ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೭೨ ವೈಶಾಖ ಒದ್ದು ಆಚೆಗೆ ಓಡಿಸ್ತಿದ್ದೆ” ಎಂದು ಗುಡುಗಿದರು. ಸರಿಸಿಯ ಬಲಾತ್ಕಾರಕ್ಕೆ ತಮ್ಮ ಮನೆಯ ಜಗುಲಿಗೆ ಬಂದುನಿಂತು ದೂರದಿಂದಲೆ ವೀಕ್ಷಿಸುತ್ತಿದ್ದ ರುಕ್ಕಿಣಿಯ ಆಂತರ್ಯದಲ್ಲಿ ಬೆಸ್ತರ ತರುಣ ಬದಲಾಗಿ ಸಿಡಿಮರದ ಮೇಲೆ ಲಕ್ಕನೇ ತೂಗಿ ತೇಲಿ ಮೂಡುತ್ತಿದ್ದ! “ನಡೀ ಅತ್ತೆ, ಅಲ್ಲಿಗೆ ಹೋಗೋಣ. ಹತ್ತಿರದಲ್ಲಿ ನೋಡಬಹುದು... ನಡೀ ಅತ್ತೆ”- ಸರಸಿ ಒಂದೇ ಸಮನೆ ದುಂಬಾಲು ಬಿದ್ದು ಪೀಡಿಸತೊಡಗಿದಳು. “ಬೇಡಮ್ಮ, ಅಲ್ಲಿ ವಿಪರೀತ ಜನ ಇಲ್ಲಿ ಕಾಣುತ್ತಲ್ಲ. ಮಕ್ಕಳು ಆ ದೊಂಬಿಗೆ ಸಿಕ್ಕೋಬಾರದು. ಬಾ, ಬೇಕಾದರೆ ನಾನು ನಿನ್ನನ್ನ ಎತ್ತಿಗೊಳೀನಿ” ಎಂದರೂ “ಏನೂ ಬೇಡ, ಏನೂ ಬೇಡ. ನಾನು ನಿಂತೇ ನೋಡ್ತೀನಿ” ಎಂದು ಸರಸಿ ಕೆನ್ನೆ ಊದಿಸಿ ನಿಂತಳು. ಅಷ್ಟಷ್ಟು ದೂರಕ್ಕೆ ಸಿಡಿ ತೇರು ನಿಲ್ಲುವುದು. ಆನ ಹಣ್ಣುಕಾಯಿ ಮಾಡಿಸುವರು. ಸಿಡಿಯಾಡುತ್ತಿದ್ದ ತರುಣನನ್ನು ಕೆಳಗಿಳಿಸಿ ಇನ್ನೊಬ್ಬನನ್ನು ಏರಿಸುವರು. ಮತ್ತೆ ಎತ್ತರದಲ್ಲಿ ಅದೇ ಗಿರಗಟ್ಟಲೆ, ಅದೇ ಜನರ ಕೇಕೆ, ಸಂಭ್ರಮ, ಕೊಂಬು ಕಹಳೆ ತಮ್ಮಟೆಗಳ ಅಬ್ಬರ. ಮತಾಪು ಗರ್ನಾಲುಗಳ ರಂಜನೆ. ಇನ್ನಷ್ಟು ದೂರ ಹೀಗೆ ಸಾಗಿದ ತರುವಾಯ ಆ ತರುಣನನ್ನು ಇಳಿಸಿ ಮತ್ತೊಬ್ಬನನ್ನು ಏರಿಸುವಿಕೆ- ಹೀಗೆ ಸಾಗಿದ ಸಿಡಿತೇರು ಕೆರೆ ಸಮೀಪದಲ್ಲಿದ್ದ ಗ್ರಾಮದೇವತೆ ಬಿಸಲುಮಾರಮ್ಮನ ಗುಡಿಯ ಮುಂದೆ ವಿಸರ್ಜನೆಗೊಂಡಿತು. ಅಲ್ಲಿ ಬಿಸಿಲುಮಾರಮ್ಮನಿಗೆ ಪೂಜೆ ಸಲ್ಲಿಸಿ, ಸಿಡಿಯಾಡಿದವರ ಬೆನ್ನಿನ ಕೊಕ್ಕೆಗಳನ್ನು ತೆಗೆದು, ಕೊಕ್ಕೆ ಚುಚ್ಚಿದ ಜಾಗಕ್ಕೆ ಶ್ರೀಗಂಧವನ್ನು ಮೆತ್ತಿದರು. ಅದೆಲ್ಲ ಸ್ವಾತ್ತ ನಿಂತ ಲಕ್ಕಂಗೆ ತಾನೂ ಇಂದೆ ಇಂಗೇಯ ಸಿಡಿ ಆಡಿ, ಆಮ್ಯಾಕೆ ತಮ್ಮ ಗುಡ್ಡಿನಾಗ ಅವ್ವ ಬೇಯಿಸಿದ್ದ ಭತ್ತದ ಮ್ಯಲೆ ಬಾಳೆಲೆಹಂಡಿ, ಅದುಕೆ ಬೆನ್ನು ಕ್ವಟ್ಟು ಮನಗಿದ್ದ ನೆಪ್ಪಾಯ್ತು, ಮುಂ ದಿನಗೋಲಲ್ಲಿ ಅವ್ವ ಬೇವಿನ ಔಸ್ಥೆ ಮಾಡಿ, ತನ್ನ ಗಾಯಗಳೆ ಲ್ಯಾಪ ಆಕಿದ್ದು... ೨೭ ಸಿಡಿ ಬಂದು ಹೋಗಿತ್ತು. ತೆರೆ ಬಂದು ತೆರೆ ಹೋದ ಹಾಗೆ ಊರಿಗೆ ಊರೇ ಮೇರೆಮೀರಿದ ಉತ್ಸಾಹ ಸಂಭ್ರಮಗಳಿಂದ ನಲಿದು ತನ್ನ ಹಿಂದಿನ ಮಾಮೂಲಿ ಯಾಂತ್ರಿಕ ಜೀವನಕ್ಕೆ ಮರುಳುತ್ತಿತ್ತು. ಇಲ್ಲಿಯ ತನಕ ಮರೆತಂತಿದ್ದ