ಪುಟ:ವೈಶಾಖ.pdf/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮೬ ವೈಶಾಖ ಅಡವಿಯಪ್ಪನೂ ಗಂಗವ್ವನೂವೆ ದಾಯಾದಿಗೋಳು. ಈ ಒಂದೇ ಅಟ್ಟಿಲಿ ವಾಸ. ಗಂಡ ಇಲ್ಲ ಗಂಗವ್ವಗೆ ಏಡೇ ಹೈಕಳು- ಒಂದು ಗಂಡು, ಒಂದು ಎಣ್ಣು, ಅಡವಿಯಪ್ಪಂಗೆ ನಾಕು ಗಂಡು ಮೂರು ಎಣ್ಣು. ಅದಕೇನೆ ಅವರ ಅಟ್ಟಿ ಹಂಚಿದ ಯಜಮಾಗ್ರ. “ಗಂಗಿ, ನಿಂಗಾರಾದ್ರೂ ಏಡೇ ಕೊನೆ. ಅಡವಿಗೆ ಅಟ್ಟಿ ತುಂಬ ಮಕ್ಕಳು. ಆದ್ರಿಂದ ಅಟ್ಟೇಲಿ ಒಂದು ಭಾಗ ನಿಂಗೆ; ಏಡು ಭಾಗ ಅಡವೀಗೆ, ಇನ್ನುಳಿಗೆ ಒಂದು ಭಾಗವ ಎಂಗಿದ್ರೂ ಇಬ್ಬರೂವೆ ಕೂಟ್ಟಿಗೆ ಮಾಡಿಕಂಡೇ ಇದ್ದೀರಿ. ಆದ್ರೆ ಈ ಕಟ್ಟಿಗೆ ಮಾತ್ರ ಈಗಿರೂವಂಗೆ ಇರಲಿ. ಇಬ್ಬರೂವೆ ನಿಮ್ರತ್ತು, ಎಮ್ಮೆ, ದನ, ಕರ ಕಟ್ಟಿಕಂಡು ಹೊಂದಿಸಿಕಂಡೋಗಿ... ಏಟೇ ಆದ್ರೂ ನೀವು ಒಂದೇ ರಕ್ತ ಬೆರದಿರೋರು... ಈ ಇಸ್ಯದಲ್ಲಾರೂ ಕದ್ದ ಮಾಡ್ಡೆ ನಡಕಂಡು ಓಗಿ...”- ಇಂಗೆ ತೀಪು ಕ್ವಿಟ್ಟೋಗಿದ್ರು, - ಆಗ್ಗಲೆ ಅಡವಿಯಪ್ಪ ಲಕ್ಕನ ಕುಟ್ಟೆ ಯೋಳಿದ್ದ: “ನೀನು ಕುಳವಾಡಿಯಾಗಿ ಅವರ ಜ್ವತೇಲಿ ಬಂದಿರನಿಲ್ಲವೇನ್ದ. ಲಕ್ಕ. ಆಗ ಈ ಯಜಮಾನ್ನು ಕದ್ದ ಮಾಡ್ಲೆ ನಡಕಂಡೋಗಿ ಅಂತ ಯೇನೊ ಯೋಳೋದ್ರು... ಆದ್ರೆ ಕಟ್ಟಿಗೇನು ಭಾಗ ಮಾಡದೇಯ, ನಾವೇಡು ಅಟ್ಟಿಯೋರು ಯಾವತ್ತಾರು ಕದ್ದ ಮಾಡೂವಂಗೆ ಮಾಡಿಬುಟ್ಟು ವೊದರಲ್ಲ.... ಅಲ್ಲ ಕಣ್ಣೆ. ಅಟ್ಟಲಿ ಭಾಗ ಮಾಡಿದಂಗೆ, ಈ ಕ್ವಟ್ಟಗೇಲೂವೆ ಅಂಗೇಯ- ಏಡು ಭಾಗ ನಂಗೆ, ಒಂದು ಭಾಗ ಗಂಗೀಗೆ, ಅಂತ ಮಾಡಬಾರದಾಗಿತ್ತ? ನೀಯೇನೇ ಅನ್ನು, ನಮ್ಮೂರ ಈ ಯಜಮಾನ ಬೊಡ್ಡಮಕ್ಕಳು ಹಲಾಲುಕೋರು-ಯಾವ ನ್ಯಾಯಾನೆ ತ, ಅದ್ರ ಬುಡಮಟ್ಟ ಪರಿಯರಿಸಕ್ಕೆ ಇಲ್ಲ.... ಯೆಲ್ಲೊ ಒಂದು ಕೇಪು ಮಡಿಗೇ ವೊಯಾರೆ! ಅದು ಯಾವುತ್ತಾರು ಡಂ ಅಂತ ಸಿಡಿಯೋದೇಯ!” ಅಡವಿಯಪ್ಪ ಯೋಳಿದಂಗೇ ಆಯ್ತು... ಅವರು ಏಡು ಆಳಿನ ಸಂಸಾರವೊವೆ ಮೊದಮೊದ್ಲು ವೊಂದಿಕೊಂಡು ವೊಂದಿಕೊಂಡೇ ನಡೀತಿದ್ದೂ, ಆದ್ರೆ ಬತ್ತಾ ಬತ್ತಾ ಈವಯ್ಯಂಗೂ ಗಂಗವ್ವಗೂ ಕದ್ರ, ಕದ್ರ, ಕ... ಕದ್ರಕ್ಕೆ ಕಾರಣ ಇಷ್ಟೇಯ- ಅಡವಿಯಪ್ಪ ಅವ್ವ ಸ್ವತ್ತಾರೆ ಎದ್ದ ಕೂಡ್ಲೆ ಪಂಚಗವ್ಯ ಅಂತ ಹಾಳುಕ್ಸಟ್ಟೆಗೆ ಗೋವಿನ ಗಂಜಳ ಕುಡಿಯೋದು ನೇಮ ಇಟ್ಟುಕಂಡಿದ್ದು, ಅದರಾಗು ಕಪ್ಪುಗೋವಿನ ಗಂಜಳಾನೆ ಆಗಬೇಕು! ಅವರ ತಾವು ಒಂದು ಕಪ್ಪುಹಸ ಇತ್ತು.ಅದು ಕಾಡಲ್ಲಿ ಹುಲಿ ಬಾಯಿಗೋಗಿ, ಅಡವಿ ಅವ್ವಂಗೆ ದಿಕ್ಕೇ ತೋಚನಿಲ್ಲ. ಕೊನೀಕೆ ಅವಳು ಗಂಗವ್ವನ ಆಸ್ರಯಾನೆ