________________
ಸಮಗ್ರ ಕಾದಂಬರಿಗಳು ೩೦೩ ಮಾದೇಶ್ವರನೇ ಗ್ವತ್ತು... ಮಾದಮ್ಮ ಗಂಗಿಯ ಸ್ವಾಮಿಗೋಳತ್ರ ಕರಕೊಂಡೋದ್ರೂ, ಇಲ್ಲ ಮಟದ ಇಂದಕಿದ್ದ ತನ್ನ ಕ್ಲಾಣೆಗೆ ಕರಕಂಡೋಗಿ ನಂಜೇಗೌಡಂಗೇ ಬ್ಯಾರೆ ಮನೆ ಬುಟ್ಟೂ, ಯಾರ್ ಲಕ್ಕ ಯೋಳಬೇಕು?...” -ಇಸ್ರೋಳಿ ಅಡವಿಯಪ್ಪ ಮತ್ತೊಂದು ದಪ, “ನಿನ್ನ ದಮ್ಮಯ್ಯ ಕನ್ಯ. ಮನಾ ನಿನ್ನ ಕೇಳಿಕತ್ತೀನಿ, ಯಾರನ್ನೂ ಬಾಯಿ ಬುಡಬ್ಯಾಡ” ಅಂತ ಬೇಡಿದ್ದ... ಊರ ದೊಡ್ಡಕೆರೆ ಅಂಚಲ್ಲಿ ಇದೇ ಯೋಚೇಲಿ ಮುಳುಗಿದ್ದ ಲಕ್ಕ, ಒಂದು ಕಲ್ಲು ತಕ್ಕಂಡು ಕೆರೆ ನೀರಿಗೆ ಬಿದ್ದ. ಚಪ್ಪ ಆಗಿದ್ದ ಆ ಕಲ್ಲು ಕೆರೆ ನೀರ ಚಕ್ ಚಕ್ ಅಂತ ವೋಟೋಟು ದೂರಕೂ ಹಾರುಸ್ತಾ ವೋಗಿ, ಸುಮಾರು ದೂರದಲ್ಲಿ ಮುಳಿಕತ್ತು... ಮುಂದೆ ಮೂರೇ ಜಿನದ ವಳುಗೆ ಪಂಚಾತಿ ಸೇರು ಆಗ ಮಾತ್ರ ನಂಜೇಗೌಡ ನಾಟಕ ಆಡಿದ್ದ: “ನಾವು ಯಜಮಾನೆಲ್ಲ ಈ ಗಂಗಿಯ ಬೆತ್ತಲೆ ಮಾಡಿ, ಈ ಕಲ್ಲುಕಂಬಕೆ ಕಟ್ಟಿ, ವೊಡದು ಬುದ್ದಿ ಕಲಿಸುವಾ ಅಂತಿದ್ದೊ. ಆದ್ರೆ ನಮ್ಮ ಮಟದ ಬುದ್ದಿಯೋರ ಒಂದು ಮಾತು ಕೇಳುವಾಂತ ಅವರತ್ರ ವೋದಾಗ, ಅವರು-'ಎಣ್ಣೆಂಗಸು. ಒಳ್ಳೆ ಅರೇದೋಳು. ಇವಳ ಬೆತ್ತಲೆ ಮಾಡಿ ಊರ ನಡೂ ಮದ್ಯ ನಿಲ್ಲುಸೋದು ನಂಗ್ಯಾಕೊ ಸರಿ ತೋರನಿಲ್ಲ, ಅವಳ ಕಯ್ಲಿ ತಪ್ಪಾಯ್ತು, ಇನ್ನಿಂಗೆ ಬಜಾರಿ ಬಾಯಿ ಮಾಡಕ್ಕಿಲ್ಲ ಅಂತ ಅನ್ನುಸಿ, ಅತ್ತೊ ಇಪ್ಪತ್ತೊ ರೂಪಾಯಿ ದಂಡ ಆಕಿ, ಸಾಕು'- ಅಂದು, ಒಂದು ದಪ ಪಂಚಾತಿ ಕಟ್ಟಿ ಅದಮ್ಯಾಲೆ, ಅದೇ ಏಟೋ ಬುದ್ದಿ ಕಲಿಸಿದೆ'- ಅಂತಾನು ಅಂದು... ಆ ಪರ್ಕಾರ ಇವಳು ಈಗ ಅಡವಿಯಪ್ಪನ್ನ ಈನಾಮಾನ್ತಾಗಿ ಬೈದ್ದು ತಪ್ಪು. ಮತ್ತೆ ಪಂಚಾತೀಲಿ ಎದೆ ಎತ್ಕಂಡು ಅಲ್ಕ ಅಲ್ಕಾಗಿ ಮಾತಾಡಿದ್ದು ತೆಷ್ಟೂಂತ ವಪ್ಪಿಕಳಿ. ಆಮ್ಯಾಕೆ ಕ್ವಾಡಾವ.” ಸ್ಯಾನುಬೋಗ್ರು, “ವಪ್ಪಿಕತ್ತೀಯೇನವ್ವ ಗಂಗಮ್ಮ?” -ಪ್ರಶ್ನೆ ಎಸ್ತರು. ತಕ್ಷಣ ಗಂಗಿ “ವಪ್ಪಿಕತ್ತೀನಿ ಸೋಮಿ, ತೆಪ್ಪಾಯ್ತು. ಇನ್ನು ಮುಂದೆ ಅಂಗೆ ನನ್ನ ಬಾಯಲ್ಲಿ ಕೆಟ್ಟ, ವಾಕ್ಸ ಕಡಸಕ್ಕಿಲ್ಲ” ಅಂತ ಬಾಸೆ ಕ್ವಿಟ್ಟಂಗೇಳಿ, ತನ್ನ ಸ್ಯಾಲೆ ಸೆರುಗನ ಗಂಟು ಬಿಚ್ಚಿ, ಅತ್ತು ನಾಣ್ಯದ ರೂಪಾಯಿ ಸ್ಯಾನುಬೋಗರ ಮುಂದೆ ಸುರುದ್ದು. “ಮದ್ವಾದ್ಯಾಗಿ ನಡಕಾಬೇಕು. ಮುಂದೆ ನಿನ್ನ ಕ್ವಾಪ ತಾಪ ಯೆಲ್ಲಾನು