ಪುಟ:ವೈಶಾಖ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦ ವೈಶಾಖ ಎತ್ತಿಗಳೊ ತರ ಗೋಣಿತಾಟ ಜ್ವಾಕೆಯಾಗಿ ತತ್ತುಗಂಡು ಮಠದ ಇಂದುಗಡೀಕೆ ದ್ವಾದರು. ಲಕ್ಕಂಗೆ ಯಾಕೊ ದಾವಾಗಿ ಮಾದಮ್ಮ ಒಂದೇಟು ಮಜ್ಜಿಗೇನಾರ ಕೇಳುವಾಂತ ಲಕ್ಕನೂವೆ ಅವ್ರ ಹಿಂದೆ ಹಿಂಯ ವೋದ. ಕ್ವಾಣೇವಳೀಕೆ ಬಿರಬಿರೆ ವೋದ ಗೌಡ್ರು, ಆ ಗೋಣಿತಾಟ ಮಾದಮ್ಮ ಕಯ್ಯಗಾಕಿ, “ಜ್ವಾಪಾನ-ಮಠಕ್ಕೆ ಯಾಲ್ಯಾರೋ ಬತ್ತಿದ್ದಾರೆ. ಯಾರೂ ವಾಸನೆ ಬೀಳದಂಗೆ, ವಕ್ಕಡೆ ಮುಚ್ಚಿಡು. ನಂಚಿಕಳಾಕೆ ಒಂದೇಟು ಅಪ್ಪಳ, ಸೆಂಡಿಗೆ ಕರಿಡಿಡು, ರಾತ್ರಿಗೆ ಮಠದಲ್ಲಿ ಎಲ್ಲಾರು ಮನಗಿದ ಮ್ಯಾಗೆ ನಂಗೂ ನಿಂಗೂ ಭೋಗ...” ಅಂದದ್ದು ಲಕ್ಕನ ಕಿವಿಗೂ ಬಿದ್ದು, ಇನ್ನು ಅಲ್ಲಿ ನಿಲ್ಲೋದು ತರವಲ್ಲಾಂತ ಅಲ್ಲಿಂದ ಕಾಲ್ಕಿತ್ತು ಮಠದ ಮುಂಚೋರೆಗೆ ಬಂದು ಮೆಟ್ಟಿಲು ಮ್ಯಾಲ್ಗಡೆ ಕುಂತ. ವಸಿ ವ್ಯಾಲ್ಯದಲ್ಲೆ ಮಾದಮ್ಮ ಊಾಣೆಯಿಂದ ಸುಮ್ಮಾನದಿಂದ ಬಂದ ಗೌಡ್ರು, “ನೀನ್ನಿಂದ ಬೊ ಉಪಕಾರಾಯ್ತು ಕನೋ, ಲಕ್ಕ”- ಬೆನ್ನುತಟ್ಟಿ “ಮಾತ್ರ ಈ ಚಮಾಚಾಲ್ವ ಯಾರ ಕುಟ್ಟೂವೆ ಕವ್‌ ಕಿವ್ ಅನ್ನಬಾರು, ಗ್ವತ್ತಾಯ್ತಮ್ಮ?” ಅಂದ, “ಮುಟ್ಟುಸ್ಕಂಡಲ್ಲ ಗೌಡ್ರೆ?” -ಲಕ್ಕ ಎದರೆದರಿ ಕೇಳಿದ್ರೆ, “ಅಷ್ಟೇನು ಪರ್ವಿಲ್ಲ ಬುಡು. ಕಲ್ಕಿ ತಾನೆ ಮುಟ್ಟಿದ್ದು, ತೋಳಕಂಡರಾಯ್ತು” -ಅನ್ನಾದ? ನಂಜೇಗೌಡರ ಈ ಚಾಷ್ಟ್ರದಿಂದ ಇದಕೂ ಇಂದುಕೆ ನಡೆದಿದ್ದ ಒಂದು ಪರಸಂಗ ಗೆಪ್ಪಾಗಿ, ತನ್ನ ಹೆಗಳ ಮ್ಯಾಲಿದ್ದ ಕೆಂಪನೆ ಚೌಕಳಿ ವಸ್ತ್ರದಿಂದ ಬಾಯಿ ಮುಚ್ಚಂಡು, ವಳುಖ್ಯಿಂದ ಪಿಡೀತಿದ್ದ ನಗಾವ ತಡೆಯಕ್ಕೆ ಕಸರತ್ತು ಮಾಡ್ತಿದ್ದ... ಲಕ್ಕನ ಪುಣ್ಯಕ್ಕೆ ಸಿವಪಾದ ಪ್ಪಾರೆ ಏನೋ ಬೇಕಾಗಿ “ನಂಜೇಗೌಡ...ನಂಜೇಗೌಡ...” ಅಂತ ಕೂಗಿದು, “ಬುದ್ದಿಯೋರು ಕರೀತಾ ಅವೆ, ಅದೇನು ಕೇಳಿಕಂಬತ್ತೀನಿ" -ನಂಜೇಗೌಡರು ಮಠದ ವಳಗಡೀಕೆ ನುಗ್ಗಿದ್ರು ಗೌಡ್ರೆದುರೆ ಮೊಟ್ಟೆ ವಳೀಕೆ ಅದಮಿ ಎಂಗೊ ತಡಕಂಡಿದ್ದ ಲಕ್ಕನ ನಗ, ಕಟ್ಟೆ ಒಡದು ಉಕ್ಕುಕ್ಕೆ ಬಂತು. ನಗಾಡ್ತಿದ್ದಂಗೆ ಆ ಪರಸಂಗದ ಕಟ್ಟೂ ಬಿಚ್ಚಿಗತ್ತು: ದರುಮನಳ್ಳಿ ಸಿವಾಚಾರದೋರು ಎಲ್ಲರೂವೆ ಜಪ್ಪಯ್ಯನ ಮಠಕೆ ನಡಕೊತ್ತಿರನಿಲ್ಲ. ಗ್ರಾಮದ ಏಳೆಂಟು ಇಸಮುಗಳೆ ಕಥೆ ಮಠದ ಅಯ್ಯನೋರೆ ಗುರುಗಳು...ಒಂದು ದಪ ಏನಾಯ್ತಪ್ಪಾಂದ್ರೆ-ಕಡ್ಲಿಮಠದ ಅಯ್ಯನೋರು ದರುಮನಳ್ಳಿ ಒಬ್ಬ ಭಕ್ತರಟ್ಟಿಗೆ ಭಿನ್ನಕ್ಕೆ ಬಂದಿದ್ದು, ತಾನ ಮುಗುಸಿ, ಮಡಿ