ಪುಟ:ವೈಶಾಖ.pdf/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು -ಈಗ ದ್ಯಾವಾಜಿ ಮತೇ ನಿಜ ಆಯ್ತಲ್ಲ?... ನನ್ನವ್ವ ಸಾಕಿ, ಸಲಯಿದ್ದಕ್ಕೆ, ಅವಳ ಕಡೆಗಾಲಲ್ಲಿ ನನ್ನಿಂದ ಅವುಳು ಯಾವ ಸುಕ ಕಂಡು?.... ಸುಕ ಕೂಡದಿದ್ರೆ ಸಮಾಸು, ನನ್ನಿಂದ ಅವಳು ವಳುಗೆ ಕೊರಗೊ ಅಂಗಾಯ್ತಲ್ಲ?... ಅವನ ವೊಟ್ಟೆಗೆ ಮೊಕ ಅಂತು ಲಕ್ಕ ಕಣ್ಣೀರಿನಿಂದ್ದೆ ಅವನ ವೊಟ್ಟೆ ತೊಳಿತಿದ್ದ, ಅಂಗಿರುವಾಗ ಅವ್ರ ಮನಸು ಇಂದ್ರೆ ಇಂದಕೋಯ್ತು : ಲಕ್ಕ ಚಿಕ್ಕೋನಾಗಿದ್ದಾಗ ಮೈಮ್ಯಾಲೆ ಬಟ್ಟೆ ಆಕದೆ ಗೊಣ್ಣೆ ಸುರುಸ್ತ ನಿಂತಿದ್ದ. ಇದ ದ್ವಾವಾಜಮ್ಮ ಕ್ವಾಡಿ, - “ಕಲ್ಯಾಣಿ, ಕಲ್ಯಾಣಿ-ಬಾರೆ ಇಲ್ಲಿ ಕ್ವಾಡು ನಿನ್ನ ಹೈದ ಇಲ್ಲಿ ಜಿನ್ನಯ್ಯವಾಗಿ ನಿಂತವೆ, ಆ ಸವಣಪ್ಪನ ಕ್ವಾಡಕ್ಕೆ ದುಡ್ಡು ಖರ್ಚುಮಾಡ್ಕಂಡು ಆ ಸವಣಬೆಳ್ಕೊಳಕ್ಕೆ ಯಾಕವ್ವ ವೋಗಬೇಕು?- ಈಗ ಭೂಪತಿ ಕಿಡ್ನಿ ದುರಸ್ತ ಆದಮ್ಯಾಲೆ ಮುಗೀತು, ಕೈಲಾಸ ಮೂರೇ ಗೇಣು!” ಅಂದಿದ್ದು. ಅವ್ವ ಗುಡ್ಡಲು ವಳುಖ್ಯಿಂದ ಬಂದೋಳು, ಗುಡ್ಡ ಮೋರೀಕೆ ಬೆತ್ತಾನು ಬೆತ್ತಲೆ ಹಂಚಿಕಡ್ಡಿಗೆ ಕಾಚೆಕಾಯಿ ಸಿಕ್ಕಿಸಿ, ದೂರದೂರೆ ವೋಗೋವಂಗೆ ಎಸೀತಿದ್ದ ನಾಕು ವರುಸದ ಮಗನ್ನ ನಗಡ ತತ್ತಿಗಂಡು, “ಏಡು ಜಿನಕೊಂದು ಬಟ್ಟೆ ಈ ಕೊಳಕ ಹೈದಂಗೆ ದಿರುಸು ಅವಣಿಸಿಕ್ಕೆ ನವೇನು ಕುಬೇರ ಮೊಮ್ಮಕ್ತ?” ಅಂದು, ಗುಡ್ಡ ವಳೀಕೋಗಿದ್ದಲು. ಅವ್ವ ಇಂಗೆ ಆಗಾಗ ಮಾಡ್ತಾನೆ ಇದ್ದು.... ಇದೆ ಯೋಚೋಲಿ, ಅದೇಟೊತ್ತು ಅವ್ವನ ಎಣಾವ ತಬ್ಬಿದಂಗೇ ನಿಂತಿದ್ದನೋ ತಿಳೀದು!... ಅಪಾರ ಕಾಲ ಕಳುದಮ್ಯಾಲೆ, ಮೆತ್ತಗೆ ಅವನ ವೊಟ್ಟಿಂದ ಮೊಕ ತೆಗುದ... ಏಟೊತ್ತು ತಬ್ಬಿಕಂಡಿದ್ರೆ ತಾನೆ, ವೊಂಟೋದ ಜೀವ ಮತ್ತೆ ಮರಳಿ ಬಂದತ?- ಅಂತ ಸಮಾದಾನ ತಂದುಕಂಡು, ಪುನಾ ಕಲ್ಲುಗಳ ಒಂದೊಂದಾಗಿ ಎತ್ತಿ ಎತ್ತಿ ಅವ್ವನ ಎಣದ ಸುತ್ತ ಪರಿಸಕ್ಕೆ ಆರಂಭಿಸ್ಥ...

  • ಸಿವುನಿ ಮೊಗ ತತ್ತುಗಂಡು ದ್ವಾವಾಜಿ ಜ್ವತೆ ಸುಮಾರು ವೊತ್ನಲ್ಲೆ ಬಂದು, ಅಣ್ಣ ಅವ್ವನ ಸವಕೆ ಕಲ್ಲುಸ್ಯಾವೆ ಮಾಡಾದ್ದೇ ಕಣ್ಣೀರು ಕಚ್ಚಿ ಕ್ವಾಡ್ತಾ ನಿಂತಿದ್ದಲು, ವೊಲಗೇರ ಇನ್ನೂ ಕೆಲವು ಗಂಡಸರು ಎಂಗಸರೂವೆ ಬಂದು ನಿಂತು ಕಂಡು ಕ್ವಾಡ್ತಿದ್ರು, ಆ ಕಡೆ ಕೆಲುಸ್ಯೆ ಬಂದ ಊರ ಬಾಕಿ ಜನವೊನೆ ಅಂಗೆ ನ್ಯಾಡ ನಿಂತುಕಂಡು, ನಂಜೇಗೌಡರೂವೆ ತಮ್ಮ ಹೊಲಕೆ ಬಂದು ನಿಂತುಕಂಡಿದ್ರಿಂದ, ಸಿವುನಿ ಅಣ್ಣನ ಸಮೀಪೈ ವೋಗಕ್ಕೆ ಅಡಚ್ಛಗಿ ದೂರದಿಂದ್ದೆ