ಪುಟ:ವೈಶಾಖ.pdf/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦೬ ವೈಶಾಖ - ಗ್ವಾಡೆ ಯೇಳುಸಿ ಆಗಿತ್ತು. ಮತ್ತೆ ವಸಿ ಜನ ಲಕ್ಕಂಗೆ ಸಾಸ್ತಿಗಳ ತಾಟ, ಕೇಸವಾರ ತಾಟ, ಮಟದ ಅಯ್ಯನೋರ ಕೆಲ್ಲ-ಇಂಗೆ ಯೇನಾರ ಜಂಬರ ಬಿದ್ದು, ಅಡವಿಯಪ್ಪ ಏಟೋ ಜನ ಮಿಲಾಕತ್ತಾಗಿಲ್ಲ... ಒಂದು ಜಿನ ಲಕ್ಕ ಕೆರೆ ಕಡೀಕೆ ವೋಲ್ವಗ, ಇಂದ್ರಿಂದ ಬತ್ತಿದ್ದ ಅಡವಿ ಲಕ್ಕನ ಕೂಗಿ, ನಿಲ್ಲುಸಿ, ಕೆರೆ ಆಚೆಗಿರೊ ಕೋಡಿ ಬಸಪ್ಪನ ಗುಡಿ ತಾವಿಕ ಕರಕಂಡೋಗಿ, ಪುನಾ ತನ್ನ ಯತೆಯ ತೋಡಿಕಂಡ... “ಲಕ್ಕೆ, ಆ ಗ್ವಾಡೆ ಆಕಿಸಿದ್ದು ನಂಗೆ ಎಂತಾ ಅನ್ನಾಯ ಆಯ್ತು ಅಂತೀಯ?... ಆ ಗಂಗಿ ಕಡಿಂದ ನಾನು ಆಟೀಟು ತೊಪ್ಪೆ ಎತ್ತಿಗತ್ತಿದ್ದು ಬೋ ದ್ವಡ್ಡ ಇಸ್ಯ ಯೇನಲ್ಲ. ಅದು ವೋದ್ರೆ, ಕತ್ತೆಬಾಲ... ಮುಖ್ಯವಾಗಿ ನಂಗೆ ಬಂದ ತೊಂದರೆ ಅಂದ್ರೆ, ನನ್ನ ಕ್ವಟ್ಟಿಗೆ ಇಬ್ಬಾಗಾಗಿ ಕಿಕ್ಕಿಂದಾ ಪಟ್ಟಣಾದ್ದು!... ಅದೂ ವೋಗ್ಲಿ ಅಂದೆ, ನಮ್ಮವ್ವಂಗೆ ಕರೆ ಅಸೀನ ಗಂಜಳ ತಪೋಗಿ, ನಾ ನಿಚ್ಚ ಅವಳಿಂದ ಸಾಪಳ ಕ್ಯಾಳಬೇಕಾಗಿ ಬಂದಿರಾದು!- 'ಲೋ ಅಡವಿ, ನೀ ಬೋ ಹೇಳು ಇಸುಗ ಕನೋ. ಹೀನ ಹೀನ, ನಿಂಗೇನೂ ಕೇಡು ಬಂದಿತ್ತು, ಅವಳ ಕಡೆ ತೊಪ್ಪೆ ಗೋರಕ್ಕೆ?.... ಅವಳ ಈಟು ತೊಪ್ಪಿಂದ ಯೇನಾರ ಉಪ್ಪರೆ ಯೇರುಸ್ತಿದ್ಯ?... ಈಗ ಕ್ವಾಡು, ನಿನ್ನ ಅಡಾಸಿಂದ ಗಂಟು ನಂಟು ಯೆಡೂ ಕಳಕಂಡೆ!?... ಅವ್ವನ ಮಾತ ಕ್ಯಾಳಿ ಕ್ಯಾಳಿ, ನಂಗಂತೂ ಜೀವಣಾನೆ ರೋಸೋಗದೆ ಕವ್ವ. ನಮ್ಮ ಕ್ವಿಟ್ಟಿಗೇಲಿ ನೀ ಕಂಡಿರೋವಂಗೆ ದನ ಕಟ್ಟಿದ ಮ್ಯಾಗೆ ವಳೀಕೆ ಕಾಲಿಡಕ್ಕೂ ಜಾಗ ಇಲ್ಲ.... ಮೊನ್ನೆ ಯೇನಾಯ್ತು ಅಂತೀಯೆ. ನಮ್ಮ ಗೌರಿ ಗೋವು ಆಕಿರೊ ಕೆಂದಗರ ಇಲ್ವ ನಾನು ಎತ್ತುಗಳ ಗೊಂದಲಕೇಲಿ ಇಟ್ಟಾಡ್ತಿದ್ದ ನೆಲ್ಲುಲ್ಲು ಸರಿ ಪಡಿಸ್ತಾ ಇದೆ, ಆ ಕೆಂದಗರ ಅದ್ಯಾವ ಮಾಯದಲ್ಲೋ ಬಂದು ಗುದ್ದು ಬುಡಾದ? - ಅಪಾಯ ಸ್ಥಳಕ್ಕೆ ಗುದ್ದು ಬುಡುಕಟ್ಲ. ಇನ್ನೊಸಿ ಜೋಗ್ನಿಂದ ಗುದ್ದಿದ್ರೆ ನನ್ನ ಪ್ರಾಣವೆ ವೋಂಟೋಗಬೇಕು!”... ಇದೆಲ್ಲ ಗ್ಯಾಪನಾಗಿ, ಮೊಟ್ಟೆ ವಳುಗೆಲ್ಲ ತೊಳಿಸಿದಂಗಾಯ್ತು, ಬಿಸಲ್ಪ ಜಳ ಈಗೊಸಿ ಕಮ್ಮಿಯಾದಂಗಿತ್ತು. ತಣ್ಣಗಿರೊ ಗಾಳಿ ಬೀಸಕ್ಕೂ ಮುಟ್ಟಿಕತ್ತು. ಆದ್ರೆ ಲಕ್ಕನ್ನ ವಳಗಡೆ ತಪ ಕಾಳಿ ಚ್ಚಾಗಿ ಉರೀತಿತ್ತು. ಕತ್ತಾಗೊವರೂ ಅಲ್ಲೇ ಕುಂತಿದ್ದ... ಕತ್ತಲು ಪೂರಾ ಕವುಚಿಗಂಡಾಗ, ಲಕ್ಕ ಅಲ್ಲಿಂದೆದ್ದ. ನಿಧಾನ್ವಾಗಿ ನಡದು ತಮ್ಮ ಗುಡ್ಡ ಸೇರ. ಆಟೊತ್ತಿಗಾಗ್ಲೆ, ಸಿವುನಿ ಗುಡ್ಡ ವಳಗೆ ದೀವಿಗೆ ಕತ್ತಿಸಿದ್ದು. ಅಯ್ಯ, ಅವ್ವ ಯಾರೂ ಇನ್ನೂ