ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೧ ಮುಗುದಮ್ಯಾಲೆ ಲಕ್ಕನತ್ರ ಬೇತುಗಂಡಿದ್ದ.... ಆದ್ರೇ ಗಂಗವ್ವ ಬಾಯಲ್ಲಿ ಬಜಾರಿ ಅದೂವೆ ಮಾನಿಸ್ತ ಎಂಗಸು. ಹಾದೀಲಿ ಹೊಯ್ತಿರೋವಾಗ, ಇನ್ನೊಬ್ಬ ಗಂಡಸ ಕತ್ತೆತ್ತಿ ಮುಕ್ಕಸ ಗ್ವಾರನಿಲ್ಲ! ಈಗ ಅಡವಿಯಪ್ಪನೊಂದ್ದೆ ಅವಳು ಕಾದಾಟಿಕೆ ನಿಂತದ್ದು ನಂಜೇಗೌಡಂಗೆ ಕ್ವಾಟೆ ನುಗ್ಗಕ್ಕೆ ಭರ್ಜರಿ ಕನ್ನ ಸಿಕ್ಕಿದಂಗಾಯ್ತು... ಒಂದು ಸಂತೆಜಿನ ಹುಣಸೂರೆ ವೋಗಿದ್ದಾಗ, ನಂಜೇಗೌಡ ಸಿಕ್ಕಿ, “ಬಾಪ್ಪ ಅಡವಿ, ನಿನ್ನ ಸಂಗಾಟ ವಸಿ ಮಾತಾಡೊದೆ” ಅಂತ ಕರದ್ರು ಕನ್ಹ, ಲಕ್ಕ, ನಂಗೆ ವೋಗಕ್ಕೆ ಇಷ್ಟ ಇರನಿಲ್ಲ, ಆದ್ರೆ ಆ ನಂಜೇಗೌಡ ಅಂದರೆ, ನಿಂಗೆ ಗ್ಲತ್ತೆ ಅದಲ್ಲ ಬೋ ಪಾತಕದ ಮನಸ, ಬೇಕಾರೆ ಅಮ್ಮು-ಕಾಳಿಯ ಬೋಲಿ ಮಾಡ್ತಾನೆ, ಬೋಳಿಯ ಕಾಳಿ ಮಾಡ್ತಾನೆ... ಅವನಾವು ಯಾಕೆ ನಿನ್ನೂರ ಕಟ್ಟಿಕಾಬೇಕು ಅಂತ ನಿರ್ವಾಯಿಲ್ಲೆ ಅವ್ರ ಜ್ವತೆಗೋದೆ. ಮುನೇಶ್ವರನ ಕಾವಲೆ ಕರಕಂಡೋಗಿ, ರಸ್ತೆ ಬಾಜೂನಲ್ಲಿರೊ ಒಂದು ಮರದ ನೆರಳಲ್ಲಿ ಕುಂಡರಿಸಿ, - “ಅಡವಿ, ಇಂದುಕೆ ನೀ ಬೋ ಸೂರನಾಗಿದ್ದ... ಆದ್ರೆ ಈಗ್ಯಾಕೆ ನಿನ್ನ ಗಂಡಸ್ತನವೆ ಹೊಂಟೋಗಿರೋ ಅಂಗದಲ್ಲ?” ಅಂತ ಕೆಣುಕ್ಷನಂತೆ. “ಯಾಕಣ್ಣ?” - ಪೆಚ್ಚಾಗಿ ವದರಿದಂತೆ ಅಡವಿ. “ಅಲ್ಲ ಕನೋ, ಅಡವಿ, ಅದೇನ ನಿಮ್ಮಟ್ಟಿ ಜಗಳ ಹಾದಿ ಬೀದಿ ರಾಮಣ್ಣ ಆಗಿಬುಟ್ಟದಲ್ಲ?” ಸೌದೆ ಸೀಳೋನಾಗ ಸನಗು ಎತ್ತೋನಂಗೆ ಕೇಳಿದ್ದ ಕನ್ನಅಂದಿದ್ದ ಅಡವಿ. ಅದುಕೆ ಅಡವಿ, ಕಲ್ಕಿ ಕಯ್ಯ ವೋಸೀಕತ್ತ, “ಏನು ಮಾಡಾದು ನಂಜಣ್ಣ, ಎಲ್ಲ ನನ್ನ ಅಣೆಬರಾವು"ಅಂದನಂತೆ. “ಅದೇನು ಆ ಗಂಗಿ ನಿನ್ನ ಮಾನವ ಈ ಕೇರೀಲದ್ದಿ ಆ ಕೇರೀಲಿ ತಗೀತ ಅವಳಂತಲ್ಲ?” “ಹಯ್ಯೋ, ಅದ ಯೋಳಿಕಂಡ್ರೆ ನಾಚಿಗೇಡು, ಸುಮ್ಮಕಿರಣ್ಣ. ಯಾನೊ ನಮ್ಮ ಸಮ್ಮಂದದ ಎಣ್ಣು ಅಂತ ನಾನೂವೆ ಅವಳು ಆಡೋ ಮಾತ್ನಲ್ಲ ಎಂಗೊ ಸೈಸಿಗಂಡು ಬತ್ತಾ ಇನ್ನಿ.” “ಕೆಟ್ಟ ಕೆಟ್ಟ ಮಾತ್ನಲ್ಲೆ ಬೋಲ್ಕತಾಳಂತೆ, ನಿಮ್ಮಟ್ಟಿ ಸುತ್ತಮುತ್ತಲೋರು, ನನ್ನತ್ರ ಬಂದು ಯೋಳ್ತಾನೆ ಅವ್ರ-ಕಿವೀಲಿ ಕ್ಯಾಳಬಾರದಂತೆ ಮಾತಾಡ್ತಾಳೆ, ಬೋ ಮಾನಗೆಟ್ಟ ಎಂಗಸು, ನಿಚ್ಚ ಇದೇ ತಲೆನೋವಾಗಿ ಬುಟ್ಟದೆ ನಮಗೆ, ಅಂತಾವ... ಮೀಸೆ ಹೃತ್ತಿರೊ ಆ ಗಂಡಸು ಈಪಾಟಿ ಬೋಗುಳ ಕ್ಯಾಳಿಕಂಡು ಅದ್ಯಾಕೆ ಸುಮ್ಮಕಿದ್ದಾನೋ ತಿಳೀದು, ಅಂತಾನೆ ಇದ್ದಾರೆ...”