ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪೨ ವೈಶಾಖ ಒಬ್ಬೊಬ್ಬರೂ ತಮ್ಮತಮ್ಮಲ್ಲಿ ತರ್ಕವಿತರ್ಕಕ್ಕೆ ನಿಂತರು. ಅಲ್ಲಿ ನೆರೆದಿದ್ದವರೆಲ್ಲರಿಗಿಂತ ವಿಶ್ವೇಶ್ವರನಿಗೆ ಅತ್ಯಂತ ಸಮೀಪಬಂಧುವಾದ ಸುಬ್ರಹ್ಮಣ್ಯ, “ನೀವು ಹೀಗೆ ತರ್ಕ ಮಾಡ್ತಾ ನಿಂತಿರಿ. ನನಗೆ ಹೊಟ್ಟೆ ಚುರುಗುಟ್ಕಾ ಇದೆ. ನೆನ್ನೆ ರಾತ್ರಿ ನಮ್ಮ ಮನೇಲಿ ಒಂದಿಷ್ಟು ಅವಲಕ್ಕಿ ಉಪ್ಪಿಟ್ಟಿನ ಫಳಾರ ಮಾಡಿದ್ದು” ಎಂದು ಆ ಸ್ಥಳದಿಂದ ಹೊರಡಲು ಅನುವಾದ. ಆ ಕರ್ಮಕ್ಕೆ ಆತನೇ ಹೆಚ್ಚ ಭಾಧ್ಯನದುದರಿಂದ, “ಪೂರ್ತಿ ಮಾಡದೆ ಹೋಗಬೇಡಿ, ಸುಬ್ರಹ್ಮಣ್ಯ..... ಅದೂ ನಿನಗೂ ಶ್ರೇಯಸ್ಕರವಲ್ಲ, ನಮಗೂ ಶ್ರೇಯಸ್ಕರವಲ್ಲ” ಎಂದು ವೆಂಕಣ್ಣಜೋಯಿಸರು ಮೋಚಾಡಿದರು. “ಹಾಗಿದೆ, ಅವಳು ಪಾಪ, ಹೇಳಿದ ಹಾಗೆ ಹೇಳಲಿ, ನಾವೆಲ್ಲರೂ ಒಟ್ಟಿಗೆ ಹೇಳಿಬಿಟ್ಟು ಕರ್ಮ ಮುಗಿಸೋಣ. ಅದಕ್ಕೊಪ್ಪಿದರೇ ನಾನು ಇಲ್ಲಿರೋದು. ಇಲ್ಲದಿದ್ದರೆ, ಇಗೊ.....” ಎಂದು ಹೆಜ್ಜೆ ತೆಗೆದ, ಸುಬ್ರಹ್ಮಣ್ಯ. ಒಡನೆಯೇ ಜೋಯಿಸರು. “ಹೋಗಬೇಡವೋ ಮಹಾರಾಯ..... ನಿಲ್ಲ, ನಿಲ್ಲು ನಿನ್ನಿಷಪ್ರಕಾರವೇ ಮಾಡೋಣ... ಕಲಿಕಾಲ, ಎಲ್ಲವೂ ಸೂಕ್ಷಕ್ಕೆ ಬಂದೋಯ್ತು.....” ಎಂದು ಸೋತರು. “ಅಪದ್ಧರ್ಮ ಅಂತ ಮಾಡಿಬಿಡಿ. ಎಲ್ಲ ಸರಿಹೋಗುತ್ತೆ” ಎಂದು ಹೇಳುತ್ತ, ಸುಬ್ರಹ್ಮಣ್ಯನು ಹಿಂದಕ್ಕೆ ಬಂದ. ತರುವಾಯ ಎಲ್ಲರೂ ಒಟ್ಟಾಗಿ ಕೂಡಿ, ಆ ವಾಕ್ಯವನ್ನು ಹೇಳಿ ಮುಗಿಸಿದರು. ಅವನ ಜೊತೆಯಲ್ಲಿ ಸಾಕಿ ಸುಮ್ಮನೆ ಬಾಯಿ ಕುಣಿಸುತ್ತ ಪಿಟಿಪಿಟಿ ಎನ್ನುತ್ತಿದ್ದಳು! ರುಕ್ಕಿಣಿಯನ್ನು ಮನೆ ಕೊಟ್ಟಿಗೆ ಹಿತ್ತಲು ಎಲ್ಲೂ ಕಾಣದೆ, ಕೃಷ್ಣಶಾಸ್ತ್ರಿಗಳು ಕಂಗಾಲಾದರು. ಮನೆಯ ಹಿಂದಿನ ಬಾಗಿಲು ತೆರೆದಿರುವುದನ್ನು ನೋಡಿದರೆ, ಅವಳು ಮುಂದಿನ ಬಗಿಲಿನಿಂದ ಹೋದಲ್ಲಿ ಯಾರ ಕಣ್ಣಿಗಾದರೂ ಬೀಳಬಹುದೆಂದು ಎಣಿಸಿ, ಈ ಬಾಗಿಲಿನಿಂದಲೇ ಹೊರಟುಹೋಗಿರಬೇಕು!... ಶಾಸ್ತಿಗಳಿಗೆ ಮುನ್ನಾದಿನದ ನಡತೆ ಈಗ ಅರ್ಥವಾಗುತ್ತಿತು: ವಾರಕ್ಕೊಮ್ಮೆ ಸರಸಿಗೆ ಅಭ್ಯಂಗನಸ್ನಾನ ಮಾಡಿಸುತ್ತಿದ್ದಳು ನಾಲ್ವೇ