ್ನು ಊಟಕ್ಕೆಬ್ಬಿಸಿದಳು.