ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೪೭ ವೊರಳಿದ್ದೂ. ಸಾಬರ ವೊಲ ಅವಳು ಕಾಣದೇ ಇದ್ದದ್ದಾ?... ಕೆಲವು ಸಾಲ್ನಲ್ಲಿ ಅವರೊಲದಲ್ಲಿ ಕಳೆ ಕೀಳಕ್ಕೆ ಅವಳೂ ವೋದ್ದುಂಟು. ಆದ್ರೆ ಗೋಸು ಸಾಬ್ರ ವೊಲದ ತವರೀಲಿ ಬಡಗಳಾಗಿ ಎದ್ದಿದ್ದ ಲಕ್ಕನ ಗುಡ್ಡಲ್ಲಾಗಿ ಸುತ್ನ ವೊಲದಲ್ಲಾಗಿ ಮಗನ್ನ ಕಾಣೆ ನಿರಾಸಿಂದ ಬೆಂದೋದ್ದಲು. ಮಗ ಕಟ್ಟಿದ್ದ ಗುಡ್ಡ ನೆರಕೆಯ ಬರಲ್ಲೂ ಕಿಂಡಿಂದ ಪರಿಕ್ಷೆ ಮಡಿದ್ದು. ಎಂಗೋ ಕಂದನಿಗೆ ನಿಲ್ಲಕೆ ಒಂದು ನೆಲೆ ಆಯ್ತಂತ ಸಮಾಧಾನ ಪಟ್ಟುಕಂಡ್ಲು. ಆದರೂವೆ ಮೊಗ ಸಿಕ್ಕನಿಲ್ಲವಲ್ಲ. ಅಂತ ಎದೆ ಕುದಿತ ಬತ್ತಾ ಇಾಗ, ಗೋಸುಸಾಬ್ರ ಕಿರಿಹೈದ ಬುಡನ್ ಸಿಕ್ತು. ಅವನ್ನ ಇಚಾರಿಸಚ್ಚಾಗ, ಲಕ್ಕ ಗೋಸು ಸಾಬ್ರ ಇತ್ತಲ ಬೇಲಿ ಕಟ್ಟಕ್ಕೆ ಮುನಿಸೋಡೆಮುಳ್ಳನೊ, ತಣಚಿಮುಳ್ಳನೊ, ಗೆಜ್ಜಲುಮುಳ್ಳನೊ, ಕಾರೆ ಮುಳ್ಳನೊ, ಚೊಟ್ಟಿಮುಳ್ಳನೊ ಯೇರಿಕಂಡು ಬರಕ್ಕೆ ಗಾಡಿ ಕಟ್ಟಿಗಂಡೊಗ ಮುದುಕಿ- ಅಂತ ಒಂದೇ ಉಸಿರೆ ಯೇಳಿ ಫೇರಿ ಕಿತ್ತಿತ್ತು. ಇನ್ನಾಕೆ ಕಾಯೋದು, ಕಾಡ್ನಿಂದ ಅವು ಬರೋದು ಇನ್ನೂ ಏಡೋತ್ತಾದದೊ ಏನೊ, ಅಂತ ಊರಿಗೆ ಮೊಕ ತಿರುಗ್ಗಿ ನಡೆಯಕ್ಕೆ ಮುಟ್ಟಿಕಂಡ್ಲು. ಬೆಟ್ಟದ ಕಂಡಿಂದ ಕತ್ತಲು ವೊಲಗಳ ಮ್ಯಲೆ ಆಗ್ಗೆ ದಾಪುಗಾಲು ಆಕಕ್ಕೆ ಸುರುಮಾಡಿತ್ತು. ಈಚೀಚೆ ಕಲ್ಯಾಣಿಗೆ ದಿಟ್ಟಿಯೂ ಸುದ್ಧವಾಗಿಲ್ಲ. ಕತ್ತಲು ಕವೀತು ಅಂದರೆ, ಚೋಟು ದೂರಕೂ ನೆಟ್ಟಗೆ ಕಾಣಕ್ಕಿಲ್ಲ. ದಿಸ್ಟಿನೆಟ್ಟು ಕ್ವಾಡಕ್ಕೆ ಮೋದರೆ ಕಣ್ಣಲ್ಲಿ ನೀರು ಕಿತ್ತುಗತ್ತದೆ.... ಆದರೂವೆ ತಂದ ರೊಟ್ಟಿ ಮಗನ ವೊಟ್ಟೆಗೆ ಸೇನಿಲ್ಲವಲ್ಲಾಂತ ಯ..... ತಲೆ ಬೊಗ್ಗಿಸಿ, ಇದೇ ಯೋಚೌಲಿ, ಅವಳು ಸಾಗ್ತಾ ಇಾಗ, ಯಾವುದೊ ನಾಯಿ ಬೊಗಳ ಅಂಗಾಯ್ತು..... ಹೌದು ಈ ನಾಯಿ?ನಮ್ಮ ಬೊಡ್ಡನಂಗೆ ಬೊಗಳ ಇಲ್ಲವ?... ಒಂದು ಗಳಿಗೆ ಅಲಲೇ ನಿಂತು ಆಲಿಸಿದ್ದು.... ಬೊಡ್ಡನೆ!.... ಅದರಲ್ಲಿ ಯವ ಸಂಸಯ?... ಈಟೋತ್ನಲ್ಲಿ ಒಚಿಟಿನಾಯಿ, ಈ ಬೆಟ್ಟದ ಸಾಲಿಗೆ ಬಂದ, ಅದು ಜೀವಸೈತ ಊರು ಸೇರಾನ ಅಂದರೇನು? ಅದು ಸೀದ ಕಿರುಬನ ವೊಟ್ಟೆಗೆ ವೋಗದೇಯ..... ಕಲ್ಯಣಿ ಇಂಗೆ ಆಲೋಚ್ಛೆ ಮಾಡ್ತ ನಿಂತಿರೋ ವ್ಯಾಲ್ಯದಲ್ಲಿ, ಬೊಡ್ಡ ಬೊಗಳ್ತಾನೆ ಬಂದು, ಅವಳ ಗುರು ಕಾಲು ನೆಕ್ತಾ ನಿಂತುಗತ್ತು, ಅದ್ರ ಇಂದುಗುಟ್ಟ ಲಕ್ಕನೂ ಮೂಡಿದ. ಕಲ್ಯಾಣಿಗೆ ಕಡೆಗಾದರೂ ಮಗ ಬಂದಲ್ಲ ಅಂತ ಕುಸಿ ಆಯ್ತು. ಅವ್ವನ್ನ ಕಂಡು ಲಕ್ಕಂಗೂ ಪಂಚಬಕ್ಸಪರಮಾನ್ನ ಉಂಡೋಟು ಸಂತೋಸ ಆಯ್ತು..... - “ಊರಿನೋಗ್ಗೆ ಎದುರದೇನೆ, ಅವರ ಕಣ್ಣ ತೆಪ್ಪುಸಿ, ಅದೆಂಗವ್ವ ಬಂದೆ?” ಕೇಳ.