ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪೬ ವೈಶಾಖ ಹೆತ್ತ ಮಕ್ಕಳ ಕೊಲ್ವಾರುಂಟ?... ಇಂಥ ಅಭಿಪ್ರಾಯ ಹೊಂದಿರುವ ಮುದುಕಿ ತನ್ನ ಗರ್ಭಪಾತಕ್ಕೆ ಖಂಡಿತ ನೆರವೀಯಲಾರಳು... ಹೀಗೆಯ ಊರಿನ ಕೇರಿಗಳಲ್ಲಿ ತನಗೆ ಹಿತವರೆನಿಸದ ಒಬ್ಬೊಬ್ಬರನ್ನೂ ಮನಸ್ಸಿನಲ್ಲಿ ವಿಚಾರ ಮಾಡಿ ನೋಡಿದಳು. ಈ ವಿಷಯದಲ್ಲಿ ಯಾರೂ ಅವಳಿಗೆ ಹಿತವರಾಗಿ ತೋರಲಿಲ್ಲ. ಊರಿನ ಯಾರ ಸಂಗಡ ಬಾಯಿ ಬಿಚ್ಚಿದರೂ ತನಗೆ ಅಪಾಯವೆ ಕಾದಿತ್ತು. ಭೀಮನಳ್ಳಿಯ ಅಕ್ಕ ಪಾರ್ವತಿಗೆ ತಿಳಿಸಿದರೆ ಹೇಗೆ ಎಂಬ ಆಲೋಚನೆಯೂ ಸುಳಿಯಿತು. ಸುಳಿದಂತೆಯ ಆ ಆಲೋಚನೆಯು ಕಮರಿಹೋಯಿತು. ಅಕ್ಕ ಭಾವ ಇಬ್ಬರೂ ಬಾಕಿ ಇಲ್ಲ ವಿಷಯಗಳಲ್ಲಿ ಉದಾರಿಗಳಾದರೂ ಇಂಥ ವಿಚಾರದಲ್ಲಿ ಅವರಿಬ್ಬರೂ ಸಂಪ್ರದಾಯಶರಣರೆ ಎಂಬುದನ್ನು ಭೀಮನಳ್ಳಿಯಲ್ಲಿ ತನ್ನ ಒಂದು ತಿಂಗಳ ವಾಸ್ತವ್ಯ ಮನವರಿಗೆ ಮಾಡಿಕೊಟ್ಟಿತ್ತು. ಭೀಮನಳ್ಳಿಯಲ್ಲಿ ಯಾರಾದರೂ ಹೆಣ್ಣು ಮಕ್ಕಳು ಜಾರಿದರೆ, ಅವಳು ಯಾವ ಕೇರಿಯವಳಾದರೂ ಸರಿ, ಅವಳನ್ನು ಕುರಿತು ಲಾಘವವಾಗಿ, ತಿರಸ್ಕಾರವಾಗಿ, ಕೆಲವೊಮ್ಮೆ ಕಠೋರವಾಗಿ ಟೀಕಿಸುತ್ತಿದ್ದರು! ತನ್ನ ಭಾವನ ದೃಷ್ಟಿಯಲ್ಲಿ ಹೆಣ್ಣು ಎಂದರೆ ಪುರಾಣದ ಸೀತೆ, ಸಾವಿತ್ರಿಯರಂತಿರಬೇಕು. ಭಾವನ ಸಹಚರಿಯಾಗಿ ಅನೇಕ ಸಂವತ್ಸರ ಸವೆಸಿದ್ದ, ಅಕ್ಕ ಪಾರ್ವತಿಯೂ ಅದೇ ಭಾವನೆಯನ್ನು ಬೆಳೆಸಿಕೊಂಡಿದ್ದಳು!... ತನಗಿನೂ ನೆನಪಿದೆ. ಒಂದು ದಿನ ಬುಟ್ಟಿ ಮಾರಲು ಮುದುಕಿಯೊಬ್ಬಳು ಅಕ್ಕನ ಮನೆಗೆ ಬಂದಿದ್ದಳು. ಬುಟ್ಟಿಯನ್ನು ಕೊಳ್ಳಲು ಚೌಕಾಶಿ ನಡೆಯುತ್ತಿರುವಾಗ, ಆ ಊರಿನ ಮದುವೆಯಾದ ಒಂದು ಹೆಣ್ಣು ಗಂಡನನ್ನು ಬಿಟ್ಟು ಅದೇ ಊರಿನ ಇನ್ನೊಬ್ಬನೊಡನೆ ಬಾಳೆ ಮಾಡುತ್ತಿರುವ ಸುದ್ದಿಯನ್ನೆತ್ತಿದ್ದಳು. ಅಕ್ಕ ಪಾತು ಒಡನೆಯ “ಇಲ್ಲಿ ನೋಡು. ಇನ್ನು ಮುಂದೆ ಇಂಥ ಹಾದರಗಿತ್ತಿಯರ ಸುದ್ದಿಯನ್ನು ನಮ್ಮ ಮನೇಲಿ ಹೇಳಬೇಡ. ನಮ್ಮ ಮನೇಲಿ ಬೆಳೀತಿರುವ ಹೆಣ್ಣುಮಕ್ಕಳಿವೆ. ಇಂಥ ಮಾತು ಅವರ ಕಿವಿಗೆ ಬೀಳಬಾರದು!...” ಸಿಡುಕಿ, ಆ ಮುದುಕಿ ಅವಾಕ್ಕಾಗುವಂತೆ ಮಾಡಿದಳು... ಇಂಥ ಸಂಪ್ರದಾಯ ಶರಣರ ಮುಂದೆ ತನ್ನ ಹಗರಣವನ್ನು ಪ್ರಕಟಿಸಿ, ಅವರ ಸಹಾಯ ಕೋರಿದರೆ, ಅವರಿಂದ ಎಂಥ ಪ್ರತಿಕ್ರಿಯೆ ಬರಬಹುದೆಂಬುದು ಸ್ವಯಂ ವೇದ್ಯವೇ ಆಗಿತ್ತು... ರುಕ್ಕಿಣಿ ಹತಾಶಳಾದಳು... ಈ ತುಯ್ದಾಟದಲ್ಲಿ ಇನ್ನೂ ಎಂಟೊಂಬತ್ತು ದಿನಗಳು ಕಳೆದುಹೋಗಿದ್ದವು... ರುಕ್ಕಿಣಿಗೆ ಈ ತಾಳತಪ್ಪಿದ ಮನಃಸ್ಥಿತಿಯಲ್ಲಿರುವಾಗ, ತನ್ನನ್ನು ಬಹಳವಾಗಿ