ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯೪ ವೈಶಾಖ ಗಂಗವ್ವ ಅಟ್ಟೇಲಿ ಇರನೇ ಇಲ್ಲ. ಯಾರದೊ ಅಟ್ಟೇಗೋಗಿದ್ದು, ಆಚಿಂದ ಅವಳು ಅಟ್ಟಿ ವಳೀಕೆ ಕಾಲಿಡ್ತ ಇದ್ದಂಗೇಯ ಪಡಸಾಲೆ ಅಂಚಿನಲ್ಲಿ ಲಕ್ಕ ನಿಂತಿದ್ದ ಕಂಡು, - “ಲೋ ಲಕ್ಕ, ಯೇನ್ದ ಇದು ನಿನ್ನ ದಾಸ್ಪೀಕ?... ನಮ್ಮ ಪಡಸಾಲೆ ವಳೀಕೆ ಕಾಲಡೊವಂಗೆ ಅದೆಯೆನ್ದ? - ನಿನ್ನ ಜಾತಿಯೇನು? ನನ್ನ ಜಾತಿಯೇನು?...” ಉಚ್ಚುಚಾಗಿ ಅರಚಕ್ಕೆ ಸುರು ಮಾಡಿದ್ದು. “ಪಂಚಾತಿಯೋರು ನಿಮ್ಮ ಕರಿ ಅಂದ್ರ, ಅದ್ಯೆ ಬಂದೆ...” “ಯಾರಾರ ಕರೀಲಿ. ಮೊದ್ದು ಪಡಸಾಲೆ ಕಡದು ಜ್ವರೀಕೆ ಬಾ. ಅಮ್ಮಾಕೆ ಮುಂದಿನ ಮಾತು.” ಈ ಬಾರುಕೋಲ್ಪಿಂದ ಹೈಡಸಿಕೊಂಡೋನ ತರ ಜರನೆ ಇಳುದೋಗಿ, ಪಡಸ್ಯಾಲಿಂದ ತಟಕ್ಕನೆ ವೊರೀಕೆ ಬಂದು ಕ್ವಿಟ್ಟಿಗೇಲಿ ನಿಂತಿದ್ದ. ಅದೇ ವ್ಯಾಕ್ಯಕೆ ಸತ್ಯಾಗಿ ಗಂಗವ್ವನ ಸಿನೇಮಿತಗಾತಿ ನಿಂಗವ್ವ ಬಂದ್ಲು. ಅವಳು ಬತ್ತಿದ್ದಂಗೇಯ, ಗಂಗವ್ವ ನಿಂಗವ್ವನ ಕುಟ್ಟೆ, “ಕ್ವಾಡೆ ನಿಂಗಿ, ಹೊಲೇರು ಏಟುತೋರ ಎಚೋಗವೆ?... ಈ ಬಡ್ಡಿ ಹೈದ, ಪಂಚಾತಿಯೋರು ಕರದ್ರು ಅಂತೇಳಿ ನನ್ನ ಪಡಸಾಲೆ ವಳೀಕೆ ಬಂದಿಲ್ಲ....”- ಈ ತರ ತಪ್ಪಿಸಿದ್ದು. “ಅಂಗ?...” ಅಂತ ಕಣ್ಣ ಅಸ್ಸು ಅಗಲಕೂ ಕಿಸದು, “ಕಾಲಕೆಟ್ಟೋಯ್ತು ” ಅಂತ ತಳ ಆಕಿದ್ದು ನಿಂಗವ್ವ, “ಊ, ಕೀಳುಜಾತಿ ಹೊಲೇರಿಗೂವೆ ಈ ದಿಮಾಕು ಬಂದಮಾಗೆ ಇನ್ನೇನವ್ವ ಉಳೀತು?- ಇವತ್ತು ಪಡಸಾಲೆ ವಳೀಕೆ ಬತ್ತಾನೆ. ನಾಳೀಕೆ ನಮ್ಮ ಮೊಗ್ಗಲಿಗೇ ಮನಗತೀನಿ ಅಂತಾನು ಬತ್ತಾನೆ. ನೇರ್ಪಾಯ್ತು ಬುಡು...” ಗಂಗವ್ವ ಇಂಗಂದಾಗ ಲಕ್ಕಂಗೆ ನೆತ್ತಿಂದ ಉರಿ ಕಿತ್ತುಗತ್ತು, ಮನಸ್ಸಲ್ಲಿ ಇಂದೆ ನಡು ಅದೆಂಗಾರು ಮತ್ತು ಅಂತ ಜೋಜಿಗಪಟ್ಟ... ಆವತ್ತು ತಾನೂ ಅವಳೂವೆ ಚಿಕ್ಕೋರಾಗಿದ್ದಾಗ, ಕಾಡಲ್ಲಿ ದನ ಕಾಯ್ತಿದ್ದಂಗೆ ಮಳೆ ಬಂದು, ನೆಂದು, ಪಜ್ಜಿಯಾಗಿ ತಾವಿಬೂವೆ ಹುಲಿಮೆಳೆ ವಳುಗೆ ವೊಕ್ಕಂಡು ನಡುಗ್ಯ ಕುಂತಿದ್ದಾಗ, ಇದೇ ಗಂಗಿ... ಊ. ತೀಟೆ ಮುಗದಮ್ಯಾಲೆ ನಾ ಹೊಲೆಯ... ಈ ಕ್ಯಾಕರಿ ಮೊಕ್ಕೆ ಉಗೀಬೇಕು ಅನ್ನುಸ್ತು... ಲಕ್ಕೆ ಇಂಗೆ ಚಿಂತೆ ಮಾಡ್ತ ಇರೋನೂವೆ“ಹೂ, ಈಗೇಳು-ಅದೇನ ನಿನ್ನ ಕೊಳೆ ಪಂಚಾತಿ ಮಾತು?” -