ಪುಟ:ವೈಶಾಖ.pdf/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೯೯ ತಪ್ಪು ಮಾಡಿಲ್ಲಿ, ಇವಳು ವೊರಗಡೆ ಇಲ್ವಗ, ಈ ತರ ಸಿಕ್ಷೆ ಕ್ವಡಾದು ದರುಮ ಅಲ್ಲ... ಈಗೇನಂತೆ ಮುಟ್ಟು ಕಳೀಲಿ. ನೀರೂ ಆಗ್ಲಿ. ಆಮ್ಯಕೊಂದು ಜನ ಸೇರಿ ಇವಳೆ ನೀವೆಲ್ಲ ಯೋಳದಂಗೆ ಸಿಕ್ಷೆ ಕ್ವಿಟ್ಟು ಪಾಟ ಕಲಿಸೂನ” ಇಂಗೇಳಿ, ಗಂಡಾಗಿ ಬಂದಿದ್ದ ನ್ಯಯದ ಜೀಜ ನರಕಿ ಮೆತ್ತಗೆ ಮಾಡಿದ್ದ... ಅವನ್ನು ಯೇರಿಸಿಂಗಿ ಇಳಿಸಿಂಗಿ ಆಟ. ಆವಯ್ಯ ಯೇರಿನ್ನೂ ಬಲ್ಲ ಇಳಷ್ಟೂ ಬಲ್ಲ!... ನ್ಯಾಯಸ್ತರೆಲ್ಲ ನಂಜೇಗೌಡ ಮಾತ್ತೆ ಕಬೂಲಿ ಯೋಳಿ, ವಪ್ಪಿದ್ರು. ಪಂಚಾತಿ ಮುಂದಕೋಯ್ತು... ಮುಂದ ಎಂಟತ್ತು ಜಿನ ಇನ್ಯಾವ ಇಸೇಸವೂ ಇಲ್ಲೆ ಕಳೀತು. ಒಂದು ಬೇಸ್ತವಾರ ಸಂತೇಲಿ ಸಿಕ್ಷ ಅಡವಿಯಪ್ಪ ಲಕ್ಕನ್ನ ಹೊಳೆ ಅತ್ರ ಕರಕಂಡೋಗಿ ಕುಂಡರಿಸಿಕೊಂಡು ಗುಟ್ಟಾಗಿ, “ಲೋ ಲಕ್ಕ, ನೀ ಯಾರತ್ರವೂ ಬಾಯಿ ಬುಡಕಲ್ಲಾಂತ ಬಾಸೆ ಕ್ವಟ್ಟರೆ ಒಂದು ಮಾತೇನಿ” ಅಂದ ಲಕ್ಕ, - “ಅಡವಿಯಪ್ಪಾರೆ, ಇದ್ಯೆ ಸತ್ಯ ಪರ್ಮಾಣ ಯಕೆ?- ನನ್ನ ತಾವು ನಂಬಕಿದ್ರೆ ಯೋಳಿ, ಇಲ್ಲದಿದ್ರೆ ಬುಟ್ಟಬುಡಿ” ಅಂತ ವಸಿ ಬ್ಯಾಸರದಿಂಧೆ ನುಡದ. ಆಗ ಅಡವಿಯಪ್ಪ, “ಅಂಗಂದೆ, ಅಂತ ಬ್ಯಾಸರ ಮಾಡಕೋಬ್ಯಾಡ ಕನ್ಹ... ಇದು, ತಲೆವೋಗೋ ಇಚಾರ...” ಅಂತಿದ್ದಂಗೇಯ ಲಕ್ಕ, “ಅಂಗಿದ್ರೆ, ನನ್ನ ತಾವು ಯೋಳನೇ ಬ್ಯಾಡಿ... ಅದೆಲ್ಲಿ ಗಾಚಾರ” ಅಂದ. ಅಡವಿಯಪ್ಪ, “ಇದರಾಗೆ ನಿಂಗೇನು ಆಗಕ್ಕಿಲ್ಲ ಕನ್ಹ... ಈ ಮಾತು ನನ್ನಿಂದ ವೊಂಡ್ರು ಅನ್ನದು ಪ್ರಚುರಾದ್ರೆ, ಈ ಊರ ಜಯಮಾನು ನನ್ನ ಕಂಡ್ತಾ ನ್ಯಾತಾಕಿಬುಡ್ತಾರೆ..” - ಇನ್ನೂ ದನಿ ತಗ್ಗಿಸಿ ಯೋಳ, ಆಗ ಲಕ್ಕ, - “ಅಂಗಂದ್ರೇನ ನೀವೇಳಿರಾದು? ನಂಗೊಂದೂ ಅರ್ತ ಆಯ್ತಾ ಇಲ್ಲ” ಅಂದ. “ನ್ಯಾಡ್ಲ, ಇದು ಬರೀ ನಮ್ಮ ಗಂಗಿ ಇಸ್ಯವೆ ಆಗಿದೆ, ನಂಗೋಟು ಚಿಂತೆ ಇನ್ನಿಲ್ಲ. ಇದು ನಮ್ಮ ಮಟದವರೂ ವೋಗಿ ಗಂಟಾಗಿರಾದ್ರಿಂದ, ನಿಂಗೇಳಕೆ ಇಂದೂ ಮುಂದೂ ಕ್ವಾಡ್ಲೆ...ಆದ್ರೆ ಮೊದ್ದೆ ನಿನ್ನ ಕುಟ್ಟೆ ಆದ್ರೆ ನಿನ್ನ ಕುಟ್ಟೆ ಯೋಳ್ಳಿಲ್ಲ, ಇಂತಾದ್ದು ಯಾವಾರ ಇಸ್ಯ ನಡದ್ರೆ, ನನ್ನ ವೊಟ್ಟೆ ವಳುಗೆ ನಾ ಇಟ್ಟುಕೋನಾರೆ... ಅದ್ರೆ, ನಡದದ್ದ ನಿನ್ನ ತಾವು ಯೋಳಿ ನನ್ನ ಮೊಟ್ಟ ಉಬ್ಬರಣೆಯ ಕೊಳಕೊಳಾನ