ಪುಟ:ವೈಶಾಖ.pdf/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೪೯ ಹೀಗೆ ಮಾತನಾಡುವಾಗ ಯಾವುದೊ ಜ್ಞಾನದಲ್ಲಿ ಅವಳು ಮನೆಯ ಮುಂದಿನ ಬಾಗಿಲಿಗೆ ತಾಪಾಳುಹಾಕುವುದನ್ನು ಮರೆತಿದ್ದಳು. ಒಗ್ಗರಣೆಗೆ ಸಾಸಿವೆ ಕಾಳು ಬೇಡಲು ಬಂದ ಲಕ್ಷಮ್ಮ ನಡುಮನೆಯಲ್ಲಿ ಅವಿತು ನಿಂತು ಅವರಿಬ್ಬರ ಸಂಭಾಷಣೆಯನ್ನೂ ಕೇಳಿಸಕೊಂಡವರು, ರುಕ್ಕಿಣಿ ಮತ್ತೆ ಮತ್ತೆ ಲಕ್ಕನನ್ನು ಒತ್ತಾಯಿಸಿ, ಹಿತ್ತಲಿನ ಬಾಗಿಲಿನಿಂದ ಒಳಬರುತ್ತಿರುವಂತೆ, ಮೆಲ್ಲನೆ ಮುಂಬಾಗಿಲಿನಿಂದ ಜಾರಿಕೊಂಡರು. ಅವರ ಮಾತಿನ ಒಗ್ಗರಣೆಗೆ ಈಗ ಹೇರಳ ಸಾಮಗ್ರಿ ಸಿಕ್ಕಿತ್ತು. ಅದಕ್ಕೆ ಬಣ್ಣ ಕಟ್ಟಿ, ಒಳಗಿಂದೊಳಗೆಯೆ, ಬ್ರಾಹ್ಮಣಕೇರಿಯಲ್ಲಿ ಬಿತ್ತುತ್ತ ನಡೆದಳು. ಸಮಾಚಾರ ಊರಿನ ಇತರೇ ಕೇರಿಗಳಿಗೂ ಹರಡಲು ಬಹಳ ಸಮಯವೇನೂ ಹಿಡಿಯಲಿಲ್ಲ. ಅದೇ ರಾತ್ರಿ ಮಲಗುವ ಸಮಯದಲ್ಲಿ ಪುರೋಹಿತ ವೆಂಕಣ್ಣ ಜೋಯಿಸರು ತಮ್ಮಲ್ಲಿ ವೇದಪಾಠಕ್ಕೆ ಬರುತ್ತಿದ್ದ ಬಾಲ;ಕನೊಬ್ಬನ ಸಂಗಡಕೃಷ್ಣಶಾಸ್ತಿಗಳನ್ನು ತುರ್ತಾಗಿ ನೋಡಬೇಕೆಂದೂ ಜೋಯಿಸರ ಮನೆಗೆ ಈ ಕೂಡಲೆ ಬಂದು ತಮ್ಮನ್ನು ಕಾಣಬೇಕೆಂದೂ ಹೇಳಿಕಳುಹಿಸಿದರು. ಜೋಯಿಸರ ಈ ಅನಿರೀಕ್ಷಿತ ಕರೆಗೆ ಕಾರಣವೇನಿರಬಹುದೆಂದು ಅರ್ಥವಾಗದೆ, ಚಿಂತಿಸುತ್ತಲೆ ಶಾಸ್ತ್ರಿಗಳು ಜೋಯಿಸರ ಮನೆಯೊಳಗೆ ಕಾಲಿಟ್ಟರು. ಜೋಯಿಸರು ಅವರನ್ನು ತಮ್ಮ ಅಧ್ಯಯನದ ಕೋಣೆಯೊಳಗೆ ಕರೆದೊಯ್ದು, ತಾಂಬೂಲದ ತಟ್ಟೆಯನ್ನು ಮುಂದಿಟ್ಟು, “ಶಾಸ್ತಿಗಳೆ, ನಾವು ನಿಮಗೆ ಮೊದಲೆ ಹೇಳಿದಿವಿ-ಗಂಡನನ್ನು ಕಳೆದುಕೊಂಡ ಒಡನೆಯೆ ರುಕ್ಕಿಣಿಗೆ ಕೇಶಮುಂಡನ ಮಾಡಿಸಿ, ಕೇಶಮುಂಡನ ಮಾಡಿಸಿ, ಎಂದು. ಆದರೆ ನೀವು ನಮ್ಮ ಹಿತವಚನಕ್ಕೆ ಕುರುಡುಕಾಸಿನ ಕಿಮ್ಮತ್ತನ್ನೂ ನೀಡಲಿಲ್ಲ. ಇದರಿಂದ ನಮ್ಮ ದರುಮನಳ್ಳಿಯ ಇಡೀ ಬ್ರಾಹ್ಮಣ ಸಮಾಜವನ್ನೇ ಇದಿರುಹಾಕಿಕೊಂಡಿರಿ. ನಾವೇನೂ ಸಾಂಪ್ರದಾಯಿಕವಾಗಿ ನಿಮಗೆ ಬಹಿಷ್ಕಾರ ಹಾಕಿದೂನೂವೆ, ಒಳಗಡೆ ನಮಗೆಲ್ಲರಿಗೂ ನಿಮ್ಮ ಸುಸಂಸ್ಕತ ನಡೆನುಡಿಯ ಬಗ್ಗೆ, ನಿಮ್ಮ ದೈವಭಕ್ತಿಯ ಬಗ್ಗೆ, ತೋಟದ ಕಾಯಕದಲ್ಲಿ ನೀವು ನಿಮ್ಮನ್ನೆ ಸಮರ್ಪಣಭಾವದಿಂದ ತೊಡಗಿಸಿಕೊಳ್ಳುವ ಕಾರ್ಯಕ್ಷಮತೆಯ ಬಗ್ಗೆ ಅಪಾರ ಗೌರವವಿದ್ದದ್ದರಿಂದ ನಿಮ್ಮ ಶರತ್ತವನ್ನೆಲ್ಲ ಮರೆತು ಪುನಹ ಎಂದಿನಂತೆ ನಮ್ಮನಿಮ್ಮಲ್ಲಿ ಏನೂ ಆಗಲೆ ಇಲ್ಲವೇನೋ ಎನ್ನುವ ಹಾಗೆ ನಡೆದುಕೊಳ್ಳತ್ತಾ ಬಂದಿದೀವಿ. ಆದರೆ ಈಗ...” ವೆಂಕಣ್ಣಜೋಯಿಸರ ಮಾತುಗಳನ್ನು ನಿರ್ಭಾವದಿಂದ ಆಲಿಸುತ್ತಿದ್ದ