ಪುಟ:ವೈಶಾಖ.pdf/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೫೯ ಪ್ರಮಾಣವಾಗಿತ್ತು. “ಆಗ ನಂಗೆ ಗ್ವತ್ತೇ ಅಗ್ನಿಲ್ಲ ಕನತ್ತೆ, ಅವ್ವನ ಕಂಕುಳಲ್ಲಿ ಎದ್ದ ಗಂಟ ಕುರ ಅಂದುಕಂಡು ಸುಮ್ಮನಾಗಿಬುಟ್ಟೆ” ಎಂದು ದ್ಯಾವಾಜಿಯ ಸಂಗಡ ತೋಡಿಕೊಂಡಳು. ಅದಕ್ಕೆ ದ್ಯಾವಾಜಿ “ಗ್ವತ್ತಾಗಿದ್ರೆ ತಾನೆ ನೀ ಯೇನು ಮಾಡೋಹಂಗಿದೆ?” ಎಂದು ಕೇಳಿದವಳು, “ಈ ಮಾತ ಬ್ಯಾರೆಯೋರ ಬಾಯೆ ಆಕಬ್ಯಾಡ. ಆಮ್ಯಾಕೆ ನಾವು ಊರು ಬುಟ್ಟು ದೌಡು ವೋಡೀಬೇಕಾಯ್ತದೆ. ಅದ್ಯಾರು ಆ ಫಜೀತಿ ಅತ್ತೂರು? ಸಾಯೊದಿದ್ರೆ, ಪಳೇಗು ಬಂದೆ ಸಾಯಬೇಕ?ಭ್ರಾಂತು, ಬ್ರಾಂತು....” ಎಂದು ಅಟಕಾಯಿಸಿದಳು. ಮುಂದಿನ ದಿನಗಳಲ್ಲಿ ಸಾಮಾನ್ಯವಾಗಿ ಊರಿನ ಎಲ್ಲ ಕೇರಿಗಳಲ್ಲೂ ಇಲಿಗಳು ಮೇಲಿಂದಮೇಲೆಸತ್ತು ಊರಿನವರನ್ನುರ ದಿಗಿಲುಗೊಳಿಸಿದ್ದವು. ಯಾರದೊ ಹಟ್ಟಿಯ ತೊಂಬೆಯಲ್ಲಿ ಒಂದು ಇಲಿ ಸತ್ತುಬಿದ್ದಿತ್ತಂತೆ!- “ತಿನ್ನೊ ಕಾಳಿಗೂ ಬಂದು ಬಿತ್ತಲ್ಲ, ಹಾಳುಗೇರೀದು” ಎಂದು ಆ ಮನೆ ಯಜಮಾನಿತಿ ಹುಯಿಲೆಬ್ಬಿಸಿದ್ದಳಂತೆ! ಬೇರೆ ಯಾರದೊ ಹಟ್ಟಿಯಲ್ಲಿ ಮೇಲಿನಿಂದ ಉಣ್ಣುವ ತಣಿಗೆಗೇ ಬಿದ್ದು, ಆವೋಪ್ಪತ್ತಿನ ಊಟವನ್ನು ಕಿತ್ತುಹಾಕಿತ್ತಂತೆ! ಬಾವಿಕಟ್ಟೆಯಲ್ಲಿ ಒಬ್ಬಳು ಬಾವಿಗೆ ಚರಿಗೆ ಬಿಟ್ಟು ನೀರು ಸೇದುವಾಗ ಬಾವಿಕಟ್ಟೆ ಗೂಡಿಗೆ ಕಾಲಿಟ್ಟರೆ, ಏನೋ ಪಾದಕ್ಕೆ ಮೆತ್ತಗೆ ನುಣುಪಗಿ ಸಿಕ್ಕಿ ಪಿಚಕ್ ಅಂತ ಎಂಥದೊ ಕಡೆದಂತಾಗಿ, ಅವಳು ಹೆದರಿ, ತನ್ನ ಪಾದವನ್ನು ಹಿಂದಕ್ಕೆ ತೆಗೆದು ನೋಡಿದರೆ, ಅವಳು ಗೂಡಿನಲ್ಲಿ ಒದ್ದಾಡ ಕೂತಿದ್ದ ಒಂದು ಇಲ್ಯನ್ನು ಫನ ಮಾಡಿ, ಅವಳ ಪಾದಕ್ಕೆಲ್ಲ ಅದರ ರಕ್ತ ಮೆತ್ತಿತ್ತಂತೆ! ಮಕ್ಕಳು ಶಾಲೆಗೆ ಹೋಗುವಾಗ ದಾರಿಯಲ್ಲಿ ಅವರ ಮುಂದೆ ಬಂದು, ಸುತ್ತಿಸುತ್ತಿ ರಕ್ತಕಾರಿ ಬೀಳುತ್ತಿದ್ದ ಇಲಿಗಳನ್ನು ಆ ಮಕ್ಕಳು ಚೆಂಡಾಡುವ ಹಾಗೆ ಅವನ್ನು ಒದ್ದು ಬೇಲಿಗೆ ತಳ್ಳುತ್ತಿದ್ದರಂತೆ. ಅವರು ಹಾಗೆ ಮಾಡುವುದನ್ನು ಕಂಡಾಗ ಉಪಾದ್ಯರು ಆ ಹುಡುಗರನ್ನು ಬೈದು, “ಪಾದ್ದು ಮುಂಡೆವ. ನಿಮಗೆ ಸಾಯಬೇಕು ಎಂದು ಆಸೆಯೇನು?... ಇವು ಪ್ಲೇಗು ತಗಲಿರುವ ಇಲಿಗಳು!- ಇವನ್ನ ಮುಟ್ಟಿದರೆ ನಿಮಗೂ ಪ್ಲೇಗ್ ಗೆಡ್ಡ ಬಂದುಬಿಡುತ್ತೆ- ಹುಶಾರಾಗಿರಿ!” ಎಂದು ಹೆದರಿಸಿದರಂತೆ!” ಇನ್ನು ಮೇಲೆ ಈ ಇಲಿಗಳ ತಂಟೆಗೆ ಹೋಗಬೇಡಿ” ಎಂದು ಬುದ್ದಿವಾದ ಹೇಳಿದರಂತೆ!... ಊರಿನ ತುಂಬ ಇಂಥವೆ ಸುದ್ದಿ!- ಎಲ್ಲಾದರೂ ಸರಿ, ಒಬ್ಬರು ಇನ್ನೊಬ್ಬರನ್ನು ಸಂಧಿಸಿದಾಗ, ಊರಿನಲ್ಲಿ ಇಲಿಗಳು ಸಾಯುವ ಸುದ್ದಿಯಲ್ಲದೆ ಬೇರೆ ಮಾತೇ ಅವರ ನಡುವೆ ಸುಳಿಯುತ್ತಿರಲಿಲ್ಲ.