________________
ಸಮಗ್ರ ಕಾದಂಬರಿಗಳು ೩೧೩ ರುಕ್ಕಿಣಿಯ ಬಗ್ಗೆ ಸದಭಿಪ್ರಾಯವಿರದ ಸಾವಿತ್ರಿ, ರುಕ್ಕಿಣಿ ಅಡುಗೆ ಕೋಣೆಯಲ್ಲಿರುವಾಗ ಅವಳಿಗೆ ಕೆಳಿಸಲೆಂದೇ ತನ್ನ ಗಂಡನ ಸಂಗಡ “ಹೀಗಾಗತ್ತೆ ಅಂತಾನೆ, ಆಗಲೆ ಅವಳ ಮಂಡೆ ಬೋಳಿಸಿ ಅಂತಿದ್ದದ್ದು ನಾನು. ಆಗ ನನ್ನ ಮಾತಿಗೆ ನೀವು ಗಮನಕೊಡಲಿಲ್ಲ. ಈಗ ಅವಳ ಸಂಬಧೀಕರಾದ ನಮಗೂ ಕೂಡ ಎಂಥಾ ಕೆಟ್ಟ ಹೆಸರು, ನೋಡಿ, ನಾಳೆ ಶ್ಯಾನುಭೋಗರ ಮನೆಗೆ ಹೆಣ್ಣು ತೋರಿಸಲು ಹೋದಾಗ, ಅವರಲ್ಲಿ ಈ ನೆಪ ಹೂಡಿ, ಈ ಮಲಿನಗೊಂಡ ಮನೆ ಹೆಣ್ಣನ್ನು ನಾವು ತರೋಲ್ಲ ಅಂದರೆ ಏನು ಮಾಡೋಣ?- ಇಲ್ಲಿಗೆ ಬಂದಾಗಿನಿಂದಲೂ ಇದೇ ಚಿಂತೆ ನನ್ನೊಳಗೆ ಅವಲಕ್ಕೆ ಕುಟ್ಟಿದ ಹಾಗೆ ಕುಟ್ಟುತಾ ಇದೆ” ಎಂದು ಕೃಷ್ಣಶಾಸ್ತ್ರಿಗಳು ಮನೆಯಲ್ಲಿಲ್ಲದ ವೇಳೆಯಲ್ಲಿ ತನ್ನ ದನಿಯೆತ್ತಿರಿಸ ಹೇಳಿದ್ದಳು.”; ಇದೇ ಸಾವಿನ ಮಗಳನ್ನು ರುದ್ರಪಟ್ಟಣವ ಹೊಳೆಯ ಆಚೆ ದಡದ ತೋಪಿನಲ್ಲಿ ಇವರ ಪುಂಡ ಮಗ ಶೇಷನ ಪೋಲಿ ಪಟಾಲಮ್ಮು ಬಲಾತ್ಕಾರದಿಂದ ಕೆಡಿಸಿದಾಗ, ತಾನು ಅವಳಿಗೆ ಬೆಂಬಲವಾಗಿ ನಿಂತದ್ದನ್ನು ಸಾತು ಇಷ್ಟು ಜಾಗ್ರತೆ ಮರೆತಳೆ?” ಎಂದು ರುಕ್ಕಿಣಿಯು ಅಡಿಗೆ ಕೋಣೆಯಲ್ಲಿ ಅಚ್ಚರಿಪಡುತ್ತಿರುವಾಗ, “ಅಯ್ಯೋ, ಅವರ ಮನೆಯವರು ಹಾಗೇನಾರ ಆಕ್ಷೇಪಣೆ ಎತ್ತಿದರೆ, ನಮಗೂ ರುಕ್ಕೂಗೂ ಯಾವ ಸಂಬಂಧವೂ ಇಲ್ಲ. ಅವಳೀಗ ನಾಯಿ ಮುಟ್ಟಿದ ಮಡಿಕೆ. ಅದು ಇನ್ನು ನಮ್ಮ ಮನೆ ಹೊಸಿಲು ದಾಟಿ ಒಳಗೆ ಬರೋ ಹಾಗಿಲ್ಲ. ಆ ವಿಷಯ ನೀವ್ಯಾಕೆ ಚಿಂತೆ ಮಾಡ್ತೀರಿ?- ನಮ್ಮ ಹುಡುಗಿ ನಿಮಗೆ ಒಪ್ಪಿಗೆಯಾದರೆ ಸರಿ. ಆ ಗಯ್ಯಾಳಿ ವಿಚಾರಾನ ಈ ಶುಭಕಾರ್ಯಕ್ಕೆ ಬೆರಸೋದು ಬೇಡಿಹೀಗೆ ಹೇಳಿದರಾಯ್ತು!” ಎಂದು ತನ್ನೊಡನೆ ರಕ್ತ ಹಂಚಿ ಬಂದ ಅಶ್ವತ್ಥನೂ ಹೇಳಿದ್ದು. ರುಕ್ಕಿಣಿಯ ಕಣ್ಣಿನಿಂದ ನೀರು ಬಳಬಳ ಸುರಿಯುವಂತೆ ಮಾಡಿತು. ಇಷ್ಟು ಸಾಲದೆಂದು ತಮ್ಮ ಮನೆಗೆ ಬಂದಾಗಿನಿಂದಲೂ ತನ್ನಲ್ಲಿ ಹಿಂದಿನ ಸಲಿಗೆಯಿಂದ ವರ್ತಿಸದೆ ದೂರದೂರವಾಗೇ ನಡೆದುಕೊಳ್ಳುತ್ತಿದ್ದ ಜಾನಕಿ, ಗಂಡು ತನ್ನನ್ನು ಒಪ್ಪಿ, ವಿವಾಹ ಖಚಿತವಾಯಿತು ಎಂದೊಡನೆಯೆ ತನ್ನೊಡನೆ ಅವರಿಗೆ ಆಡುತ್ತಿದ್ದ ಒಂದು, ಅರ್ಧ ಮಾತನ್ನೂ ನಿಲ್ಲಿಸಿದಳು. ತಾನು ಕಾಲು ಜಾರಿದ ಹೆಂಗಸು, ಅವಳೆ ಮೇಲು ಎನ್ನುವ ರೀತಿ, ತುಂಬ ಸೊಕ್ಕಿನಿಂದ ಜಾನಕಿಯು ಮೆರೆಯುತ್ತಿದ್ದುದು ರುಕ್ಕಿಣಿಗೆ, ಸೋಜಿಗ ಹಾಗೂ ಮಹಾವೇದನೆಯನ್ನು ಏಕಕಾಲದಲ್ಲಿ ತಂದಿತು. ತಾನು ಅವಳ ಸಂಕಷ್ಟದ ವೇಳೆಯಲ್ಲಿ ಬಲಭುಜವಾಗಿ ನಿಂತು ಧೈರ್ಯ