ಪುಟ:ವೈಶಾಖ.pdf/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೨೭ ನಮ್ಮ ಸಕುನಿಕೊಪ್ಪಲೂ ಇದೆ, ಮರೀಬ್ಯಾಡ..... ನಿಮ್ಮಳ್ಳಿ ನ್ಯಾಯಸ್ತರು ಲಕ್ಕಮ್ಮ ಇಲ್ಲಿಂದ ದೂಡಬುಟ್ಟರೆ, ಅವಸ್ಥೆ ಬ್ಯಾರೆ ಕಡೆ ಜಾಗಾನೆ ಇಲ್ವ? ನಮ್ಮ ಕಬೀರ್‌ದಾಸು ಹೇಳ್ತಾರೆ, ಧಾನ್ ಧಾನ್ ಪರ್ ಲಿಕ್ಯಾ ಹೈ, ಖಾನೇವಾಲೇಕಾ ನಾಮ್. ಅಂದ್ರೆ ನಾವ್ ತಿಂತೀವಲ್ಲ ಅನ್ನದ ಅಗಳು, ಆ ಒಂದೊಂದು ಅಗಳ್ಳಲ್ಲೂ ತಿನನೊನ ಹೆಸರು ಬರೆದು ಬುಟ್ಟೆತೆ, ಅಂತಾವ... ಇದ್ಯೆ ಯಾಕೆ ಚಿಂತೆ ಮಾಡೋಕು ನೀವು?... ಮನಸ್ಸು ಕೈ ಬುಟ್ಟರೂ ಖುದಾ ಕೈ ಬುಟಕ್ಕಿಲ್ಲ....”ಅಂದೋರು, ಲಕ್ಕನ ಕಡೀಕೆ ತಿರುಗಿ - “ಕೇಳೋ ಲಕ್ಕ, ನೀನು ನನ್ನ ಸಿನೇಮಿತಗಾರ ಮಗ. ನಿನ್ನೆ ನಾನು ನಮ್ಮ ಕೊಪ್ಪಲು ಗಡಿ ಜಮೀನುದಾಗೆ ತಾವುಮಾಡಿಕೊಡ್ತೀನಿ. ಕರಿಯಮ್ಮೊ ನಾನೂವೆ ಅಷ್ಟೇ ಅಳದೂ ಸುರುದೂ ತೀರ್ಮಾನ ಮಾಡ್ಕಂಡು ಬಂದ್‌ಬುಟ್ಟಿದ್ದೀವಿ...... ನಮ್ಮ ಕೊಪ್ಪಲ ವೋಳಗಡೆ ಜಾಗ ಕ್ವಟ್ಟರೆ ನಿಮ್ಮ ಯಜಮಾನರು ನಮ್ಯಾಲೆ ಕತ್ತಿ ಮಸೀಬೌದು, ನಾವು ನಿಮ್ಮ ಪಕ್ಕದ ಕೊಪ್ಪಲೋರೆ ಅಲ್ವ?- ನಮ್ಮ ಕೊಪ್ಪಲ ಜಮೀನು ನಿಮ್ಮಳ್ಳಿ ಜಮೀನು ಒಂದಕ್ಕೊಂದು ತಾಡಿಸಿಕೊಂಡೆ ಅವಲ್ಲ!... ಈಗ ನಾನೊಂದು ಕೆಲ್ಸ ಮಾಡ್ತೀನಿ. ಲಕ್ಕನ ಕರಕೊಂಡೋಗಿ ಐತಲ್ಲ, ಈ ರಾತ್ರಿ ನಮ್ಮಟ್ಟಿನಲ್ಲಿ ಮನಗಿಸಿದ್ದು, ನಾಳೆ ಆಚೆ ನಮ್ಮ ಜಮೀನ ತಲೆಕೊಟ್ಟಲ್ಲಿ ಅವಸ್ಥೆ ಒಂದು ಜೋಪಡಿ ಹಾಕ್ಕೊಳಕ್ಕೆ ಸಾಮಾನು ಕೋಡ್ತೀನಿ. ಅದ್ರೆ ಬೇಕಾದ ಸರ, ನೊರೆಹುಲ್ಲು ಎಲ್ಲ ನನ್ನ ತಾವು ಅದೆ. ಸಾಲೆ ಬಂದರೆ, ನಮ್ಮ ಕರಿಯಪ್ಪ ಕೊಡ್ತಾನೆ. ಏನಂತೀ ಕರಿಯಪ್ಪ?” ಎಂದು ಕರಿಯಪ್ಪನತ್ತ ದ್ರುಸ್ಟಿ ಹರಿಸಿದ್ರು “ಅದ್ಯಾವ ಮಾ ಸುದ್ದಿ. ನಿಮ್ಮ ತಾವಳ ಸಾಮಾನು, ನಮ್ಮ ತಾವು ಎಲ್ಲಾನು ಸೇರಿಸಿದ್ರೆ ಒಂದಲ್ಲ ನಾಕು ಜೋಪಡಿ ಏಳಿಸೌದು. ಒಂದು ಜೋಪಡಿಗೆ ಸಾಮಾನು ವದಗಿಸೋದು ಯಾವ ಲೆಕ್ಕ, ತೆಗೀರಿ” ಎಂದು ಕರಿಯಪ್ಪನೂ ವಪ್ಪಿಗೆಯಿತ್ತ. ಗೋಸು ಸಾಬರು ತಮ್ಮ ಮಾತ ಮುಂದುವರಿಸಿದ್ದು: “ಸೈ, ಜೋಪಡಿ ಒಂದು ಲಡಿ ಆದ್ರೆ, ಲಕ್ಕ ಅಲ್ಲಿಂದ್ಯಂಡು, ನಮ್ಮ ಕೊಪ್ಪಲು ಹಂಗೇನೆ ಸುತ್ತಾಮುತ್ತಾ ಹಿರೋ ಹಳ್ಳಿಗೊಳಲ್ಲಿ ಕೂಲಿನಾಲಿ ಮಾಡಿ ಕಾಲ ಹಾಕ್ಲಿ-ಹುಟ್ಟಿದ ಸಿವ ಹುಲ್ಲು ಮೇಯಿಸಕ್ಕಿಲ್ಲ...” ಅವರು ಗಡ್ಡ ನೀವುತಿರೋ ಜತೆಜತ್ ಉದುರ ಈ ಮಾತು, ದಿಕ್ಕು ಕಾಣದೆ ಪರಿತಪಸ್ತ ಇದ್ದ ಆ ಗುಡ್ಡಿನ ವಳಗೆಲ್ಲ ದೈರ್ಯ ತುಂಬಿದೆ.