ಪುಟ:ವೈಶಾಖ.pdf/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೬೫ “ಎಣ್ಣು ಕಣ್ಣ... ಹಯ್ಯೋ, ಆ ಕತೆ ಯಾನು ಯೋಲ್ಲಿ? ಉಟ್ಟಿದ ಮೊಗಾವ ತೊಳುದು ಬೊಳುದು ಮೊರದಲ್ಲಿ ಮನಗಿಸಿ ಅವಳ ಮುಂದಕೆ ತಕ್ಕಂಡೋಗಿ ಇಡುದ್ರೆ, ಮೊಗ ಎಣ್ಣು ಅಂತ ತಿಳೂದು ಕೂಥೇಯ ಆ ಗೆಣಕಾತಿ ಪುಟ್ಟನಂಜಿ ಗಂಡು ಉಟ್ಟನಿಲ್ಲಾಂತ ಆ ಕೂಸ ನ್ಯಾಡ್ಡೆ, ತನ್ನ ಮೊಖವ ಆಚೋರಿಕೆ ತಿರುಗಿಸಿ ಬುಡೋದ?... ಅವಳೊಗ್ಲಿ ಅಂದ್ರೆ ಗಂಡ, ಆ ಹಲ್ಲುಬೀರಮರಿಸೋಮಿ-ಅವನ ಅವನ ಜತೆ ಅವನೂ ಕುಂತು ಅಟ್ಟೇಲಿ ಯಾರೋ ಸತ್ತೋದು ಅನ್ನೂವಂಗೆ ಗೊಳೋಂತ ಆಳೋದ?... ಎಂಗಸ್ತು ಮೋಗ್ಲಿ. ಈ ಗಂಡಸಿಗೇನು ರೋಗವ ಬಂದಿರಾದು ಅಂತೀನಿ?... ಅಟ್ಟಲಿ ಎಣ್ಣು ಉಟ್ಟಿದ್ರೆ ಗೋಳುಗರೀತಾರೆ. ಅದೇ ಎಣ್ಣು ಬೆಳದು ದೊಡ್ವಳಾದ್ರೆ, ಊರಿನ ಗಂಡಸರೆಲ್ಲ ಅವಳ ಕಣ್ಣಲ್ಲೆ ತಬ್ಬಕಂಡು ಮುದ್ದಾಡ್ತಾರೆ... ಇವರ ದುಂಡಗೆ ದುಡುದುನ ಕಟ್ಟ....” ಬುಂಡಮ್ಮ ಇವರಿಸ್ತಿದ್ದ ಅಂಗೆ ಗಂಗಪ್ಪನೂ ನಂಜೇಗೌಡನೂವೆ ಅವರ ಎದುರುಗಡಿಂದ ಬಂದು ಅವರಿಬ್ರ ಬಾಜೂನಲ್ಲೆ ಹಾದೋದರು. ಬುಂಡಮಾರು ಅಂದದ್ದು ಅವರಿಬ್ಬರೂ ಕೇಳಿಸಿರಬೇಕು. ಕೇಳಿಸ್ಕೂಂತ ತೊಳ್ಳೆ ನಡುಗೊ ಜೀವವ ಬುಂಡಮಾರು?... ಕಡ್ಡಿ ತುಂಡಾದಂಗೆ ನ್ಯಾಯ ಆಡ್ತಿದ್ದ ಬುಂಡಮ್ಮಾರ ಮಾತಿಗೆ ಊರಿನೋರೆಲ್ಲ ಹೆದುರಿದ್ದರು.... ಅದುಕೇನೆ ಗಂಗಪ್ಪ, ನಂಜೇಗೌಡ ಇಬ್ಬರೂವೆ ಕೇಳಿದರೂ ಕೇಳಿದ್ದೇ ಇದ್ದೋರಂಗೆ ತಲೆ ಬೊಗ್ಗಿಸಿ ಕ್ವಿಂಟೋದ್ದು! ಬುಂಡಮಾರು ಲಕ್ಕ ಇಬ್ಬರೂವೆ ಮಾಳದಲ್ಲಿ ಮಾತಾಡ್ತಿದ್ದಂಗೆ, ಊರ ಪಡ್ಡೆ ಹೈಕಳು ಗುಂಪುಗಾಡಿ ಕೋಲು ಆಕಕ್ಕೆ ಸುರು ಮಾಡಿದ್ರು... ಲಕ್ಕಂಗೆಬೆಟ್ಟಯ್ಯ ಸತ್ತ ಹೆಣದ ಕಯ್ದ ಕ್ರಯಪತ್ರಕ್ಕೆ ರುಜು ಆಕಿದ್ದ ನಾನೂವೆ ಇಂಗೇ ಬೆಳುದಿಂಗಳಲ್ಲಿ ಊರ ಪಡ್ಡೆ ಹೈಕಳು ಗುಂಪಾಗಿ ಕೋಲು ಆಕ್ತ ಇದ್ದದ್ದು ನೆಪ್ಪಾಯ್ತು.... ಬುಂಡಮಾರು ವಸಿ ಸಮ್ಮ ಆ ಹೈಕಳು ಕೋಲಾಕೋಡೆ ನ್ಯಾಹ್ನ ಇದ್ದೋರು “ಇವರು ಕೋಲು ಆಕೋದು ನಂಗೆ ಇಡೀನಿಲ್ಲ ಕನ್ನ ಲಕ್ಕ. ಇವಕ್ಕೆ ಪ್ರತುಮಾಡಿ ಎಜೆ ಆಕಕ್ಕೆ ಬರಕ್ಕಿಲ್ಲ. ನಮ್ಮ ಕಾಲದೋರು ಕೋಲು ಹುಯ್ಯೋದು ಕ್ವಾಡಕ್ಕೆ ಒಂದು ಚೆಂದ. ಆ ಕ್ವಾಟ ಕ್ವಾಡಕ್ಕೆ ಜನ ಎಂಗೆ ಘೋರಾಯಿಸ್ತಿದ್ರು ಗೃತೇಗ್ಲ?... ಇವತ್ತು ಅಲ್ಲೊಬ್ರು ಇಲ್ಲೊಬ್ಬು ತೆಳ್ಳತೆಳ್ಳಗೆ ನಿಂತವಲ್ಲ-ಇಂಗೇಂತ ತಿಳುಕಂಡ್ಯ?...” ಅಂತ ಇಂದಿನ ದಿನಗೊಳ ಸ್ಮರಿಸುದು.