________________
೨೨೪ ವೈಶಾಖ “ದಮ್ಮಯ್ಯ ಕನ್ಯ. ನನ್ನೆಡತೀಗೆ ಮಾತ್ರ ಈ ಸುದ್ಯ ಯೋಳಬ್ಯಾಡ” ಗ್ವಾಗರಿಯಕ್ಕೆ ಮುಟ್ಟಕಂಡ, ಲಕ್ಕಂಗೆ ಸಮಾಧಾನ ಆಗಿ ಮನಾ ಮನಗಬೇಕಾರೆ ನಾತ್ರೆ ಸುಮಾರು ವ್ಯಾಲ್ಯಾನೆ ಕಳೀತು.... ಅವತ್ತಿಂದ ಮುಂದಕೆ ಗೌಡ ಇನ್ನು ತನ್ನ ತಂಟೆಗೆ ಬರನರ ಅಂತ ಲಕ್ಕ ಬಗದ, ಅಂಗೂವೆ ಏಡು ನಾತ್ರೆ ಕಳುದು ಮೂರನೇ ನಾತ್ರೆ ಲಕ್ಕಂಗಿನ್ನೂ ನಿದ್ದೆ ಬಂದಿಲ್ಲ. ಗೌಡನೂವೆ ನಿದ್ದೆ ಬರದೆ ಹೂಳಡುತಿದೊನು ದನ ಹಾದಾಡ್ತನೆ ಅಂತ ನೆಪ ತಕ್ಕಂಡು ಮೆತ್ತಗೆ ಎದ್ದ ಬಂದು ತನ್ನ ತಾವು ನಿಂತ, ಮನುಸನ ರಕ್ತದ ರುತಿ ಪಾಟಾದ ಹುಲಿ ಮತ್ತೆ ಉಡುಕ್ಕಂಡು ಬಂದೆ ಅನ್ನುಸ್ತು ಲಕ್ಕಂಗೆ...ಇನ್ನು ಸುಮ್ಮಕಿದ್ರೆ ಚೆಂದಿಲ್ಲ ಅಂದೂನೆ ಒಂದೇಡು ಸರ್ತಿ ಜೋಕ್ನಿಂದ ಕೆಮ್ಮಿದ... ಯಾಕೊ ಸರಿಯಿಲ್ಲ, ಹೈದ ಉಸಾರಾಗವೆ ಅಂತಲೋ ಯಾನೊ ಗೌಡ ಅವತ್ತೇ ಕಡೆ, ಅದರಿಂದ ಮುಂದಕೆ ತನ್ನ ತಂಟೆಗೆ ಬರನಿಲ್ಲ. ಎಚ್ಚು ಜುಲುಮೆ ಮಾಡಿದೆ, ಹೈದಯಲ್ಲಿ ತನ್ನೆಡತಿಗೆ ಯೋಳಿಬುಟ್ಬಾನೊ ಅನ್ನೋಭಯ ಇರಬೈದು!... ಮರುಪಸರತ್ನದ ಸೊಪ್ಪ ಕೆಂಗಣ್ಣಪ್ಪ ಸಾಕು ಅನ್ನೋವೋಟು ಜಮಾ ಆಗಿತ್ತು” ಇನ್ನು ಸಾಕು, ನಡೀಲಾ ಲಕ್ಕ” ಅಂದು, ಕೆಂಗಣ್ಣಪ್ಪ ಎದ್ದ. ಲಕ್ಕನೊಂದಿಗೆ ಊರ ಕಡೆ ವೊಂಟ, ಅವರಿಬ್ಬರೂವೆ ಬತ್ತಾ ಇರೋನೂವೆ ಊರ ಸಮೀಪ ಒಂದು ಹೊಲದಲ್ಲಿ ನೀಲಂಗಾಲದ ಮಾದೇವಪ್ಪನೂ ಅಮ್ಮ ಎಡತಿ ಬಸಮ್ಮನೂವೆ ಒಂದೊಂದು ಕೊಡದಲ್ಲಿ ಏನೋ ತುಂಬಿ ಹೊಲದ ಮ್ಯಾಕ್ಕೆಲ್ಲ ತೆಳ್ಳಗೆ ಚಿವುಕಸ್ತ ಇದ್ದರು. ಅದ್ರೆ ಕ್ವಾಡ್ರ ನಡದ ಕೆಂಗಣ್ಣಪ್ಪ. “ಈ ಮುಕ್ತಗಳಿಗೊಂದ ಬ್ಯಾಂತು-ಅದೊಂದು ಬಂಜರು ಭೂಮಿ. ಇವರು ಅದೇಟು ಹೃಸ ರಕ್ತ ತಂದು ನೀರಿಗೆ ಬರೆಸಿ ವೊಲಕ್ಕೆಲ್ಲ ತಕ್ಕಳಿಸಿದ್ರೂವೆ, ನೆಲ ಫಲವತ್ತಾಕ್ಕಿಲ್ಲ. ಉತ್ತಮಾದ ಫಸಲ ಊಡಕ್ಕಿಲ್ಲ” -ತನಗೆ ತಾನೆ ಒಪ್ಪುಸಿಕೊಳೋನ ರೀತಿ ನುಡುದ. ಲಕ್ಕ ಆ ಜಿನ ಬೆಳಗಾಗೊ ಮುನ್ನ ಹೊಲಗೇರಿಂದ ಹೃಂಟು ಕಿಸ್ಥಸಾಸ್ತಿಗಳ ಕಮಾನುಗಾಡಿ ಕಟ್ಟಕ್ಕೆ ಬತ್ತಿರೋನುವೆ ಮಾದೇವಪ್ಪ ಮನೆ ಸಿಕ್ಕು, ಅಲ್ಲಿ ವಸಿ ಜನ ಗುಬ್ಬಲು ಪರದಾಡ ಇದರು ಯೇನು ಇಸ್ಯ? ಅಂದು ಲಕ್ಕ ಕೇಳಿದ್ದ. ಆಗ ಯಾರೊ ಅಂದಿದ್ದರು.: “ಮಾದೇವಪ್ಪ ಮೂರನೆ ಎಣ್ಣು ಕೆಂಪಿ ಇಲ್ವೆವ್ವ!ಅವಳು ಇವತ್ತು ಕೋಳಿ ಕೂಗಕ್ಕೂ ಮುಂಚೆ ರುತಮತಿ ಆದ್ಲು.” ಅದು ಸ್ಕರುಣೆ ಬಂದು, ಅವರು ಏಡಾಳ್ವೆ ನಡಸ್ತ ಇದ್ದ ಕಾಯಕಕ್ಕೆ